IGNOU Re Registration Last Date 2021 : ಇಗ್ನೋ ಜುಲೈ ಸೇಶನ್ ಪ್ರವೇಶಾತಿಗೆ ಆ.31ರೊಳಗೆ ಅರ್ಜಿ ಹಾಕಿ

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 2021ರ ಜುಲೈ ಸೆಶನ್ ಪ್ರವೇಶಾತಿಗೆ ಅರ್ಜಿ ಸಲ್ಲಿಕೆಯ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಆಗಸ್ಟ್ 31ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಇಗ್ನೋ ಜುಲೈ ಸೆಶನ್ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಪದವಿ,ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೋಮಾ, ಪಿಜಿ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ.

ಪ್ರತಿ ವರ್ಷವು ಇಗ್ನೋ ಪ್ರವೇಶ ಪ್ರಕ್ರಿಯೆಯನ್ನು ಜನವರಿ ಮತ್ತು ಜುಲೈ ನಲ್ಲಿ ನಡೆಸುತ್ತದೆ. ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಪ್ರವೇಶಾತಿ ಪಡೆಯಲಿರುವ ಹೊಸ ಅಭ್ಯರ್ಥಿಗಳು ತಮ್ಮ ಐಡಿಯನ್ನು ರಚಿಸಬಹುದು ಮತ್ತು ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಬಳಸಿ ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಬಹುದು ಎಂದು ಇಗ್ನೋ ತಿಳಿಸಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಇಗ್ನೋದ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಅರ್ಜಿಯನ್ನು ಸಲ್ಲಿಸಿದ ಬಳಿಕ ಇಗ್ನೋ ಎಲ್ಲಾ ಅರ್ಜಿಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತದೆ. ತದನಂತರ ಪ್ರವೇಶಕ್ಕೆ ಅರ್ಹರಾದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಗಳನ್ನು ಬಿಡುಗಡೆ ಮಾಡುತ್ತದೆ.

ವಿಶ್ವವಿದ್ಯಾನಿಲಯವು ವಿವಿಧ ವಿಭಾಗಗಳಲ್ಲಿ 200 ಕ್ಕೂ ಹೆಚ್ಚು ಕೋರ್ಸ್ ಗಳನ್ನು ನೀಡುತ್ತಿದೆ. ಈ ಕೋರ್ಸ್ ಗಳಲ್ಲಿ ಪದವಿಗಳು, ಸ್ನಾತಕೋತ್ತರ ಪದವಿಗಳು, ಪಿಜಿ ಡಿಪ್ಲೊಮಾ ಮತ್ತು ಡಿಪ್ಲೊಮಾ, ಪಿಜಿ ಪ್ರಮಾಣಪತ್ರ ಮತ್ತು ಪ್ರಮಾಣಪತ್ರ ಕೋರ್ಸ್‌ಗಳು ಮತ್ತು ಜಾಗೃತಿ ಮಟ್ಟದ ಕೋರ್ಸ್ ಗಳು ಸೇರಿವೆ. ಕೋರ್ಸ್ ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ignouadmission.samarth.edu.in ವೆಬ್‌ಸೈಟ್ ಗೆ ಭೇಟಿ ನೀಡಬಹುದು.

ಆನ್‌ಲೈನ್ ಕೋರ್ಸ್‌ಗಳು :

ಆಸಕ್ತ ಅಭ್ಯರ್ಥಿಗಳು ಇಗ್ನೊ ಆನ್‌ಲೈನ್ ಪೋರ್ಟಲ್ iop.ignouonline.ac.in ಮೂಲಕ ಅಥವಾ ಸಮರ್ಥ ಪೋರ್ಟಲ್ ಮೂಲಕ ಈ ಆನ್‌ಲೈನ್ ಕಾರ್ಯಕ್ರಮಗಳಿಗಾಗಿ ignouiop.samarth.edu.in ನಲ್ಲಿ ನೋಂದಾಯಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-08-2021

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: http://ignou.ac.in/

ಅರ್ಜಿ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಇಗ್ನೊ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅರ್ಜಿದಾರರು ಅರ್ಜಿ ಶುಲ್ಕ ಪಾವತಿ ಮಾಡಲು ತಮ್ಮದೇ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಬೇಕು. ಭೀಮ್ ಆಪ್ ಸೇರಿದಂತೆ ಯುಪಿಐ ಮೂಲಕ ಪಾವತಿ ಮಾಡಬಹುದು. ಅಂತರಾಷ್ಟ್ರೀಯ ವಿಭಾಗದ ವಿದ್ಯಾರ್ಥಿಗಳು ತಮಗೆ ಲಭ್ಯವಿರುವ ಆನ್‌ಲೈನ್ ಪಾವತಿ ಆಯ್ಕೆಗಳನ್ನು ಬಳಸಬಹುದು.

ಒಂದು ವೇಳೆ ವಿದ್ಯಾರ್ಥಿ ಮಾಡಿದ ಆನ್‌ಲೈನ್ ಪಾವತಿ ಅಪ್‌ಡೇಟ್ ಆಗದಿದ್ದರೆ ತಕ್ಷಣವೇ ಎರಡನೇ ಭಾರಿ ಪಾವತಿ ಪ್ರಯತ್ನ ಮಾಡಬೇಕಾಗಿಲ್ಲ. ವಿದ್ಯಾರ್ಥಿಗಳು ಒಂದು ದಿನ ಕಾದು ಪರಿಶೀಲಿಸಿಕೊಳ್ಳತಕ್ಕದ್ದು. ಒಂದು ವೇಳೆ ವಿದ್ಯಾರ್ಥಿಯು ಅರ್ಜಿ ಶುಲ್ಕವನ್ನು ಎರಡು ಬಾರಿ ಪಾವತಿಸಿದ್ದರೆ, ಅವರ ಪಾವತಿಗಳಲ್ಲಿ ಒಂದನ್ನು ಆಯಾ ಖಾತೆಗೆ ಮರುಪಾವತಿಸಲಾಗುತ್ತದೆ.

ಇಗ್ನೊ ಜುಲೈ 2021 ಪ್ರವೇಶಕ್ಕಾಗಿ ನೋಂದಾಯಿಸಿಕೊಳ್ಳುವ ಅಥವಾ ಮರು ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳು ಮತ್ತು ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
IGNOU july session admission 2021 re-registration date extended. Candidates can apply before August 31.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+