ಕೆಂದ್ರೀಯ ವಿದ್ಯಾಲಯದ ಒಂದನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ಏಪ್ರಿಲ್ 13ರ ವರೆಗೆ ವಿಸ್ತರಿಸಲಾಗಿದೆ.

ಕೆಂದ್ರೀಯ ವಿದ್ಯಾಲಯವು ಆಸಕ್ತ ಅಭ್ಯರ್ಥಿಗಳಿಂದ ಫೆಬ್ರವರಿ 28,2022 ರಿಂದ ಏಪ್ರಿಲ್ 11,2022ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಆದರೆ ಇದೀಗ ಅರ್ಜಿ ಸಲ್ಲಿಕೆಯ ಅವಧಿಯನ್ನು ಏಪ್ರಿಲ್ 13ರ ವರೆಗೆ ವಿಸ್ತರಿಸಲಾಗಿದೆ.
ವೆಬ್‌ಸೈಟ್‌ನಲ್ಲಿನ ಅಧಿಕೃತ ಸೂಚನೆಯ ಪ್ರಕಾರ, "ಒಂದು ಮಗುವು ಒಂದೇ ವಿದ್ಯಾಲಯಕ್ಕೆ ಅನೇಕ ಅರ್ಜಿಗಳನ್ನು ಸಲ್ಲಿಸದಂತೆ ಸಲಹೆ ನೀಡಲಾಗಿದೆ. ಒಂದೇ ಕೇಂದ್ರೀಯ ವಿದ್ಯಾಲಯದಲ್ಲಿ ಒಂದು ಮಗು ಅನೇಕ ಭಾರಿ ನೋಂದಣಿ ನಮೂನೆಗಳನ್ನು ಸಲ್ಲಿಸಿದ್ದಲ್ಲಿ, ಕೊನೆಯ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಕೇಂದ್ರೀಯ ವಿದ್ಯಾಲಯ ಪ್ರವೇಶ ಪ್ರಕ್ರಿಯೆಯಲ್ಲಿ ಎರಡು ಶಿಫ್ಟ್ ಇರಲಿದ್ದು, ಪ್ರವೇಶ ಪ್ರಕ್ರಿಯೆಯಲ್ಲಿ ಪ್ರತಿ ಶಿಫ್ಟ್ ಅನ್ನು ಪ್ರತ್ಯೇಕ ಎಂದು ವಿಶ್ವವಿದ್ಯಾಲಯ ಪರಿಗಣಿಸಲಾಗುತ್ತದೆ."

KVS ಪ್ರವೇಶಾತಿ 2022 ಅರ್ಹತಾ ಮಾನದಂಡಗಳು:
ಕನಿಷ್ಟ ಆರು ವರ್ಷ ವಯಸ್ಸಿನ ವಿದ್ಯಾರ್ಥಿಗಳನ್ನು ಅರ್ಜಿ ಸಲ್ಲಿಸಲು ಅರ್ಹರು ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್ 1 ರಂದು ಜನಿಸಿದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
KVS ಪ್ರವೇಶಾತಿ 2022 ಅಗತ್ಯವಿರುವ ದಾಖಲೆಗಳು :
* ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಡಿಜಿಟಲ್ ಅಥವಾ ಸ್ಕ್ಯಾನ್ ಮಾಡಿದ ಫೋಟೋ (ಗರಿಷ್ಠ ಗಾತ್ರ 256KB ಹೊಂದಿರುವ JPEG ಫೈಲ್)
* ವಿದ್ಯಾರ್ಥಿಯ ಜನನ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿ
* ಆರ್ಥಿಕವಾಗಿ ದುರ್ಬಲ ಉಳ್ಳವರಾಗಿದ್ದಲ್ಲಿ ಸರ್ಕಾರದಿಂದ ಪಡೆದ ಪ್ರಮಾಣ ಪತ್ರಗಳು
* ಪೋಷಕರ/ಗಾರ್ಡಿಯನ್ ಗಳ ವರ್ಗಾವಣೆಯ ಪ್ರಮಾಣ ಪತ್ರಗಳು
KVS ಪ್ರವೇಶಾತಿ 2022ಗೆ ಅರ್ಜಿ ಸಲ್ಲಿಸುವುದು ಹೇಗೆ ?:
ಹಂತ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ https://kvsonlineadmission.kvs.gov.in/index.html ಗೆ ಭೇಟಿ ನೀಡಿ.
ಹಂತ 2: ಅಭ್ಯರ್ಥಿಗಳು ನಿಮ್ಮ ರುಜುವಾತುಗಳನ್ನು ನಮೂದಿಸಿ ಮತ್ತು ನೋಂದಾಯಿಸಿ.
ಹಂತ 3: ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನೀವು ಲಾಗಿನ್ ಕೋಡ್ ಅನ್ನು ಸ್ವೀಕರಿಸುತ್ತೀರಿ.
ಹಂತ 4: ವಿವರಗಳನ್ನು ಪೂರ್ಣಗೊಳಿಸಿದ ನಂತರ ಫಾರ್ಮ್ ಅನ್ನು ಸಲ್ಲಿಸಿ.
ಹಂತ 5: ನಿಮಗೆ ಲಾಗಿನ್ ಕೋಡ್ ಹೊರತುಪಡಿಸಿ ಇನ್ನೊಂದು ಕೋಡ್ ಲಭ್ಯವಾಗಲಿದೆ. ಅದನ್ನು ನಮೂದಿಸಿ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ.
ಹಂತ 6: ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿ ನಂತರ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ.
ಅಭ್ಯರ್ಥಿಗಳು ತಮ್ಮ ಹೆಸರು ನೊಂದಾಯಿಸಿಕೊಳ್ಳುವುದು ಮತ್ತು ಅರ್ಜಿ ಸಲ್ಲಿಸುವುದು ಮಾತ್ರ ಮಗುವಿನ ಪ್ರವೇಶವನ್ನು ಖಾತರಿಪಡಿಸುವುದಿಲ್ಲ ಎಂದು ಕೆವಿಎಸ್ ಅಧಿಕೃತ ಪ್ರಕಟಣೆ ತಿಳಿಸಿದೆ. "ಲಭ್ಯವಿರುವ ಸೀಟುಗಳನ್ನು ಅವಲಂಬಿಸಿ ಮತ್ತು KVS ಮಾರ್ಗಸೂಚಿಗಳ ಪ್ರಕಾರ ಅರ್ಜಿಯ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಪ್ರವೇಶದ ಸಮಯದಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳ ಮೂಲಗಳನ್ನು ಒದಗಿಸಿದ ನಂತರ ಪ್ರತ್ಯೇಕ ವಿದ್ಯಾಲಯಗಳು ಪ್ರವೇಶವನ್ನು ನೀಡುತ್ತವೆ" ಎಂದು ಕೂಡ ತಿಳಿಸಿದೆ.
ಕೇಂದ್ರಿಯ ವಿದ್ಯಾಲಯ :
1963ನೇ ಇಸವಿಯಲ್ಲಿ 'ಸೆಂಟ್ರಲ್ ಸ್ಕೂಲ್ಸ್' ಎಂಬ ಹೆಸರಿನಲ್ಲಿ ಪ್ರಾರಂಭವಾದ ಕೇಂದ್ರ ಸರ್ಕಾರದ ಈ ಶಾಲೆಗಳು ನಂತರದ ದಿನಗಳಲ್ಲಿ ಕೇಂದ್ರಿಯ ವಿದ್ಯಾಲಯ ಎಂಬ ಹೆಸರು ಪಡೆಯಿತು. ವಿದೇಶದಲ್ಲಿ ಮೂರು ಶಾಲೆ ಸೇರಿದಂತೆ ಭಾರತದಲ್ಲಿ ಸಾವಿರಕ್ಕೂ ಹೆಚ್ಚಿನ ಶಾಲೆಗಳಿವೆ. ಎಲ್ಲಾ ಶಾಲೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ)ಯಿಂದ ಗುರುತಿಸಲ್ಪಟ್ಟಿವೆ.ಸಾಮಾನ್ಯವಾಗಿ ದೂರದಲ್ಲಿ ನಿಯೋಜಿತರಾಗಿರುವ ಭಾರತೀಯ ರಕ್ಷಣಾ ಸೇವೆಯ ಸಿಬ್ಬಂದಿಗಳ ಮಕ್ಕಳಿಗೋಸ್ಕರ ಶಿಕ್ಷಣ ನೀಡುವುದು ಈ ಶಾಲೆಗಳ ಉದ್ದೇಶ. ಸೈನ್ಯವು ತನ್ನದೇ ಆದ ಸ್ವಂತ ಆರ್ಮಿ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಿದ ನಂತರ ಕೇಂದ್ರಿಯ ಶಾಲೆಗಳ ಸೇವೆಯನ್ನು ಎಲ್ಲಾ ಕೇಂದ್ರ ಸರ್ಕಾರದ ನೌಕರರಿಗೆ ವಿಸ್ತರಿಸಲಾಯಿತು.
ಕೇಂದ್ರಿಯ ವಿದ್ಯಾಲಯ ಶಾಲೆಗಳು ಏಕರೂಪದ ಶಿಕ್ಷಣ ಪದ್ಧತಿ ಅನುಸರಿಸುತ್ತಿದ್ದು , ಎಲ್ಲ ಶಾಲೆಗಳು ಸಿ ಬಿ ಎಸ್ ಇ ಪಠ್ಯ ಕ್ರಮವನ್ನೇ ಅಳವಡಿಸಲಾಗಿದೆ. ಐದು ದಶಕಗಳಿಗೂ ಹೆಚ್ಚು ವರ್ಷಗಳಿಂದ ಶಿಕ್ಷಣ ನೀಡುತ್ತಿರುವ ಕೇಂದ್ರಿಯ ವಿದ್ಯಾಲಯಗಳು ಸರ್ಕಾರೀ ನೌಕರರ ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಆಗಬಾರದು ಎಂಬ ಉದ್ದೇಶವನ್ನು ಹೊಂದಿವೆ.ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಕೇಂದ್ರಿಯ ವಿದ್ಯಾಲಯ ಸಂಘಟನೆಯ ಅಧ್ಯಕ್ಷರಾಗಿರುತ್ತಾರೆ ಮತ್ತು ಉಪ ಅಧ್ಯಕ್ಷರಾಗಿ ರಾಜ್ಯ MHRD ಸಚಿವರು ಕಾರ್ಯ ನಿರ್ವಹಿಸುತ್ತಾರೆ.
ಕೇಂದ್ರಿಯ ವಿಶ್ವವಿದ್ಯಾಲಯದ ಬಗ್ಗೆ ಹೆಚ್ಚು ತಿಳಿಯಲು http://kvsangathan.nic.in/ ವೆಬ್ ಸೈಟ್ ಗಮನಿಸಿ.


Click it and Unblock the Notifications











