ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು 2018-19 ನೇ ಸಾಲಿಗೆ ಸಂಯುಕ್ತ ಪ್ರವೇಶ ಪರೀಕ್ಷೆಗೆ ಅನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಎಂಟೆಕ್ ಬಯೋಟೆಕ್ನಾಲಜಿ, ಎಂಎಸ್ಸಿ ಬಯೋಟೆಕ್ನಾಜಿ ಮತ್ತು ಎಂಎಸ್ಸಿ ಬಯೋಟೆಕ್ನಾಲಜಿ (ಅಗ್ರಿ) ಮತ್ತು ಎಂವಿಎಸ್ ವಿಷಯಗಳ ಪ್ರವೇಶಾತಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಸಂಯುಕ್ತ ಪ್ರವೇಶ ಪರೀಕ್ಷೆಯು ಡಿಸೆಂಬರ್ 30 ರಂದು ದೇಶಾದ್ಯಂತ 53 ನಗರಗಳಲ್ಲಿ ಮತ್ತು ನೇಪಾಳದ ಕಠ್ಮಂಡುವಿನಲ್ಲಿ ನಡೆಯುವುದು.
ಅರ್ಜಿ ಸಲ್ಲಿಕೆ
- ಅಭ್ಯರ್ಥಿಗಳು ಜೆಎನ್ ಯು ಅಧಿಕೃತ ವೆಬ್ಸೈಟ್ ವಿಳಾಸದ ಮೂಲಕ ಲಾಗಿನ್ ಆಗಬೇಕು
- ಅರ್ಜಿ ಸಲ್ಲಿಸುವ ಮುನ್ನ ಕೊಟ್ಟಿರುವ ಸೂಚನೆಗಳನ್ನು ಸರಿಯಾಗಿ ಗಮನಿಸಬೇಕು
- ಸ್ಕ್ಯಾನ್ ಮಾಡಿದ ಫೋಟೋ ಮತ್ತು ಸಹಿಯನ್ನು ಕೇಳಿರುವ ಮಾದರಿಯಲ್ಲಿ ಅಪ್-ಲೋಡ್ ಮಾಡಬೇಕು
- ಸರಿಯಾದ ಮಾಹಿತಿಯನ್ನು ಅರ್ಜಿಯಲ್ಲಿ ತುಂಬಬೇಕು.
ವೆಬ್ಸೈಟ್ ವಿಳಾಸ www.admissions.jnu.ac.in
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000 /- +ಜಿಎಸ್ ಟಿ
- ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.500 /- +ಜಿಎಸ್ ಟಿ
- ವಿದೇಶಿ ಅಭ್ಯರ್ಥಿಗಳಿಗೆ ರೂ.2640 /- (ಯುಎಸ್ $40) + ಜಿ ಎಸ್ ಟಿ
ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಅಕ್ಟೋಬರ್ 13 , 2017
ಪ್ರವೇಶಾತಿಗೆ ಸಂಬಂಧಿಸಿದಂತೆ ಯಾವ ರಾಜ್ಯಗಳಲ್ಲಿ ಎಷ್ಟಿ ಸೀಟುಗಳಿವೆ, ಕೋರ್ಸಿನ ವಿವರ, ಶುಲ್ಕ ಸೇರಿದಂತೆ ಪರೀಕ್ಷೆಯ ವಿವರದ ಮಾಹಿತಿಗಾಗಿ ವಿಶ್ವವಿದ್ಯಾಲಯವು ಪ್ರಾಸ್ಪೆಕ್ಟಸ್ ಪ್ರಕಟಿಸಿದ್ದು, ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಜೆ ಎನ್ ಯು
ನೆಹರು ವಿಶ್ವವಿದ್ಯಾಲಯ ಎಂದೂ ಪರಿಚಿತವಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ಭಾರತದ ರಾಜಧಾನಿ ನವ ದೆಹಲಿಯಲ್ಲಿ ನೆಲೆಗೊಂಡಿದೆ. ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಹೆಸರನ್ನೇ ಹೊಂದಿರುವ ಈ ವಿಶ್ವವಿದ್ಯಾಲಯವು ಭಾರತದ ಪ್ರಮುಖ ವಿಶ್ವವಿದ್ಯಾಲಯಗಳ ಪೈಕಿ ಒಂದೆನಿಸಿದೆ. ಜಿ. ಪಾರ್ಥಸಾರಥಿಯವರನ್ನು ಈ ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಯೆಂದು ನೇಮಿಸಲಾಗಿತ್ತು.


Click it and Unblock the Notifications











