ಮೈಸೂರು ರಂಗಾಯಣದಲ್ಲಿ ಪ್ರಸ್ತುತ 2021-22ನೇ ಸಾಲಿನಲ್ಲಿ 10 ತಿಂಗಳ ರಂಗ ಶಿಕ್ಷಣ ಡಿಪ್ಲೊಮಾ ಕೋರ್ಸಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 1 ರಿಂದ ಆಗಸ್ಟ್ 16,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಕಳೆದ 11 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ (Bharathiya Theatre Institute) ಪೂರ್ಣ ಪ್ರಮಾಣದ ರಂಗ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ಚವಿದ್ಯಾಲಯದ ಮಾನ್ಯತೆ ಪಡೆದಿದೆ.

ಪ್ರವೇಶಕ್ಕೆ ಅರ್ಹತೆ:
ರಂಗಶಿಕ್ಷಣಕ್ಕೆ ಸೇರಬಯಸುವ ಅಭ್ಯರ್ಥಿಗೆ ಕನಿಷ್ಠ ವಿದ್ಯಾರ್ಹತೆ ಪಿ.ಯು.ಸಿ/ತತ್ಸಮಾನ ಪಾಸಾಗಿರಬೇಕು. ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ ಕನಿಷ್ಟ 18 ರಿಂದ ಗರಿಷ್ಟ 28 ವರ್ಷದೊಳಗಿನವರಾಗಿರಬೇಕು. ಕನ್ನಡ ಭಾಷೆ ಓದಲು, ಬರೆಯಲು ಬರುವುದು ಕಡ್ಡಾಯ.
ಭಾರತೀಯ ರಂಗಶಿಕ್ಷಣ ಕೇಂದ್ರ:
ಭಾರತೀಯ ರಂಗ ಶಿಕ್ಷಣ ಕೇಂದ್ರವನ್ನು ರಂಗಾಸಕ್ತ ಯುವಕರಿಗೆ ರಂಗ ಶಿಕ್ಷಣ ನೀಡುವ ಉದ್ದೇಶದಿಂದ 2010-11ರಲ್ಲಿ ಪ್ರಾರಂಭಿಸಲಾಯಿತು.
ರಂಗ ಶಿಕ್ಷಣದಲ್ಲಿ ಡಿಪ್ಲೋಮಾ ಕೋರ್ಸ್:
ರಂಗ ಶಿಕ್ಷಣದಲ್ಲಿ ತರಬೇತಿ ನೀಡುವ ಡಿಪ್ಲೋಮಾ ಕೋರ್ಸ್ 10 ತಿಂಗಳ ಅವಧಿಯದ್ದಾಗಿದೆ. ಪಠ್ಯಕ್ರಮ, ಭೋಧನಾ ವಿಧಾನ, ಪರೀಕ್ಷೆಗಳು ಮಾನ್ಯತೆ ಪಡೆದ ವಿಶ್ವವಿದ್ಯಲಯದ ಮಾರ್ಗಸೂಚಿ ಅನ್ವಯ ನಡೆಯುತ್ತದೆ. ಉತ್ತೀರ್ಣರಾದವರಿಗೆ ರಂಗಾಯಣದ ದೃಢೀಕರಣದೊಂದಿಗೆ ವಿಶ್ವವಿದ್ಯಾಲಯದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ತರಬೇತಿಯ ಮೊದಲನೇ ವರ್ಷ ಪಠ್ಯಾಧಾರಿತ ವಿಷಯ ಬೋಧನೆಯ ಜೊತೆಗೆ, ರಂಗಭೂಮಿಯ ಪ್ರಾಥಮಿಕ ಚಟುವಟಿಕೆಗಳ ಮೂಲಕ ತರಬೇತಿಯನ್ನು ನೀಡಲಾಗುವುದು.
ರಂಗಾಯಣದ ಸಂಚಾರಿ ರಂಗಘಟಕಕ್ಕೆ (ಮಿನಿ ರೆಪರ್ಟರಿ) ಪ್ರತಿವರ್ಷ 15 ಜನ ಕಲಾವಿದರನ್ನು ಆಯ್ಕೆ ಮಾಡುವಾಗ ರಂಗಾಯಣದಲ್ಲಿ ರಂಗಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಬೋಧನೆಯ ಮಾಧ್ಯಮ:
ರಂಗಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ನೀಡಲಾಗುವುದು. ಅಗತ್ಯವಿದ್ದಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸಲಾಗುವುದು. ವಿದ್ಯಾರ್ಥಿಗಳು ಕನ್ನಡದಲ್ಲಿ ವ್ಯವಹರಿಸುವುದು ಅನಿವಾರ್ಯ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಆಗಸ್ಟ್ 1,2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 16,2021
ಆಯ್ಕೆ ವಿಧಾನ:
ಸಂದರ್ಶನವನ್ನು ರಂಗಾಯಣದ ಆವರಣದಲ್ಲಿ ನಡೆಸಲಾಗುವುದು. ಸಂದರ್ಶನಕ್ಕೆ ಬರುವ ವಿದ್ಯಾರ್ಥಿಗಳು ರಂಗಾಯಣದಿಂದ ಪಡೆದುಕೊಂಡ ಕೈಪಿಡಿಯನ್ನು ಕಡ್ಡಾಯವಾಗಿ ಓದಿ, ಅಭ್ಯಾಸ ಮಾಡಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. ಸಂದರ್ಶನದ ದಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯನ್ನು ರಂಗಾಯಣದಿಂದಲೇ ಮಾಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳು ರಂಗಾಯಣ ಸೂಚಿಸಿದ ದಿನಾಂಕದಂದು ಮೂಲ ದಾಖಲಾತಿಗಳನ್ನು ಸಲ್ಲಿಸಿ ಶಾಲೆಗೆ ಪ್ರವೇಶವನ್ನು ಪಡೆದುಕೊಳ್ಳಬೇಕು. ಪ್ರವೇಶಾತಿ ಸಂದರ್ಭದಲ್ಲಿ ತಂದೆ/ತಾಯಿ ಅಥವಾ ತಂದೆ ತಾಯಿಗಳು ಬದುಕಿಲ್ಲದಿದ್ದರೆ ಪೋಷಕರನ್ನು ಕರೆತರತಕ್ಕದ್ದು. ಕೊರೊನಾ ಹಿನ್ನಲೆಯಲ್ಲಿ ಸರ್ಕಾರವು ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸಿ ತರಬೇತಿ ಆರಂಭವಾಗುವ ದಿನಾಂಕ ಮತ್ತು ಮುಕ್ತಾಯಗೊಳ್ಳುವ ದಿನಾಂಕವನ್ನು ನಿಗದಿಪಡಿಸಲಾಗುವುದು.
ಅರ್ಜಿ ಶುಲ್ಕ:
ರಂಗಶಾಲೆಯ ಸಂದರ್ಶನಕ್ಕೆ ಅಗತ್ಯವಾದ ರಂಗ ಕೈಪಿಡಿ ಒಳಗೊಂಡಂತೆ ಡಿಪ್ಲೋಮಾ ಕೋರ್ಸ್ ಅರ್ಜಿ ಶುಲ್ಕ ಸಾಮಾನ್ಯ ವರ್ಗ 200/-ರೂ, ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು 150/-ರೂಗಳನ್ನು ಪಾವತಿಸಬೇಕಿರುತ್ತದೆ.
ಅಂಚೆ ಮೂಲಕ ಅರ್ಜಿ ಕಳುಹಿಸುವವರು ನಿಮಗೆ ಕಛೇರಿಯಿಂದ ಕಳುಹಿಸಬೇಕಾಗಿರುವ ರಂಗಕೈಪಿಡಿ ಅಂಚೆ ವೆಚ್ಚ ರೂ.30/- ಅನ್ನು ಒಳಗೊಂಡ ಮೊತ್ತದ ಡಿ.ಡಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕಡೆಯ ದಿನಾಂಕದಿಂದ 10 ದಿನದೊಳಗೆ ಸಂದರ್ಶನದ ದಿನಾಂಕವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಹಾಗೂ ಅಭ್ಯರ್ಥಿಗಳಿಗೆ ಪತ್ರ ಮುಖೇನ ತಿಳಿಸಲಾಗುವುದು.
ರಂಗಶಿಕ್ಷಣಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಪ್ರಾಯೋಗಿಕ ತರಬೇತಿಗಳ ನಿರ್ವಹಣಾ ವೆಚ್ಚವಾಗಿ ರೂ. 3,000/- (ಸಾಮಾನ್ಯ ವರ್ಗ) ಹಾಗೂ 2,000/-ರೂ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ) ಗಳನ್ನು ಪ್ರವೇಶಾತಿಯ ಸಂದರ್ಭದಲ್ಲಿ ಮೂಲ ದಾಖಲೆಗಳೊಂದಿಗೆ ಪಾವತಿಸಬೇಕು. ಅಲ್ಲದೆ ಮಾನ್ಯತೆ ನೀಡಿರುವ ವಿಶ್ವವಿದ್ಯಾನಿಲಯವು ನಿಗದಿಪಡಿಸುವ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳೇ ಭರಿಸಬೇಕು.
ಅಭ್ಯರ್ಥಿಗಳಿಗೆ ರಂಗಾಯಣ ಒದಗಿಸುವ ಸೌಲಭ್ಯಗಳು:
ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ಉಚಿತವಾಗಿ ವಸತಿಯನ್ನು ಒದಗಿಸಲಾಗುವುದು. ಮಾಹೆಯಾನ ಅಭ್ಯರ್ಥಿಗೆ ರೂ.3,000/- ರೂ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು ಮತ್ತು ಊಟೋಪಚಾರಕ್ಕಾಗಿ 2,000/-ರೂ ಭತ್ಯೆಗಳನ್ನು ನೀಡಲಾಗುವುದು.
ಪರೀಕ್ಷಾ ವಿಧಾನ:
ಆಂತರಿಕ ಮೌಲ್ಯಮಾಪನವನ್ನು ತರಗತಿ ನಡೆಸುವ ಅಧ್ಯಾಪಕರು ನಡೆಸುತ್ತಾರೆ. ನಿಗದಿತ ಸಮಯದಲ್ಲಿ ವಿಷಯಾಧಾರಿತ ಬರವಣಿಗೆ, ಗುಂಪು ಚಟುವಟಿಕೆಯಲ್ಲಿ ಭಾಗವಹಿಸುವಿಕೆ, ಅಭಿನಯ, ಶಿಸ್ತುಪಾಲನೆ ಮುಂತಾದ ವಿಷಯಗಳ ಕುರಿತು ನಡೆಸಲಾಗುವುದು. ವರ್ಷಾಂತ್ಯದಲ್ಲಿ ವಿಶ್ವವಿದ್ಯಾಲಯದ ನಿಯಮಾನುಸಾರ ಪರೀಕ್ಷೆಯನ್ನು ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು.
ತರಬೇತಿ ಶುಲ್ಕ:
ಭಾರತೀಯ ರಂಗಶಿಕ್ಷಣ ಕೇಂದ್ರವು ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯವು ಸೂಚಿಸುವ ಪ್ರವೇಶ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
ಶಾಲೆಯ ವೇಳಾಪಟ್ಟಿ:
ಈ ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಯು ರಂಗಾಯಣ ಒದಗಿಸುವ ವಸತಿಗೃಹದಲ್ಲಿ ವಾಸಿಸಬೇಕು. ಶಾಲೆಯ ವೇಳೆ, ವಿರಾಮಗಳು ಸೇರಿದಂತೆ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ತರಗತಿಗಳು ನಡೆಯುವುದು. ಅವಶ್ಯವಿದ್ದಲ್ಲಿ ಸಂದರ್ಭಾನುಸಾರ ಬದಲಾವಣೆಯನ್ನು ಮಾಡಲಾಗುವುದು.
ಅರ್ಜಿ ಪಡೆಯುವ ಮತ್ತು ಸಲ್ಲಿಸುವ ವಿಧಾನ:
ರಂಗಾಯಣದ ವೆಬ್‍ಸೈಟ್ www.rangayana.org ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯೊಂದಿಗೆ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡಿ.ಡಿ. ಮೂಲಕ ಜಂಟಿ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು-570005 ಇವರ ಹೆಸರಿಗೆ ಪಡೆದು ರಂಗಾಯಣ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ಸಲ್ಲಿಸಬಹುದಾಗಿದೆ ಅಥವಾ ಖುದ್ದಾಗಿ ಕಚೇರಿ ಅವಧಿಯಲ್ಲಿ ಬಂದು ಆಗಸ್ಟ್ 16ರೊಳಗೆ ಸಲ್ಲಿಸಬಹುದಾಗಿದೆ. ಅಪೂರ್ಣ ಮಾಹಿತಿ ಇರುವ ಹಾಗೂ ಸೂಕ್ತ ದಾಖಲೆ ಇಲ್ಲದಿರುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಅರ್ಜಿಯೊಂದಿಗೆ ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕರಣ ಸಹಿ ಪಡೆದು ಸಲ್ಲಿಸುವುದು.
* ವಿದ್ಯಾರ್ಹತೆಯ ಪ್ರಮಾಣಪತ್ರ ಜಾತಿಯ ಪ್ರಮಾಣ ಪತ್ರ
* ವಯಸ್ಸನ್ನು ದೃಢೀಕರಿಸುವ ಪ್ರಮಾಣಪತ್ರ
* ನಾಲ್ಕು ಸ್ಟಾಂಪ್ ಸೈಜಿನ ಹಾಗೂ ಒಂದು ಪಾಸ್‍ಪೋರ್ಟ್ ಸೈಜಿನ ಭಾವಚಿತ್ರ
* ರೂ.5/-ಗಳ ಅಂಚೆಚೀಟಿ ಅಂಟಿಸುವ ಸ್ವವಿಳಾಸವಿರುವ ಲಕೋಟೆ, ಜೊತೆಗಿರಬೇಕು.
* ಆಧಾರ್ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು
ಹೆಚ್ಚಿನ ವಿವರಕ್ಕಾಗಿ ರಂಗಾಯಣ ಕಚೇರಿಯ ವೇಳೆಯಲ್ಲಿ ಸಂಪರ್ಕಿಸುವುದು. ದೂರವಾಣಿ: 0821-2512639
ಅಭ್ಯರ್ಥಿಗಳು ಪ್ರವೇಶಾತಿ ಬಗೆಗೆ ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











