ಬರೀ ಮೈ ಹುರಿದುಂಬಿಸಲು ಮಾತ್ರವಲ್ಲ...ಫಿಟ್ನೆಸ್ ಫೀಲ್ಡ್‌ನಲ್ಲಿ ಕೆರಿಯರ್ ಕೂಡಾ ರೂಪಿಸಿಕೊಳ್ಳಿ!

Posted By:

ಫಿಟ್ ನೆಸ್ ಎಂಬುವುದು ಶ್ರೀಮಂತ ವ್ಯಕ್ತಿಗಳ ಸ್ವತ್ತು ಎಂಬ ಮಾತು ಇದೀಗ ಬದಲಾಗಿದೆ. ಇದೀಗ ಎಲ್ಲರೂ ತಮ್ಮ ಹೆಲ್ತಿಲೈಫ್ ಸ್ಟೈಲ್ ಗಾಗಿ ಫಿಟ್ ನೆಸ್ ನತ್ತ ಮುಖ ಮಾಡಿದ್ದಾರೆ. ಫಿಟ್ ನೆಸ್ ಗೋಲ್ ತಲುಪಲು ತಮ್ಮ ಸಮಯವನ್ನೇಲ್ಲಾ ವ್ಯಯಿಸುತ್ತಿದ್ದಾರೆ. ಇನ್ನು ಈ ಫಿಟ್ನೆಸ್ ಇಂಡಸ್ಟ್ರಿಯಲ್ಲಿಯೂ ಕೂಡಾ ನೀವು ಕೆರಿಯರ್ ಆಯ್ಕೆ ರೂಪಿಸಿಕೊಳ್ಳಬಹುದು. ಹಲವಾರು ಕೆರಿಯರ್ ಆಯ್ಕೆ ಇಲ್ಲಿವೆ ಮುಂದಕ್ಕೆ ಓದಿ.

ಬರೀ ಮೈ ಹುರಿದುಂಬಿಸಲು ಮಾತ್ರವಲ್ಲ...ಫಿಟ್ನೆಸ್ ಫೀಲ್ಡ್‌ನಲ್ಲಿ ಕೆರಿಯರ್ ಕೂಡಾ ರೂಪಿಸಿಕೊಳ್ಳಿ!

ಎಲ್ಲರೂ ತಿಳಿದುಕೊಂಡಿರುವಂತೆ ಈ ಕ್ಷೇತ್ರದಲ್ಲೀ ಬರೀ ಫಿಟ್ನೆಸ್ ಟ್ರೈನರ್ ಮಾತ್ರ ಅಂದು ಕೊಂಡಿದ್ದರೆ ನಿಮ್ಮ ಅಭಿಪ್ರಾಯ ತಪ್ಪು. ಟ್ರೈನರ್ ಮಾತ್ರವಲ್ಲದೇ ಈ ಇಂಡಸ್ಟ್ರಿಯಲ್ಲಿ ಇನ್ನೂ 5 ಉದ್ಯೋಗಗಳು ನೀವು ಆಯ್ಕೆ ಮಾಡಿಕೊಂಡು ಕೈ ತುಂಬಾ ಸಂಪಾದಿಸಬಹುದು. ಅವುವು ಯಾವುವು ಎಂದ್ರೆ

ಸೋಶಲ್ ವರ್ಕರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳುವುದು ಹೇಗೆ?

ಫಿಟ್ನೆಸ್ ಟ್ರೈನರ್:

ಇತರ ಫೀಲ್ಡ್‌ನಲ್ಲಿ ಇರುವಂತೆ ಫಿಟ್ನೆಸ್ ಫೀಲ್ಡ್ ನಲ್ಲೂ ಟ್ರೈನರ್ ಇರುತ್ತಾರೆ. ಹಲವಾರು ಫಿಟ್ನೆಸ್ ಟೆಕ್ನಿಕ್ಸ್ ಹಾಗೂ ಮಾನವನ ಶರೀರದ ಬಗ್ಗೆ ನಿಮಗೆ ಜ್ಞಾನವಿದ್ದರೆ ಸಾಕು. ಅತೀ ಹೆಚ್ಚು ಸಂಭಾವನೆ ಸಿಗುವ ಹುದ್ದೆ ಇದಾಗಿದೆ. ಈ ಫೀಲ್ಡ್ ನಲ್ಲಿ ಸುಮಾರು 50000 ರೂ ತಿಂಗಳಿಗೆ ನೀವು ಸಂಪಾದಿಸಬಹುದು.

ಫಿಟ್ನೆಸ್ ಪ್ರಾಂಚೈಸ್ ನ ಸಿಇಒ:

ಹಿಂದೆ ಫಿಟ್ನೆಸ್ ಅಂದ್ರೆ ಒಂದು ಲೋಕಲ್ ಜಿಮ್ ಆಗಿರುತ್ತಿತ್ತು. ಕ್ರಮೇಣ ಈ ಜಿಮ್ ಗಳು ಚೈನ್ ಸಿಸ್ಟಮ್ ತರಹ ಬೆಳೆಯುತ್ತಾ ಹೋಯಿತು. ಇದೀಗ ಫಿಟ್ನೆಸ್ ಎಂಬುವುದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಹಾಗಾಗಿ ನಿಮಗೆ ಈ ಇಂಡಸ್ಟ್ರಿಯಲ್ಲಿ ಆಸಕ್ತಿ ಇದ್ದರೆ, ಬಂಡವಾಳ ಹೂಡಿ, ನೀವಾಗಿಯೇ ಹೊಸತಾಗಿ ಜಿಮ್ ತೆರೆಯಿರಿ.

ಅಮೆರಿಕಾದಲ್ಲಿ ಮ್ಯಾಥಮ್ಯಾಟಿಕ್ಸ್ ಕೋರ್ಸ್ ಮಾಡಬೇಕು ಅಂದುಕೊಂಡಿದ್ದೀರಾ...ಬೆಸ್ಟ್ ಕಾಲೇಜುಗಳ ಲಿಸ್ಟ್!

ಫಿಸಿಕಲ್ ಥೆರಪಿಸ್ಟ್:

ಜಿಮ್ ಗಳಲ್ಲಿ ಆಗಾಗ ಶಾರೀರಕ ತೊಂದರೆಗಳು ಕಾಣಿಸಬಹುದು. ಹಾಗಾಗಿ ಫಿಸಿಕಲ್ ಥೆರಪಿಸ್ಟ್ ಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ ಇರುತ್ತದೆ. ಪಟುಗಳಿಗೆ ಏನಾದ್ರೂ ಮೂಳೆ ಮುರಿತ, ಅಥವಾ ನೋವು ಕಾಣಿಸಿಕೊಂಡಾಗ ಫಿಸಿಕಲ್ ಥೆರಪಿಸ್ಟ್ ಗಳ ಅಗತ್ಯವಿರುತ್ತದೆ. ಇವರು ಮಸಾಜ್ ಹಾಗೂ ಕೆಲವೊಂದು ವ್ಯಾಯಾಮಗಳನ್ನ ಹೇಳಿ ಕೊಡುವ ಮೂಲಕ ನೋವು ಶಮನವಾಗುವಂತೆ ಮಾಡುತ್ತಾರೆ.

ಫಿಸಿಯೋ ಥೆರಪಿ ಸಬ್‌ಜೆಕ್ಟ್ ನಲ್ಲಿ ಪದವಿ ಇಲ್ಲವೇ ಡಿಪ್ಲೋಮಾ ಕೋರ್ಸ್ ಮಾಡಿದ್ದರೆ ಸಾಕು. ಹಲವಾರು ಜಿಮ್ ಕೇಂದ್ರಗಳು ತಮ್ಮದೇ ಆದ ಫಿಸಿಕಲ್ ಥೆರಪಿಸ್ಟ್ ಅವರನ್ನ ಹೊಂದಿರುತ್ತದೆ. ಫಿಸಿಯೋ ಥೆರಪಿಸ್ಟ್ ಗಳ ಸ್ಟಾರ್ಟಿಂಗ್ ವೇತನವೇ 15000 ರೂ ಪ್ರತಿ ತಿಂಗಳಿಗೆ ಇರುತ್ತದೆ.

ಇಂಡಿಯನ್ ಏರ್‌ಪೋರ್ಸ್ ನಲ್ಲಿ ಏರ್‌ಮ್ಯಾನ್ ಆಗುವುದು ಹೇಗೆ?

ಫಿಟ್ನೆಸ್ ಡಯಾಟಿಶನ್:

ಹೌದು ಹುರಿದಾದ ದೇಹ ಇಲ್ಲ ಸ್ಲಿಮ್ ಬಾಡಿ ನಿಮ್ಮದಾಗಬೇಕೆಂದ್ರೆ ಬರೀ ವರ್ಕೌಟ್ ಮಾಡಿದ್ರೆ ಸಾಲದು, ಬದಲಿಗೆ, ನೀವು ಸೇವಿಸುವ ಆಹಾರದತ್ತನೂ ಗಮನ ಕೊಡುವುದು ಅಗತ್ಯವಿದೆ. ಇನ್ನು ಲೈಫ್ ಸ್ಟೈಲ್ ಹಾಗೂ ಆಚಾರ ವಿಚಾರಗಳಿಂದ ಪ್ರತಿಯೊಬ್ಬರ ಆಹಾರ ಶೈಲಿಯೂ ವಿಭಿನ್ನವಾಗಿದೆ. ಹಾಗಾಗಿ ಆಹಾರ ಪದ್ಧತಿ ಬಗ್ಗೆ ಮಾಹಿತಿ ನೀಡಲು ಇರುವ ವಿಭಾಗವೇ ಫಿಟ್ನೆಸ್ ಡಯಾಟಿಶನ್.

ನೀವು ಫಿಟ್ನೆಸ್ ಡಯಾಟಿಶನ್ ಆಗಬೇಕೆಂದಿದ್ದರೆ, ನ್ಯೂಟ್ರಿಶಿನಲ್ ಸೈನ್ಸ್ ಸಬ್‌ಜೆಕ್ಟ್ ನಲ್ಲಿ ಪದವಿ ಪಡೆದಿರಬೇಕು. ಇವರು ತಿಂಗಳಿಗೆ ಕಡಿಮೆ ಅಂದ್ರೂ 15000 ರೂ ಸಂಪಾದಿಸುತ್ತಾರೆ

ಫಿಟ್ನೆಸ್ ಟೆಕ್ ಇಂಜಿನೀಯರ್:

ಈಗಂತೂ ಫಿಟ್ನೆಸ್ ವರ್ಲ್ಡ್ ನಲ್ಲಿ ಅದೆಷ್ಟೋ ಯಂತ್ರಗಳನ್ನ ನೀವು ನೋಡಿರಬಹುದು. ಟ್ರೆಡ್ ಮಿಲ್‌ನಿಂದ ಹಿಡಿದು, ಅದೆಷ್ಟೋ ಯಂತ್ರಗಳು ಪ್ರತೀ ದಿನ ಮಾರ್ಕೆಟ್ ಗೆ ಕಾಲಿಡುತ್ತವೆ. ಆದ್ರೆ ಇವುಗಳ ನಿರ್ವಹಣೆಗೆ ಒಬ್ಬರು ಬೇಕೆ ಬೇಕು, ಅವರೇ ಫಿಟ್ನೆಸ್ ಟೆಕ್ ಇಂಜಿನೀಯರ್ ಗಳು.

ಈ ಕೋರ್ಸ್ ನೀವು ಮಾಡಿದ್ದಲ್ಲಿ ಕೆಲಸ ಗ್ಯಾರಂಟಿ...!?

ಇವರ ವಿದ್ಯಾರ್ಹತೆ ಸಾಫ್ಟ್ ವೇರ್ ಇಂಜಿನೀಯರಿಂಗ್, ಎಲೆಕ್ಟ್ರಾನಿಕ್ಸ್, ಬಯೋಮೆಕಾನಿಕ್ಸ್ ಸಬ್‌ಜೆಕ್ಟ್ ನಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. ಇವರ ಸ್ಟಾರ್ಟಿಂಗ್ ಸ್ಯಾಲರಿ 5  ರಿಂದ 6 ಲಕ್ಷದ ರೂ ವರೆಗೆ ಇರುತ್ತದೆ.

For Quick Alerts
ALLOW NOTIFICATIONS  
For Daily Alerts

    English summary
    Gone are the days when fitness was a luxury of the rich. Today, there is an increasing awareness about the same and more and more people are looking forward to a healthier lifestyle. In an effort to achieve that, they are investing their time and effort towards their fitness goals. In such a scenario, we observe a rise in the number of fitness options that are available to an individual.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more