ಜವಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು (JIPMER), 2020 ನೇ ಸಾಲಿನ ಡಾಕ್ಟರ್ ಆಫ್ ಮೆಡಿಷನ್(ಎಂಡಿ) ಮತ್ತು ಮಾಸ್ಟರ್ ಆಫ್ ಸರ್ಜರಿ (ಎಂಎಸ್) ಪ್ರವೇಶಾತಿಗೆ ಸಂಬಂಧಿಸಿದಂತೆ, ಮೊದಲನೇ ಸುತ್ತಿನ ಕೌನ್ಸಿಲಿಂಗ್‌ಗೆ ರಿಜಿಸ್ಟ್ರೇಷನ್ ಪ್ರಕ್ರಿಯೆ ಆರಂಭಿಸಿದೆ. ರಿಜಿಸ್ಟರ್ ಮಾಡಿಕೊಳ್ಳಲು ಜುಲೈ 25,2020 ಕೊನೆಯ ದಿನವಾಗಿರುತ್ತದೆ.

ಅರ್ಹ ವಿದ್ಯಾರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.jipmer.edu.in ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಆಸಕ್ತಿಯುಳ್ಳ ಕೋರ್ಸ್ ಆಯ್ಕೆ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
JIPMER 19 ವಿವಿಧ ವಿಭಾಗಗಳಲ್ಲಿ ಎಂಡಿ ಕೋರ್ಸ್‌ಗೆ, 05 ವಿವಿಧ ವಿಭಾಗಗಳಲ್ಲಿ ಎಂಸ್ ಕೋರ್ಸ್‌ಗೆ ಪ್ರವೇಶಾತಿ ನೀಡಲಿದೆ. ಎಂಡಿ / ಎಂಎಸ್ ಎರಡರಿಂದ ಒಟ್ಟು 145 ವಿದ್ಯಾರ್ಥಿಗಳಿಗೆ ಸೀಟುಗಳನ್ನು ನೀಡಲಿದೆ.
JIPMER ಮಾಕ್ ಕೌನ್ಸಿಲಿಂಗ್ ಫಲಿತಾಂಶವನ್ನು ಜುಲೈ 29 ರ ವೇಳೆಗೆ ಪ್ರಕಟಿಸುವ ಸಾಧ್ಯತೆ ಇದೆ. ಜುಲೈ 29, 30 ರಂದು ಸಂಜೆ 05 ಗಂಟೆಯೊಳಗೆ ತಮ್ಮ ಪ್ರಿಫೆರೆನ್ಸ್ ಅನ್ನು ಲಾಕ್ ಮಾಡಬಹುದು.
ಜವಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪ್ರೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್, ಅಂತಿಮವಾಗಿ ಸೀಟುಗಳ ಹಂಚಿಕೆಯನ್ನು ಆಗಸ್ಟ್ 04 ರಂದು ಪ್ರಕಟಿಸಲಿದೆ. ನಂತರ ಅಭ್ಯರ್ಥಿಗಳು ತಮ್ಮ ಸೀಟು ಹಂಚಿಕೆ ಪತ್ರಿಕೆಯನ್ನು, ಪ್ರವೇಶ ಶುಲ್ಕ ಮತ್ತು ಸೆಕ್ಯೂರಿಟಿ ಡೆಪಾಸಿಟ್ ಅನ್ನು ಆಗಸ್ಟ್ 04 ರಿಂದ 10 ರ ವರೆಗೆ ಪಾವತಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆಗಸ್ಟ್ 14, 20, 27 ರಂದು ಪ್ರತಿ ಬ್ಯಾಚ್‌ನಲ್ಲಿ 30 ವಿದ್ಯಾರ್ಥಿಗಳಂತೆ, ಮೂರು ಬ್ಯಾಚ್ ಅನ್ನು ಕೌನ್ಸಿಲಿಂಗ್‌ಗೆ JIPMER ಕರೆಯಲಿದೆ.


Click it and Unblock the Notifications











