ಐಐಎಂಸಿ ಪಿಜಿ ಡಿಪ್ಲೊಮಾ ಪ್ರವೇಶ ಪ್ರಕ್ರಿಯೆ ಪ್ರಾರಂಭ

ದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಾಸ್‌ ಕಮ್ಯೂನಿಕೇಷನ್‌ (ಐಐಎಂಸಿ)ನಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು ಆಸಕ್ತರು ಮೇ 05, 2017 ರ ಒಳಗೆ ಅರ್ಜಿಗಳ ಸಲ್ಲಿಸಬಹುದಾಗಿದೆ.

ಪ್ರವೇಶ ಪ್ರಕ್ರಿಯೆ

  • ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಯಾವುದೇ ಅವಕಾಶ ಇಲ್ಲದ ಕಾರಣ ಅಭ್ಯರ್ಥಿಗಳು ಆಫ್-ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು
  • ಅರ್ಜಿಗಳನ್ನು ಮುಖ್ಯ ಕಛೇರಿಯಲ್ಲಿ ಪಡೆಯತಕ್ಕದ್ದು.
  • ಅರ್ಜಿ ನಮೂನೆಯಲ್ಲಿ ಕೇಳಿರುವಂತೆ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು.
  • ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಗೆ ತಕ್ಕ ಸೂಕ್ತ ದಾಖಲೆಗಳ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಕಳುಹಿಸತಕ್ಕದ್ದು.
  • ಭರ್ತಿ ಮಾಡಿದ ಅರ್ಜಿಗಳನ್ನು ಜೆ ಎನ್ ಯು ಅಂಚೆ ವಿಳಾಸಕ್ಕೆ ತಲುಪಿಸತಕ್ಕದ್ದು.

ಅಂಚೆ ವಿಳಾಸ

ಜೆ ಎನ್ ಯು ನ್ಯೂ ಕ್ಯಾಂಪಸ್, ಅರುಣ ಆಸಫ್ ಅಲಿ ಮಾರ್ಗ್, ನವದೆಹಲಿ-110067

 ಪ್ರವೇಶ ಪ್ರಕ್ರಿಯೆ ಪ್ರಾರಂಭ

 

ಅರ್ಹತೆ

ವಿದ್ಯಾರ್ಹತೆ
ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರು ವಿಷಯದಲ್ಲಿ ಪದವಿಗಳಿಸಿರಬೇಕು. ಅಂತಿಮ ವರ್ಷದ ಅಥವಾ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ

ಆಗಸ್ಟ್ 8, 2017 ಕ್ಕೆ ಅನುಸಾರವಾಗಿ

  • ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ
  • ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ
  • ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳು 30 ವರ್ಷ

ಆಯ್ಕೆ ಪ್ರಕ್ರಿಯೆ

  • ಅಭ್ಯರ್ಥಿಗಳಿಗೆ ಲಿಖಿತ ಪ್ರವೇಶ ಪರೀಕ್ಷೆ ನೀಡಲಾಗುವುದು.
  • ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ವಯ್ಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಪ್ರಮುಖ ದಿನಾಂಕಗಳು

ಅರ್ಜಿಗಳನ್ನು ತಲುಪಿಸಲು ಕೊನೆಯ ದಿನಾಂಕ : ಮೇ 05 , 2017

ಪ್ರವೇಶ ಪರೀಕ್ಷೆ ದಿನಾಂಕಗಳು

ದಿನಾಂಕ: 27 , 2017 ರಂದು ಒಡಿಯಾ/ಉರ್ದು/ಮರಾಠಿ/ಮಲಯಾಳಂ ಜರ್ನಲಿಸಂ (ಬೆಳಿಗ್ಗೆ 9 ರಿಂದ 10)ಗೆ ಪರೀಕ್ಷೆಗಳು ನಡೆಯಲಿವೆ.
ದಿನಾಂಕ: 28-05-2017 ರಂದು ಈ ಕೆಳಕಂಡ ವಿಷಯಗಳಿಗೆ ಪ್ರವೇಶ ಪರೀಕ್ಷೆ ದೊರೆಯಲಿದೆ
ಹಿಂದಿ/ಇಂಗ್ಲಿಷ್ ಜರ್ನಲಿಸಂ ಪಿಜಿ ಡಿಪ್ಲೊಮಾ (ಬೆಳಿಗ್ಗೆ 9 ರಿಂದ 11 ರವರೆಗೆ)
ರೇಡಿಯೋ ಮತ್ತು ಟಿ.ವಿ ಜರ್ನಲಿಸಂ (ಮಧ್ಯಾಹ್ನ 12 ರಿಂದ 2 ರವರೆಗೆ)
ಆ್ಯಡ್ ಅಂಡ್ ಪಿ.ಆರ್ (ಮಧ್ಯಾಹ್ನ 3 ರಿಂದ 5 ರವರೆಗೆ)

ಸಂದರ್ಶನದ ದಿನಾಂಕಗಳು: ಜೂನ ಕೊನೆ ವಾರ ಅಥವಾ ಜುಲೈ ಮೊದಲ ವಾರ, 2017

ಐಐಎಂಸಿ

ದೆಹಲಿಯ ಐಐಎಂಸಿಯು ಆಗಸ್ಟ್ 17, 1965 ರಂದು ಉದ್ಘಾಟಿನೆಗೊಂಡಿದ್ದು, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಉನ್ನತವಾದದ್ದನು ಸಾಧಿಸುವ ಉದ್ದೇಶ ಹೊಂದಿದೆ.ಪತ್ರಿಕೋದ್ಯಮದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಪಿಜಿ ಡಿಪ್ಲೊಮಾ ನೀಡುತ್ತಿದೆ.

ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕ ಕಲಿಕೆ ಮತ್ತು  ಹೊಸ ಕಲ್ಪನೆಗಳನ್ನು ತುಂಬುತ್ತ, ವಿದ್ಯಾರ್ಥಿವೇತನದ ಮೂಲಕ  ಸೃಜನಶೀಲತೆ, ಸಂಶೋಧನೆಗೆ ಅವಕಾಶ ನೀಡಿ ಮಾಧ್ಯಮ ಮತ್ತು ಸಮೂಹ ಸಂವಹನ ಕ್ಷೇತ್ರಕ್ಕೆ ನಾಯಕರು ಮತ್ತು ಸಂಶೋಧಕರ ಬೆಳವಣಿಗೆಗೆ ಸಂಸ್ಥೆಯು ಶ್ರಮವಹಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಶ www.iimc.nic.in ಗಮನಿಸಿ

For Quick Alerts
ALLOW NOTIFICATIONS  
For Daily Alerts

    English summary
    The application process for admission of students into Indian Institute of Mass Communication (IIMC) has opened already.
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more