Karnataka ITI Admission 2021 Dates: ಐಟಿಐ ಪ್ರವೇಶಕ್ಕೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನ

ಆಗಸ್ಟ್ 2021ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಹಾಗೂ ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಆನ್-ಲೈನ್ ಮೂಲಕ ಆಗಸ್ಟ್ 28,2021ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ರಾಜ್ಯದ 270 ಸರ್ಕಾರಿ ಹಾಗೂ 196 ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಆಗಸ್ಟ್ 2021ನೇ ಸಾಲಿಗೆ ಮೆರಿಟ್ ಕಂ ರಿಸರ್ವೇಶನ್ ಆಧಾರಿತ ಪ್ರವೇಶಗಳನ್ನು ಆನ್‌ಲೈನ್ ಮೂಲಕ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಐಟಿಐ ಪ್ರವೇಶ ಪ್ರಕ್ರಿಯೆ ಆರಂಭ

ವಿದ್ಯಾರ್ಹತೆ:

ವೃತ್ತಿಯ ಅನುಸಾರ 8ನೇ ತರಗತಿ ಉತ್ತೀರ್ಣ ಹಾಗೂ ಎಸ್ಎಸ್ಎಲ್ಸಿ ಅನುತ್ತೀರ್ಣ/ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳು ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಎನ್.ಸಿ.ವಿ.ಟಿ ಸಂಯೋಜಿತ ಸಿಟಿಎಸ್ ಯೋಜನೆಯಡಿಯಲ್ಲಿರುವ ಇಂಜಿನಿಯರಿಂಗ್ ಹಾಗೂ ನಾನ್-ಇಂಜಿನಿಯರಿಂಗ್ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಅರ್ಜಿ ಹಾಕಬಹುದು.

ವಯೋಮಿತಿ:

ಆಗಸ್ಟ್ 17,2020ರ ಅನ್ವಯ 14 ವರ್ಷ ಮೇಲ್ಪಟ್ಟ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಬೋಧನಾ ಶುಲ್ಕ:

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸರ್ಕಾರದಿಂದ ನಿಗದಿಪಡಿಸಿರುವ ವಾರ್ಷಿಕ ಬೋಧನಾ ಶುಲ್ಕಗಳ ವಿವರ:
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು - 1,200/-ರೂ
ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು - 2,400/-ರೂ

ರಾಜ್ಯದಲ್ಲಿ ಐಟಿಐ ಪ್ರವೇಶ ಪ್ರಕ್ರಿಯೆ ಆರಂಭ

ಅರ್ಜಿ ಸಲ್ಲಿಕೆ:

ಅರ್ಹ ಅಭ್ಯರ್ಥಿಗಳು ಆನ್‌ಲೂನ್ ನಲ್ಲಿ ಇಲಾಖೆಯ ಅಧಿಕೃತ ವೆಬ್‌ಸೈಟ್ http://emptrg.kar.nic.in/etiindex.asp ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಆಗಸ್ಟ್ 17,2021 ರಿಂದ ಆಗಸ್ಟ್ 28,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಡಿಜಿಟಿ, ನವದೆಹಲಿ ಇವರಿಂದ ಸಂಯೋಜನೆ ಪಡೆದ (ಎನ್.ಸಿ.ವಿ.ಟಿ) ಘಟಕಗಳಿಗೆ ಮಾತ್ರ ಪ್ರವೇಶ ನಡೆಸಲಾಗುವುದು. ಹಾಗೂ ಪ್ರತಿಯೊಂದು ವೃತ್ತಿಯಲ್ಲಿನ ನಿಗದಿತ ಸ್ಥಾನಗಳಿಗಿಂತ ಹೆಚ್ಚುವರಿಯಾಗಿ ಪ್ರವೇಶ ನೀಡಲಾಗುವುದಿಲ್ಲ.

For Quick Alerts
ALLOW NOTIFICATIONS  
For Daily Alerts

English summary
Department of employment and training invited applications for karnataka ITI admission 2021. Apply before august 28.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X