IGNOU Launch Masters In Astrology : ಇನ್ಮುಂದೆ ಇಗ್ನೋದಲ್ಲಿ ಜ್ಯೋತಿಷ್ಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಲಭ್ಯ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೌ) ಜ್ಯೋತಿಷ್ಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಅನ್ನು ಲಾಂಚ್ ಮಾಡಿದೆ. ಜ್ಯೋತಿಷ್ಯದಲ್ಲಿ ಆಸಕ್ತವುಳ್ಳವರು ದೂರಶಿಕ್ಷಣದ ಮೂಲಕ ಈ ಕೋರ್ಸ್ ಅನ್ನು ಅಧ್ಯಯನ ಮಾಡಬಹುದು ಎಂದು ತಿಳಿಸಿದೆ.

ಜ್ಯೋತಿಷ್ಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಲಾಂಚ್ ಮಾಡಿದ ಇಗ್ನೋ

ಈ ಕೋರ್ಸ್ ಅನ್ನು ಆಸ್ಟ್ರೋಲಜಿ -ಸ್ನಾತಕೋತ್ತರ ಪದವಿ (ಜ್ಯೋತಿಷ್ಯ) ಅಥವಾ MAJY ಎಂದು ಹೇಳಲಾಗುತ್ತದೆ. ಜ್ಯೋತಿಷ್ಯದ ವಿವಿಧ ಶಾಖೆಗಳ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಯಾರೆಲ್ಲಾ ಈ ಕೋರ್ಸ್ ಅಧ್ಯಯನ ಮಾಡಬಹುದು ?:

ಜ್ಯೋತಿಷ್ಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಬೇಕೆಂದು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು.

ಕೋರ್ಸ್ ನ ಅವಧಿ ಮತ್ತು ಬೋಧನಾ ಮಾಧ್ಯಮ ?:

ಈ ಕೋರ್ಸ್ ನ ಅವಧಿ ಎರಡು ವರ್ಷಗಳು ಮತ್ತು ಬೋಧನಾ ಮಾಧ್ಯಮವು ಹಿಂದಿಯಲ್ಲಿರುತ್ತದೆ.

ಜ್ಯೋತಿಷ್ಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಲಾಂಚ್ ಮಾಡಿದ ಇಗ್ನೋ

ಕೋರ್ಸ್ ನ ಶುಲ್ಕದ ವಿವರ:

ಇಗ್ನೋ MAJY ಕೋರ್ಸ್ ಅನ್ನು ಅಧ್ಯಯನ ಮಾಡಲು ಒಟ್ಟಾರೆ 12,600/-ರೂ ಶುಲ್ಕ ತಗುಲುತ್ತದೆ. ಈ ಶುಲ್ಕವನ್ನು ಎರಡು ಕಂತುಗಳಲ್ಲಿ ಪಾವತಿಸಬಹುದಾಗಿದ್ದು, ಅಭ್ಯರ್ಥಿಗಳು ಮೊದಲ ವರ್ಷ 6,300/-ರೂ, ನೋಂದಣಿ ಶುಲ್ಕ 200/-ರೂ ಮತ್ತು ಎರಡನೇ ವರ್ಷಕ್ಕೆ ಶುಲ್ಕ 6,300/-ರೂ ಶುಲ್ಕವನ್ನು ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಇಗ್ನೋ 2021ರ ಜುಲೈ ಸೆಷನ್ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ಓಪನ್ ಮತ್ತು ಡಿಸ್ಟೆನ್ಸ್ ಮೋಡ್ (ಒಡಿಎಲ್) ಮೂಲಕ ನೀಡುವ ಕಾರ್ಯಕ್ರಮಗಳಿಗೆ ಮತ್ತು ಆನ್‌ಲೈನ್‌ನಲ್ಲಿ ನೀಡುವ ಕಾರ್ಯಕ್ರಮಗಳಿಗೆ ಆಸಕ್ತರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ http://ignou.ac.in/ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
IGNOU launched Masters programme in astrology. The programme has been launched by ignou with an aim to provide students practical knowledge of different branches of astrology.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+