IGNOU Admission 2021 : ಜುಲೈ ಸೆಶನ್ ಪ್ರವೇಶಾತಿಗೆ ಅರ್ಜಿ ಸಲ್ಲಿಕೆಯ ಅವಧಿ ಸೆ.30ರ ವರೆಗೆ ವಿಸ್ತರಣೆ

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 2021ರ ಜುಲೈ ಸೆಶನ್ ಪ್ರವೇಶಾತಿಗೆ ಅರ್ಜಿ ಸಲ್ಲಿಕೆಯ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಸೆಪ್ಟೆಂಬರ್ 30,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಇಗ್ನೋ ಪ್ರವೇಶಾತಿ:  ಜುಲೈ ಸೆಶನ್ ಗೆ ಅರ್ಜಿ ಸಲ್ಲಿಕೆಯ ಅವಧಿ ಸೆ.30ರ ವರೆಗೆ ವಿಸ್ತರಣೆ

ಪದವಿ,ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೋಮಾ, ಪಿಜಿ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ.

ಪ್ರತಿ ವರ್ಷವು ಇಗ್ನೋ ಪ್ರವೇಶ ಪ್ರಕ್ರಿಯೆಯನ್ನು ಜನವರಿ ಮತ್ತು ಜುಲೈ ನಲ್ಲಿ ನಡೆಸುತ್ತದೆ. ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಪ್ರವೇಶಾತಿ ಪಡೆಯಲಿರುವ ಹೊಸ ಅಭ್ಯರ್ಥಿಗಳು ತಮ್ಮ ಐಡಿಯನ್ನು ರಚಿಸಬಹುದು ಮತ್ತು ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಬಳಸಿ ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಬಹುದು ಎಂದು ಇಗ್ನೋ ತಿಳಿಸಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಇಗ್ನೋದ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಅರ್ಜಿಯನ್ನು ಸಲ್ಲಿಸಿದ ಬಳಿಕ ಇಗ್ನೋ ಎಲ್ಲಾ ಅರ್ಜಿಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತದೆ. ತದನಂತರ ಪ್ರವೇಶಕ್ಕೆ ಅರ್ಹರಾದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಗಳನ್ನು ಬಿಡುಗಡೆ ಮಾಡುತ್ತದೆ.

ವಿಶ್ವವಿದ್ಯಾನಿಲಯವು ವಿವಿಧ ವಿಭಾಗಗಳಲ್ಲಿ 200 ಕ್ಕೂ ಹೆಚ್ಚು ಕೋರ್ಸ್ ಗಳನ್ನು ನೀಡುತ್ತಿದೆ. ಈ ಕೋರ್ಸ್ ಗಳಲ್ಲಿ ಪದವಿಗಳು, ಸ್ನಾತಕೋತ್ತರ ಪದವಿಗಳು, ಪಿಜಿ ಡಿಪ್ಲೊಮಾ ಮತ್ತು ಡಿಪ್ಲೊಮಾ, ಪಿಜಿ ಪ್ರಮಾಣಪತ್ರ ಮತ್ತು ಪ್ರಮಾಣಪತ್ರ ಕೋರ್ಸ್‌ಗಳು ಮತ್ತು ಜಾಗೃತಿ ಮಟ್ಟದ ಕೋರ್ಸ್ ಗಳು ಸೇರಿವೆ. ಕೋರ್ಸ್ ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ignouadmission.samarth.edu.in ವೆಬ್‌ಸೈಟ್ ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸಲು ಬೇಕಿರುವ ಅಗತ್ಯ ದಾಖಲೆಗಳು:

ಸ್ಕ್ಯಾನ್ ಮಾಡಿದ ಛಾಯಾಚಿತ್ರ (100 KB ಗಿಂತ ಕಡಿಮೆ)
ಸ್ಕ್ಯಾನ್ ಮಾಡಿದ ಸಹಿ (100 KB ಗಿಂತ ಕಡಿಮೆ)
ವಯಸ್ಸಿನ ಪುರಾವೆಗಳ ಸ್ಕ್ಯಾನ್ ಮಾಡಿದ ಪ್ರತಿ (200 KB ಗಿಂತ ಕಡಿಮೆ)
ಸಂಬಂಧಿತ ಶೈಕ್ಷಣಿಕ ಅರ್ಹತೆಯ ಸ್ಕ್ಯಾನ್ ಮಾಡಿದ ಪ್ರತಿ (200 KB ಗಿಂತ ಕಡಿಮೆ)
ಅನುಭವ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿ (ಯಾವುದಾದರೂ ಇದ್ದರೆ) (200 KB ಗಿಂತ ಕಡಿಮೆ)
SC/ST/OBC ಅಭ್ಯರ್ಥಿ ಆಗಿದ್ದಲ್ಲಿ ವರ್ಗ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ನಕಲು (200 KB ಗಿಂತ ಕಡಿಮೆ)
ಬಡತನ ರೇಖೆಗಿಂತ ಕೆಳಗಿದ್ದರೆ (200 KB ಗಿಂತ ಕಡಿಮೆ) BPL ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿ
ಮರುಪಾವತಿಸಲಾಗದ ನೋಂದಣಿ ಶುಲ್ಕ 200 ರೂ. ಪ್ರವೇಶದ ಸಮಯದಲ್ಲಿ ಮೊದಲ ಸೆಮಿಸ್ಟರ್/ವರ್ಷದ ಕಾರ್ಯಕ್ರಮ ಶುಲ್ಕದೊಂದಿಗೆ ವಿಧಿಸಲಾಗುತ್ತದೆ.

ಪ್ರವೇಶ ರದ್ದತಿ ಮತ್ತು ಶುಲ್ಕ ಮರುಪಾವತಿಗೆ ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದರೆ, ಮರುಪಾವತಿ ವಿನಂತಿಯನ್ನು ವಿಶ್ವವಿದ್ಯಾಲಯ ನೀತಿಯ ಪ್ರಕಾರ ಪರಿಗಣಿಸಲಾಗುತ್ತದೆ:

ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕದ ಮೊದಲು ಪಾವತಿಸಿದ ಶುಲ್ಕದಲ್ಲಿ 200 ರೂ. ಕಡಿತಗೊಳಿಸಿ ನಂತರ ಶುಲ್ಕವನ್ನು ಮರುಪಾವತಿಸಲಾಗುತ್ತದೆ

ಅರ್ಜಿ ಸಲ್ಲಿಸಿದ ಕೊನೆಯ ದಿನಾಂಕದಿಂದ 15 ದಿನಗಳ ಒಳಗೆ ಪಾವತಿಸಿದ ಶುಲ್ಕದಲ್ಲಿ 500 ರೂ. ಕಡಿತಗೊಳಿಸಿ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

ಅರ್ಜಿ ಸಲ್ಲಿಸಿದ ಕೊನೆಯ ದಿನಾಂಕದಿಂದ 30 ದಿನಗಳ ಒಳಗೆ ಪಾವತಿಸಿದ ಶುಲ್ಕದಲ್ಲಿ 1,000 ರೂ. ಅನ್ನು ಕಡಿತಗೊಳಿಸಿ ನಂತರ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

ಅರ್ಜಿ ಸಲ್ಲಿಸಿದ ಬಳಿಕ 30 ದಿನಗಳ ನಂತರ ಯಾವುದೇ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ.

ಆನ್‌ಲೈನ್ ಕೋರ್ಸ್‌ಗಳು :

ಆಸಕ್ತ ಅಭ್ಯರ್ಥಿಗಳು ಇಗ್ನೊ ಆನ್‌ಲೈನ್ ಪೋರ್ಟಲ್ iop.ignouonline.ac.in ಮೂಲಕ ಅಥವಾ ಸಮರ್ಥ ಪೋರ್ಟಲ್ ಮೂಲಕ ಈ ಆನ್‌ಲೈನ್ ಕಾರ್ಯಕ್ರಮಗಳಿಗಾಗಿ ignouiop.samarth.edu.in ನಲ್ಲಿ ನೋಂದಾಯಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-09-2021

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: http://ignou.ac.in/

More News  

For Quick Alerts
ALLOW NOTIFICATIONS  
For Daily Alerts

English summary
IGNOU admission for july session : Application date extended to september 30.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+