2019-20ನೇ ಸಾಲಿನ ಕೇಂದ್ರಿಯ ವಿದ್ಯಾಲಯಗಳಲ್ಲಿ ದಾಖಲಾತಿಗೆ ಅರ್ಜಿ ಆಹ್ವಾನ

ಮಾನವ ಸಂಪನ್ಮೂಲ ಅಭಿವೃದ್ಧಿ ( ಎಂಹೆಚ್‌ಆರ್‌ಡಿ) ಆಶ್ರಯಲದಲ್ಲಿ ಸ್ಥಾಪಿತವಾಗಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ 1ನೇ ತರಗತಿಯ ದಾಖಲಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.

ಕೇಂದ್ರೀಯ ವಿದ್ಯಾಲಯಗಳಲ್ಲಿ ದಾಖಲಾತಿಗೆ ಅರ್ಜಿ ಆಹ್ವಾನ

ಆನ್‌ಲೈನ್ ಪ್ರಕ್ರಿಯೆ ದಿನಾಂಕ:

ಒಂದನೇ ತರಗತಿಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ1-3-2019 ( ಬೆಳಗ್ಗೆ 8ರಿಂದ )
ಒಂದನೇ ತರಗತಿಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ19-3-2019 ( ಸಂಜೆ 4ರ ವರೆಗೆ )
ಆಯ್ಕೆಯಾದವರ ಪಟ್ಟಿ ಬಿಡುಗಡೆ ಮತ್ತು ದಾಖಲಾತಿ ಪ್ರಕ್ರಿಯೆಮೊದಲ ಪಟ್ಟಿ -26-3-2019

ಎರಡನೇ ಪಟ್ಟಿ - 9-4-2019

ಮೂರನೆ ಪಟ್ಟಿ- 23-4-2019

ಉಳಿದ ಸೀಟುಗಳ ಹಂಚಿಕೆಗಾಗಿ ಎರಡನೇ ನೊಂದಣಿ ಪ್ರಕ್ರಿಯೆಯ ಅಧಿಸೂಚನೆಯ ಪ್ರಟಕಟಣೆಅಧಿಸೂಚನೆ 30-3-2019

ನೊಂದಣಿ 30-3-2019 ರಿಂದ 6-4-2019ರ ವರೆಗೆ

ದಾಖಲಾತಿ 8-4-2019 ರಿಂದ 15-4-2019ರವರೆಗೆ

ತರಗತಿ II ರ ನೊಂದಣಿ ಪ್ರಕ್ರಿಯೆ( XI ತರಗತಿ ಹೊರತುಪಡಿಸಿ)2-4-2019ರ ಬೆಳಗ್ಗೆ 8 ರಿಂದ 9-4-2019 ರ ಸಂಜೆ 4ಗಂಟೆಯೊಳಗೆ
ತರಗತಿ IIರ ಪಟ್ಟಿ12-4-2019
ತರಗತಿ IIರ ದಾಖಲಾತಿ ದಿನಾಂಕ12-4-2019 ರಿಂದ 20-4-2019
ದಾಖಲಾತಿಯ ಕೊನೆಯ ದಿನಾಂಕ (XI ತರಗತಿ ಹೊರತುಪಡಿಸಿ)30-4-2019
XI ತರಗತಿಗಳ ದಾಖಲಾತಿಗೆ ಕೊನೆಯ ದಿನಾಂಕ1-7-2019

ದಿನಾಂಕ 19-3-2019 ರಂದು (ಸಂಜೆ 4 ಗಂಟೆಯ ಒಳಗೆ )ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಮಾರ್ಚ್26,2019 ರ ನಂತರ ವೆಬ್‌ಸೈಟ್ ನಲ್ಲಿ ಪ್ರಕಟಿಸಿ ದಾಖಲಾತಿ ಮಾಡಿಕೊಳ್ಳಲಾಗುವುದು.ಎರಡನೇ ಮತ್ತು ನಂತರದ ತರಗತಿಗಳ ದಾಖಲಾತಿಯ ದಿನಾಂಕಗಳನ್ನು ಮೇಲೆ ತಿಳಿಸಲಾಗಿದೆ.

ಕೇಂದ್ರೀಯ ವಿದ್ಯಾಲಯ:

1963 ಇಸವಿಯಲ್ಲಿ "ಸೆಂಟ್ರಲ್ ಸ್ಕೂಲ್ಸ್" ಎಂಬ ಹೆಸರಿನಲ್ಲಿ ಪ್ರಾರಂಭವಾದ ಕೇಂದ್ರ ಸರ್ಕಾರದ ಈ ಶಾಲೆಗಳು ನಂತರದ ದಿನಗಳಲ್ಲಿ ಕೇಂದ್ರೀಯ ವಿದ್ಯಾಲಯ ಎಂಬ ಹೆಸರು ಪಡೆಯಿತು.ವಿದೇಶದಲ್ಲಿ ಮೂರು ಶಾಲೆ ಸೇರಿದಂತೆ ಭಾರತದಲ್ಲಿ ಸಾವಿರಕ್ಕೂ ಹೆಚ್ಚಿನ ಶಾಲೆಗಳಿವೆ. ಎಲ್ಲಾ ಶಾಲೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಯಿಂದ ಗುರುತಿಸಲ್ಪಟ್ಟಿವೆ. ಸಾಮಾನ್ಯವಾಗಿ ದೂರದಲ್ಲಿ ನಿಯೋಜಿತರಾಗಿರುವ ಭಾರತೀಯ ರಕ್ಷಣಾ ಸೇವೆಯ ಸಿಬ್ಬಂದಿಗಳ ಮಕ್ಕಳಿಗೋಸ್ಕರ ಶಿಕ್ಷಣ ನೀಡುವುದು ಈ ಶಾಲೆಗಳ ಉದ್ದೇಶ. ಸೈನ್ಯವು ತನ್ನದೇ ಆದ ಸ್ವಂತ ಆರ್ಮಿ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿದ ನಂತರ ಕೇಂದ್ರೀಯ ಶಾಲೆಗಳ ಸೇವೆಯನ್ನು ಎಲ್ಲಾ ಕೇಂದ್ರ ಸರ್ಕಾರದ ನೌಕರರಿಗೆ ವಿಸ್ತರಿಸಲಾಯಿತು.

ಆನ್‌ಲೈನ್ ಮೂಲಕ ಅರ್ಜಿ:

ಕೇಂದ್ರೀಯ ವಿದ್ಯಾಲಯ ಶಾಲೆಗಳು ಏಕರೂಪ ಶಿಕ್ಷಣ ಪದ್ಧತಿ ಅನುಸರಿಸುತ್ತಿದ್ದು, ಎಲ್ಲ ಶಾಲೆಗಳು ಸಿಬಿಎಸ್‌ಇ ಪಠ್ಯ ಕ್ರಮವನ್ನೇ ಅಳವಡಿಸಲಾಗಿದೆ. ಐದು ದಶಕಗಳಿಗೂ ಹೆಚ್ಚು ವರ್ಷಗಳಿಂದ ಶಿಕ್ಷಣ ನೀಡುತ್ತಿರುವ ಕೇಂದ್ರೀಯ ವಿದ್ಯಾಲಯಗಳು ಸರ್ಕಾರೀ ನೌಕರರ ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಆಗಬಾರದು ಎಂಬ ಉದ್ದೇಶವನ್ನು ಹೊಂದಿವೆ. ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಅಧ್ಯಕ್ಷಕರಾಗಿರುತ್ತಾರೆ ಮತ್ತು ಉಪ ಅಧ್ಯಕ್ಷರಾಗಿ ರಾಜ್ಯ ಎಂಹೆಚ್‌ಆರ್‌ಡಿ ಸಚಿವರು ಕಾರ್ಯ ನಿರ್ವಹಿಸುತ್ತಾರೆ.

ಹೆಚ್ಚಿನ ವಿವರಗಳಿಗಾಗಿ ಕೇಂದ್ರೀಯ ವಿದ್ಯಾಲಯ ವೆಬ್‌ಸೈಟ್ https://kvsangathan.nic.in/ ಕ್ಲಿಕ್ ಮಾಡಿ

ಮತ್ತು ಈ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Kendriya Vidyalaya Sangathan (KVS) has released the admission schedule for the academic session 2019-20
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+