IGNOU July Admission 2022 : ಜುಲೈ ಸೆಶನ್ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ನ.11ರ ವರೆಗೆ ವಿಸ್ತರಣೆ

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ 2022ರ ಜುಲೈ ಅವಧಿಗೆ ಪ್ರಮಾಣಪತ್ರ ಮತ್ತು ಸೆಮಿಸ್ಟರ್ ಹೊರತುಪಡಿಸಿ ಆನ್‌ಲೈನ್ ಮತ್ತು ಆನ್‌ಲೈನ್ ದೂರ ಶಿಕ್ಷಣ ಕೋರ್ಸ್ ಗಳಿಗೆ ಪ್ರವೇಶಕ್ಕಾಗಿ ಹೊಸ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ. ಆನ್‌ಲೈನ್ ಮತ್ತು ಆನ್‌ಲೈನ್ ದೂರ ಶಿಕ್ಷಣ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನವೆಂಬರ್ 11,2022ರೊಳಗೆ ಅರ್ಜಿಯನ್ನು ಹಾಕಬಹುದು.

ಇಗ್ನೋ ಪ್ರವೇಶಾತಿ : ಜುಲೈ ಸೆಶನ್ ಗೆ ಅರ್ಜಿ ಸಲ್ಲಿಸಲು ನ.11ರ ವರೆಗೆ ಅವಕಾಶ

ಪ್ರತಿ ವರ್ಷವು ಇಗ್ನೋ ಪ್ರವೇಶ ಪ್ರಕ್ರಿಯೆಯನ್ನು ಜನವರಿ ಮತ್ತು ಜುಲೈ ನಲ್ಲಿ ನಡೆಸುತ್ತದೆ. ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

IGNOU ಜುಲೈ ಪ್ರವೇಶ 2022 ನೋಂದಣಿ ಗಡುವನ್ನು ಈ ವರ್ಷ ಹಲವು ಬಾರಿ ವಿಸ್ತರಿಸಿದೆ. ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 7 ರಂದು ಕೊನೆಗೊಂಡಿತ್ತು, ಆದರೆ ಅದನ್ನು ಮತ್ತೆ ನವೆಂಬರ್ 11ರ ವರೆಗೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು IGNOU ಸಾಮಾನ್ಯ ಪ್ರಾಸ್ಪೆಕ್ಟಸ್ ಅನ್ನು ಡೌನ್‌ಲೋಡ್ ಮಾಡುವುದು ಕಡ್ಡಾಯವಾಗಿದೆ ಮತ್ತು ಯುಜಿ ಹಾಗೂ ಪಿಜಿ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸುವ ಮೊದಲು ವಿಶ್ವವಿದ್ಯಾಲಯದ ನಿಯಮಗಳನ್ನು ಎಚ್ಚರಿಕೆಯಿಂದ ಓದಬೇಕು.

ಪ್ರವೇಶಾತಿ ಪಡೆಯಲಿರುವ ಹೊಸ ಅಭ್ಯರ್ಥಿಗಳು ತಮ್ಮ ಐಡಿಯನ್ನು ರಚಿಸಬಹುದು ಮತ್ತು ನೆಟ್ ಬ್ಯಾಂಕಿಂಗ್ /ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಬಳಸಿ ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಬಹುದು ಎಂದು ಇಗ್ನೋ ತಿಳಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಇಗ್ನೋದ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.

ಅರ್ಜಿಯನ್ನು ಸಲ್ಲಿಸಿದ ಬಳಿಕ ಇಗ್ನೋ ಎಲ್ಲಾ ಅರ್ಜಿಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತದೆ. ತದನಂತರ ಪ್ರವೇಶಕ್ಕೆ ಅರ್ಹರಾದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಗಳನ್ನು ಬಿಡುಗಡೆ ಮಾಡುತ್ತದೆ.

ವಿಶ್ವವಿದ್ಯಾನಿಲಯವು ವಿವಿಧ ವಿಭಾಗಗಳಲ್ಲಿ 200ಕ್ಕೂ ಹೆಚ್ಚು ಕೋರ್ಸ್ ಮತ್ತು 16 ಆನ್‌ಲೈನ್ ಕೋರ್ಸ್ಗಳನ್ನು ನೀಡುತ್ತಿದೆ. ಈ ಕೋರ್ಸ್ ಗಳಲ್ಲಿ ಪದವಿಗಳು, ಸ್ನಾತಕೋತ್ತರ ಪದವಿಗಳು, ಪಿಜಿ ಡಿಪ್ಲೊಮಾ ಮತ್ತು ಡಿಪ್ಲೊಮಾ, ಪಿಜಿ ಪ್ರಮಾಣಪತ್ರ ಮತ್ತು ಪ್ರಮಾಣಪತ್ರ ಕೋರ್ಸ್‌ಗಳು ಮತ್ತು ಜಾಗೃತಿ ಮಟ್ಟದ ಕೋರ್ಸ್ ಗಳು ಸೇರಿವೆ. ಕೋರ್ಸ್ ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ignouadmission.samarth.edu.in ವೆಬ್‌ಸೈಟ್ ಗೆ ಭೇಟಿ ನೀಡಬಹುದು.

ಆನ್‌ಲೈನ್ ಕೋರ್ಸ್‌ಗಳು :

ಆಸಕ್ತ ಅಭ್ಯರ್ಥಿಗಳು ಇಗ್ನೊ ಆನ್‌ಲೈನ್ ಪೋರ್ಟಲ್ iop.ignouonline.ac.in ಮೂಲಕ ಅಥವಾ ಸಮರ್ಥ ಪೋರ್ಟಲ್ ಮೂಲಕ ಈ ಆನ್‌ಲೈನ್ ಕಾರ್ಯಕ್ರಮಗಳಿಗಾಗಿ ignouiop.samarth.edu.in ನಲ್ಲಿ ನೋಂದಾಯಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-11-2022
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: http://ignou.ac.in/

IGNOU ಜುಲೈ 2022 ಸೆಷನ್ : ನೊಂದಣಿ ಮಾಡುವುದು ಹೇಗೆ ? :

ಸ್ಟೆಪ್ 1: ಅಧಿಕೃತ ವೆಬ್‌ಸೈಟ್‌ ignou.samarth.edu.in ಅಥವಾ ignou.ac.in ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ
ಸ್ಟೆಪ್ 3: ಹೊಸ ಪುಟ ತೆರೆಯುತ್ತದೆ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 4: ನಿಗದಿತ ಪಾವತಿ ವಿಧಾನಗಳ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ
ಸ್ಟೆಪ್ 5: ಅಂತಿಮವಾಗಿ ಪರಿಶೀಲಿಸಿಕೊಂಡು ಸಬ್‌ಮಿಟ್ ಮಾಡಿ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಛಾಯಾಚಿತ್ರ, ಸಹಿ, ವಯಸ್ಸಿನ ಪುರಾವೆ, ಸಂಬಂಧಿತ ಶೈಕ್ಷಣಿಕ ಅರ್ಹತೆ, ಅನುಭವ ಪ್ರಮಾಣಪತ್ರದ ಪ್ರತಿ, ವರ್ಗ ಪ್ರಮಾಣಪತ್ರ (ಯಾವುದಾದರೂ ಇದ್ದರೆ) ಮತ್ತು ಬಿಪಿಎಲ್ ಪ್ರಮಾಣಪತ್ರದ ಪ್ರತಿ (ಯಾವುದಾದರೂ ಇದ್ದರೆ) ಸ್ಕ್ಯಾನ್ ಮಾಡಿದ ಪ್ರತಿಗಳು ಅಗತ್ಯವಿರುತ್ತದೆ.

For Quick Alerts
ALLOW NOTIFICATIONS  
For Daily Alerts

English summary
IGNOU admission 2022 for july session : Application date again extended to november 11.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X