2017-18ನೇ ಸಾಲಿನ ಕೇಂದ್ರೀಯ ವಿದ್ಯಾಲಯದಲ್ಲಿ 1ನೇ ತರಗತಿಯ ದಾಖಲಾತಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ

ಮಾನವ ಸಂಪನ್ಮೂಲ ಅಭಿವೃದ್ಧಿ (MHRD) ಆಶ್ರಯದಲ್ಲಿ ಸ್ಥಾಪಿತವಾಗಿರುವ ಕೇಂದ್ರಿಯ ವಿದ್ಯಾಲಯಗಳಲ್ಲಿ 1ನೇ ತರಗತಿಯ ದಾಖಲಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.
ಆನ್‌ಲೈನ್ ಪ್ರಕ್ರಿಯೆ
| ಒಂದನೇ ತರಗತಿಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ | 08-02-2017 (ಬೆಳಗ್ಗೆ 8 ರಿಂದ) |
| ಒಂದನೇ ತರಗತಿಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 10-03-2017 (ಸಂಜೆ 4 ರವರೆಗೆ) |
| ಆಯ್ಕೆಯಾದವರ ಪಟ್ಟಿ ಬಿಡುಗಡೆ ಮತ್ತು ದಾಖಲಾತಿ ಪ್ರಕ್ರಿಯೆ | 20-03-2017 ನಂತರ |
| ಎರಡನೇ ಮತ್ತು ನಂತರದ ತರಗತಿಗಳ ನೋಂದಣಿ ಪ್ರಕ್ರಿಯೆ ಪ್ರಾರಂಭದ ದಿನಾಂಕ | 05-04-2017 (ಬೆಳಗ್ಗೆ 8 ರಿಂದ) |
| ಎರಡನೇ ಮತ್ತು ನಂತರದ ತರಗತಿಗಳ ನೋಂದಣಿ ಕೊನೆಯ ದಿನಾಂಕ | 18-04-2017 (ಸಂಜೆ 4 ರವರೆಗೆ) |
ದಿನಾಂಕ 08 -02 -2017 ರಂದು ಬೆಳಿಗ್ಗೆ 8 ಗಂಟೆಯಿಂದ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, 10 -03 -2017 ರಂದು (ಸಂಜೆ 4 ಗಂಟೆಯ ಒಳಗೆ) ಅರ್ಜಿ ಸಲ್ಲಿಸಲು ಕೊನೆಯ ದಿನ.ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು 20 -03 -2017 ರ ನಂತರ ವೆಬ್ ಸೈಟ್ ನಲ್ಲಿ ಪ್ರಕಟಿಸಿ ದಾಖಲಾತಿ ಮಾಡಿಕೊಳ್ಳಲಾಗುವುದು. ಎರಡನೇ ಮತ್ತು ನಂತರದ ತರಗತಿಗಳನ್ನು ದಿನಾಂಕ 05 -04 -2017 ಬೆಳಗ್ಗೆ 8 ಗಂಟೆಯಿಂದ ದಿನಾಂಕ 18 -04 -2017 ರ ಸಂಜೆ 04 ಗಂಟೆವರೆಗೂ ಆನ್‌ಲೈನ್ ಮೂಲಕ ನೋಂದಾಯಿಸಿಬಹುದಾಗಿದೆ.
ಅರ್ಜಿ ಸಲ್ಲಿಸಲು http://kvsangathan.nic.in/ ಕ್ಲಿಕ್ ಮಾಡಿ
ಕೇಂದ್ರಿಯ ವಿದ್ಯಾಲಯ
1963ನೇ ಇಸವಿಯಲ್ಲಿ 'ಸೆಂಟ್ರಲ್ ಸ್ಕೂಲ್ಸ್' ಎಂಬ ಹೆಸರಿನಲ್ಲಿ ಪ್ರಾರಂಭವಾದ ಕೇಂದ್ರ ಸರ್ಕಾರದ ಈ ಶಾಲೆಗಳು ನಂತರದ ದಿನಗಳಲ್ಲಿ ಕೇಂದ್ರಿಯ ವಿದ್ಯಾಲಯ ಎಂಬ ಹೆಸರು ಪಡೆಯಿತು. ವಿದೇಶದಲ್ಲಿ ಮೂರು ಶಾಲೆ ಸೇರಿದಂತೆ ಭಾರತದಲ್ಲಿ ಸಾವಿರಕ್ಕೂ ಹೆಚ್ಚಿನ ಶಾಲೆಗಳಿವೆ. ಎಲ್ಲಾ ಶಾಲೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ)ಯಿಂದ ಗುರುತಿಸಲ್ಪಟ್ಟಿವೆ.ಸಾಮಾನ್ಯವಾಗಿ ದೂರದಲ್ಲಿ ನಿಯೋಜಿತರಾಗಿರುವ ಭಾರತೀಯ ರಕ್ಷಣಾ ಸೇವೆಯ ಸಿಬ್ಬಂದಿಗಳ ಮಕ್ಕಳಿಗೋಸ್ಕರ ಶಿಕ್ಷಣ ನೀಡುವುದು ಈ ಶಾಲೆಗಳ ಉದ್ದೇಶ. ಸೈನ್ಯವು ತನ್ನದೇ ಆದ ಸ್ವಂತ ಆರ್ಮಿ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿದ ನಂತರ ಕೇಂದ್ರಿಯ ಶಾಲೆಗಳ ಸೇವೆಯನ್ನು ಎಲ್ಲಾ ಕೇಂದ್ರ ಸರ್ಕಾರದ ನೌಕರರಿಗೆ ವಿಸ್ತರಿಸಲಾಯಿತು.

ಕೇಂದ್ರಿಯ ವಿದ್ಯಾಲಯ ಶಾಲೆಗಳು ಏಕರೂಪದ ಶಿಕ್ಷಣ ಪದ್ಧತಿ ಅನುಸರಿಸುತ್ತಿದ್ದು , ಎಲ್ಲ ಶಾಲೆಗಳು ಸಿ ಬಿ ಎಸ್ ಇ ಪಠ್ಯ ಕ್ರಮವನ್ನೇ ಅಳವಡಿಸಲಾಗಿದೆ. ಐದು ದಶಕಗಳಿಗೂ ಹೆಚ್ಚು ವರ್ಷಗಳಿಂದ ಶಿಕ್ಷಣ ನೀಡುತ್ತಿರುವ ಕೇಂದ್ರಿಯ ವಿದ್ಯಾಲಯಗಳು ಸರ್ಕಾರೀ ನೌಕರರ ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಆಗಬಾರದು ಎಂಬ ಉದ್ದೇಶವನ್ನು ಹೊಂದಿವೆ.ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಕೇಂದ್ರಿಯ ವಿದ್ಯಾಲಯ ಸಂಘಟನೆಯ ಅಧ್ಯಕ್ಷರಾಗಿರುತ್ತಾರೆ ಮತ್ತು ಉಪ ಅಧ್ಯಕ್ಷರಾಗಿ ರಾಜ್ಯ MHRD ಸಚಿವರು ಕಾರ್ಯ ನಿರ್ವಹಿಸುತ್ತಾರೆ.
ಹೆಚ್ಚಿನ ವಿವರಗಳಿಗಾಗಿ ಕೇಂದ್ರಿಯ ವಿದ್ಯಾಲಯ ವೆಬ್ ಸೈಟ್ http://kvsangathan.nic.in/ ಕ್ಲಿಕ್ ಮಾಡಿ


Click it and Unblock the Notifications











