ರಂಗಾಯಣ ರಂಗ ಶಿಕ್ಷಣ ಡಿಪ್ಲೊಮಾ ಕೋರ್ಸಿಗೆ ಅರ್ಜಿ ಆಹ್ವಾನ

ಉತ್ತೀರ್ಣರಾದವರಿಗೆ ಹಂಪಿ ವಿಶ್ವವಿದ್ಯಾಲಯವು ಪ್ರಮಾಣ ಪತ್ರವನ್ನು ನೀಡುತ್ತದೆ. ತರಬೇತಿಯ ಮೊದಲನೇ ವರ್ಷ ಪಠ್ಯಾಧಾರಿತ ವಿಷಯ ಬೋಧನೆಯ ಜೊತೆಗೆ, ರಂಗಭೂಮಿಯ ಪ್ರಾಥಮಿಕ ಚಟುವಟಿಕೆಗಳ ಮೂಲಕ ತರಬೇತಿಯನ್ನು ನೀಡಲಾಗುವುದು.

By Kavya

ಮೈಸೂರು ರಂಗಾಯಣದಲ್ಲಿ ಎರಡು ವರ್ಷದ ರಂಗ ಶಿಕ್ಷಣ ಡಿಪ್ಲೊಮಾ ಕೋರ್ಸಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ರಂಗ ಶಿಕ್ಷಣದಲ್ಲಿ ತರಬೇತಿ ನೀಡುವ ಡಿಪ್ಲೋಮಾ ಎರಡು ವರ್ಷದ ಅವಧಿಯದ್ದಾಗಿದೆ. ಈ ಕೋರ್ಸಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ದೊರಕಿದೆ. ಈ ಕೋರ್ಸಿನ ಶಿಕ್ಷಣದ ಪಠ್ಯಕ್ರಮ, ಬೋಧನಾ ವಿಧಾನ, ಪರೀಕ್ಷೆಗಳು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮಾರ್ಗಸೂಚಿ ಅನ್ವಯ ನಡೆಯುತ್ತದೆ.

ಉತ್ತೀರ್ಣರಾದವರಿಗೆ ವಿಶ್ವವಿದ್ಯಾಲಯವು ಪ್ರಮಾಣ ಪತ್ರವನ್ನು ನೀಡುತ್ತದೆ. ತರಬೇತಿಯ ಮೊದಲನೇ ವರ್ಷ ಪಠ್ಯಾಧಾರಿತ ವಿಷಯ ಬೋಧನೆಯ ಜೊತೆಗೆ, ರಂಗಭೂಮಿಯ ಪ್ರಾಥಮಿಕ ಚಟುವಟಿಕೆಗಳ ಮೂಲಕ ತರಬೇತಿಯನ್ನು ನೀಡಲಾಗುವುದು.

ರಂಗಾಯಣದ ಸಂಚಾರಿ ರಂಗಘಟಕ (ಮಿನಿ ರೆಪರ್ಟರಿ)ದ ಮೂಲಕ ಎರಡನೆಯ ವರ್ಷ ನಾಟಕ ಕಲಿಕೆ ಹಾಗೂ ರಾಜ್ಯಾದ್ಯಂತ ನಾಟಕಗಳ ಪ್ರವಾಸ ಮಾಡಿ ನಾಟಕ ಪ್ರದರ್ಶನ ನೀಡುವುದು ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳು ಕೋರ್ಸ್‍ನ ಅವಧಿಯಲ್ಲಿ ರಂಗಾಯಣದ ಪ್ರಮುಖ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ರಂಗ ಸಂಘಟನಾ ಅನುಭವವನ್ನು ನೀಡಲಾಗುವುದು.

ರಂಗಾಯಣ ಡಿಪ್ಲೊಮಾ ಕೋರ್ಸಿಗೆ ಅರ್ಜಿ ಆಹ್ವಾನ

ಬೋಧನೆಯ ಮಾಧ್ಯಮ

ರಂಗಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ನೀಡಲಾಗುವುದು. ಅಗತ್ಯವಿದ್ದಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸಲಾಗುವುದು. ವಿದ್ಯಾರ್ಥಿಗಳು ಕನ್ನಡದಲ್ಲಿ ವ್ಯವಹರಿಸುವುದು ಅನಿವಾರ್ಯ.

ಪ್ರವೇಶಕ್ಕೆ ಅರ್ಹತೆ

ಹಂಪಿಯ ಕನ್ನಡ ವಿಶ್ವವಿದ್ಯಾಲಯ ನಿಯಮಾವಳಿಗೆ ಅನುಗುಣವಾಗಿ ಅಭ್ಯರ್ಥಿಗೆ ಕನಿಷ್ಠ ವಿದ್ಯಾರ್ಹತೆ ಪಿ.ಯು.ಸಿ/ತತ್ಸಮಾನ ಪಾಸಾಗಿರಬೇಕು. 18 ರಿಂದ 28 ವರ್ಷದೊಳಗಿನವರಾಗಿರಬೇಕು. ಕನ್ನಡ ಭಾಷೆ ಓದಲು, ಬರೆಯಲು ಬರುವುದು ಕಡ್ಡಾಯ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ.300/- (ಮೂರುನೂರು ರೂ.ಗಳು)
  • ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.150/- (ಒಂದುನೂರ ಐವತ್ತು ರೂ.ಗಳು)

ಅರ್ಜಿ ಪಡೆಯುವ ಮತ್ತು ಸಲ್ಲಿಸುವ ವಿಧಾನ

ರಂಗಾಯಣದ ವೆಬ್‍ಸೈಟ್ www.rangayana.org ನ ಮೂಲಕ ಡೌನ್‍ಲೋಡ್ ಮಾಡಿ, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡಿ.ಡಿ. ಮೂಲಕ ನಿರ್ದೇಶಕರು, ರಂಗಾಯಣ, ಕಲಾಮಂದಿರ, ಹುಣಸೂರು ರಸ್ತೆ, ಮೈಸೂರು-5, ಇವರ ಹೆಸರಿಗೆ ಪಡೆದು ನಿಗದಿತ ದಿನಾಂಕದೊಳಗೆ ರಂಗಾಯಣ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ಸಲ್ಲಿಸಬಹುದಾಗಿದೆ ಅಥವಾ ಖುದ್ದಾಗಿ ಕಚೇರಿ ಅವಧಿಯಲ್ಲಿ ಬಂದು ಸಲ್ಲಿಸಬಹುದಾಗಿದೆ.

ಅರ್ಜಿಯೊಂದಿಗೆ ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕರಣ ಸಹಿ ಪಡೆದು ಸಲ್ಲಿಸುವುದು.

  • ವಿದ್ಯಾರ್ಹತೆಯ ಪ್ರಮಾಣಪತ್ರ
  • ಜಾತಿಯ ಪ್ರಮಾಣ ಪತ್ರ
  • ವಯಸ್ಸನ್ನು ದೃಢೀಕರಿಸುವ ಪ್ರಮಾಣಪತ್ರ
  • ನಾಲ್ಕು ಸ್ಟಾಂಪ್ ಸೈಜಿನ ಹಾಗೂ ಒಂದು ಪಾಸ್‍ಪೋರ್ಟ್ ಸೈಜಿನ ಭಾವಚಿತ್ರ
  • ರೂ.5/-ಗಳ ಅಂಚೆಚೀಟಿ ಅಂಟಿಸುವ ಸ್ವವಿಳಾಸವಿರುವ ಲಕೋಟೆ, ಜೊತೆಗಿರಬೇಕು.

ಅರ್ಜಿಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿಮಾಡಿ ದಿನಾಂಕ: 10.07.2020 ಒಳಗಾಗಿ ಸದರಿ ಕೇಂದ್ರಕ್ಕೆ ಸಲ್ಲಿಸುವುದು.

ಆಯ್ಕೆ ವಿಧಾನ

  • ಅಭ್ಯರ್ಥಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಸಂದರ್ಶನಕ್ಕಾಗಿ ಕರೆಯಲಾಗುವುದು.
  • ಮುಕ್ತ ಸಂದರ್ಶನದ ಮೂಲಕ ವಿದ್ಯಾರ್ಥಿಗಳ ಆಯ್ಕೆಯನ್ನು ಮಾಡಲಾಗುವುದು.
  • ವಿದ್ಯಾರ್ಥಿಯ ಪ್ರತಿಭೆ ಮತ್ತು ರಂಗಾಸಕ್ತಿಯನ್ನು ಪ್ರಧಾನವಾಗಿ ಪರಿಗಣಿಸಲಾಗುವುದು.
  • ಸರ್ಕಾರದ ನಿಯಮಾನುಸಾರ ಮೀಸಲಾತಿಯ ಕ್ರಮವನ್ನು ಅನುಸರಿಸಲಾಗುವುದು.
  • ಅಭ್ಯರ್ಥಿಯು ತನ್ನ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
  • ಪ್ರವೇಶ ಪರೀಕ್ಷೆ ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದ ತಿಳುವಳಿಕೆಯನ್ನು ಪರೀಕ್ಷಿಸುವ ಸಂದರ್ಶನ ರೂಪದ್ದಾಗಿರುತ್ತದೆ.

ಅಭ್ಯರ್ಥಿಗಳಿಗೆ ರಂಗಾಯಣ ಒದಗಿಸುವ ಸೌಲಭ್ಯಗಳು

  • ಆಯ್ಕೆಯಾದ ಅಭ್ಯರ್ಥಿಗೆ ಕೋರ್ಸಿನ ಒಂದು ವರ್ಷಕ್ಕೆ ಉಚಿತವಾಗಿ ವಸತಿಯನ್ನು ಒದಗಿಸಲಾಗುವುದು.
  • ಮಾಹೆಯಾನ ಅಭ್ಯರ್ಥಿಗೆ ರೂ.2,500/- ವಿದ್ಯಾರ್ಥಿ ವೇತನವನ್ನು ನೀಡಲಾಗುವುದು.

ಹೆಚ್ಚಿನ ವಿವರಕ್ಕಾಗಿ ರಂಗಾಯಣ ಕಚೇರಿಯ ವೇಳೆಯಲ್ಲಿ ಸಂಪರ್ಕಿಸುವುದು. ದೂರವಾಣಿ: 0821-2512639

More News  

For Quick Alerts
ALLOW NOTIFICATIONS  
For Daily Alerts

English summary
Mysore Rangayana invites applications from eligible candidates for one year diploma course. candidates can download application from website and apply before July 10.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+