ಕನ್ನಡ ವಿಶ್ವವಿದ್ಯಾಲಯವು 2019-20 ನೇ ಸಾಲಿನ ಶೈಕ್ಷಣಿಕ ವರ್ಷದ ಡಿಪ್ಲೋಮಾ ಸ್ನಾತಕೋತ್ತರ ಪದವಿ ಮತ್ತು ಯೋಗ ಅಧ್ಯಯನ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಂಪಿಯ ವಿದ್ಯಾರಣ್ಯ ಆವರಣ ಮತ್ತು ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರಗಳಾದ ಕುಪ್ಪಳ್ಳಿ, ರಾಯಚೂರು ಜಿಲ್ಲೆಯ ದೇವದುರ್ಗಗಳಲ್ಲಿ ಅಧ್ಯಯನ ಮಾಡಬಹುದಾದ ಡಿಪ್ಲೋಮಾ ಸ್ನಾತಕೋತ್ತರ ಪದವಿ ಮತ್ತು ಯೋಗ ಅಧ್ಯಯನ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸುವವರು ಜುಲೈ 15ರೊಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳು:
ಕನ್ನಡ ಭಾಷಾಧ್ಯಯನ, ದ್ರಾವಿಡ ಭಾಷಾವಿಜ್ಞಾನ, ಹಸ್ತಪ್ರತಿಶಾಸ್ತ್ರ, ಭಾಷಾಂತರ, ಜಾನಪದ ಅಧ್ಯಯನ,ಮಾನವ ಶಾಸ್ತ್ರ, ಬುಡಕಟ್ಟು ಅಧ್ಯಯನ, ಶಾಸನಶಾಸ್ತ್ರ, ಪತ್ರಿಕೋದ್ಯಮ ,ಬುಡಕಟ್ಟು,ಪಂಚಾಯತ್ ರಾಜ್,ಯೋಗ ಅಧ್ಯಯನ,ಪುರಾತತ್ವ ವಸ್ತು ಸಂಗ್ರಹಾಲಯ ಶಾಸ್ತ್ರ ಮತ್ತು ಪ್ರವಾಸೋದ್ಯಮ ಸ್ನಾತಕೋತ್ತರ ಡಿಪ್ಲೋಮ
ಪ್ರವೇಶಾರ್ಹತೆ:
ಸ್ನಾತಕೋತ್ತರ ಡಿಪ್ಲೋಮಾಗಳಿಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ವಿಶ್ವವಿದ್ಯಾಲಯದಿಮದ ಮೂರು ವರ್ಷಗಳ ಯಾವುದೇ ಪದವಿ ಪಡೆದಿರಬೇಕು.
ಯೋಗ ಅಧ್ಯಯನ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ / ತತ್ಸಮಾನ ಕೋರ್ಸ್ನಲ್ಲಿ ತೇರ್ಗಡೆಯಾಗಿರಬೇಕು.
ಕುವೆಂಪು ವಿಶ್ವವಿದ್ಯಾನಿಲಯ 2019-20ನೇ ಸಾಲಿನ ದೂರ ಶಿಕ್ಷಣ ಪ್ರವೇಶಾತಿಗೆ ಅರ್ಜಿ ಆಹ್ವಾನ
ಪ್ರವೇಶ ಶುಲ್ಕದ ವಿವರ:
ಅವಧಿ: ಒಂದು ವರ್ಷ
ಅರ್ಜಿ ಶುಲ್ಕ: 300/-ರೂ (ಪ.ಜಾ/ಪ.ಪಂ. ಹಾಗೂ ಪ್ರ-1ರ ವಿದ್ಯಾರ್ಥಿಗಳಿಗೆ ಶೇ.50% ರಿಯಾಯಿತಿ ಇರುತ್ತದೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15:7:2019
ದಂಡ ಶುಲ್ಕ ರೂ.200/-ಗಳೊಂದಿಗೆ ಕೊನೆಯ ದಿನಾಂಕ: 20:7:2019
ಅರ್ಜಿ ಸಲ್ಲಿಸುವುದು ಹೇಗೆ:
ವಿದ್ಯಾರ್ಥಿಗಳು ಕನ್ನಡ ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ ಶುಲ್ಕ ಪಾವತಿಸಿ ರಸೀದಿ ಪಡೆದು ಅಧ್ಯಯನಾಂಗದಿಂದ ಅರ್ಜಿಯನ್ನು ಪಡೆಯುವುದು ಅಥವಾ ಅಭ್ಯರ್ಥಿಗಳು ಕನ್ನಡ ವಿಶ್ವವಿದ್ಯಾಲಯದ ವೆಬ್ಸೈಟ್ http://www.kannadauniversity.org/kannada/ ನಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿ ಮತ್ತು ಶುಲ್ಕದ ಡಿ.ಡಿ.ಯನ್ನು ಹಣಕಾಸು ಅಧಿಕಾರಿಗಳು,ಕನ್ನಡ ವಿಶ್ವವಿದ್ಯಾಲಯ, ಹಂಪಿ,ವಿದ್ಯಾರಣ್ಯ ಇವರ ಹೆಸರಿನಲ್ಲಿ (ಹೊಸಪೇಟೆಯ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ,ಬಳ್ಳಾರಿ ಜಿಲ್ಲೆ, ಇಲ್ಲಿ ಪಾವತಿಯಾಗುವಂತೆ) ಪಡೆದು, ನಿರ್ದೇಶಕರು, ಅಧ್ಯಯನಾಂಗ,ಕನ್ನಡ ವಿಶ್ವವಿದ್ಯಾಲಯ,ಹಂಪಿ,ವಿದ್ಯಾರಣ್ಯ-583276, ಇವರಿಗೆ ದಿನಾಂಕ:15:7:2019ರ ಒಳಗಾಗಿ ಸಲ್ಲಿಸಬೇಕು.
ಹಂಪಿ ಕನ್ನಡ ವಿಶ್ವವಿದ್ಯಾಲಯ
"ವಿದ್ಯಾರಣ್ಯ" ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ. ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ.
ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ 'ಅಕ್ಷರ'ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. "ಕ್ರಿಯಾಶಕ್ತಿ'' ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. 'ಭುವನ ವಿಜಯ'. ವಿವಿಧ ನಿಕಾಯಗಳ ವಿವಿಧ ವಿಭಾಗಗಳು 'ತ್ರಿಪದಿ', 'ಕೂಡಲಸಂಗಮ', 'ತುಂಗಭದ್ರ', 'ಘಟಿಕಾಲಯ', 'ಕೇಶೀರಾಜ', 'ಹರಿಹರ', 'ನಾಗವರ್ಮ', 'ಅಕ್ಕ', 'ಅಲ್ಲಮ', 'ನಾದಲೀಲೆ', 'ಕಂಠಪತ್ರ', 'ಜಕ್ಕಣ ಮಂಟಪ' ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.