ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದ್ರೆ ವರ್ಷಕ್ಕೆ ಸಂಪಾದನೆ ಎಷ್ಟು ಗೊತ್ತಾ?

ಸ್ಪೋರ್ಟ್ಸ್ ಇಂಡಸ್ಟ್ರಿಯಲ್ಲಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಎಂಬ ಮತ್ತೊಂದು ಕೋರ್ಸ್ ಬಗ್ಗೆ ಕೆರಿಯರ್ ಇಂಡಿಯಾ ಪರಿಚಯಿಸುತ್ತಿದೆ. ಮುಂದಕ್ಕೆ ಓದಿ.

ಮನೋರಂಜನೆ ವಿಷಯದಿಂದಾಗಿ ಹಲವಾರು ವರ್ಷದಿಂದ ಸ್ಪೋರ್ಟ್ಸ್ ಕ್ಷೇತ್ರವು ಉನ್ನತ ಸ್ಥಾನದಲ್ಲಿದೆ. ಬರೀ ಕ್ರೀಡೆ ಮಾತ್ರವಲ್ಲದೇ ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಹಲವಾರು ಕೋರ್ಸ್ ಗಳು ಇದೀಗ ಲಭ್ಯ. ಇದೀಗ ಸ್ಪೋರ್ಟ್ಸ್ ಇಂಡಸ್ಟ್ರಿಯಲ್ಲಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಎಂಬ ಮತ್ತೊಂದು ಕೋರ್ಸ್ ಬಗ್ಗೆ ಕೆರಿಯರ್ ಇಂಡಿಯಾ ಪರಿಚಯಿಸುತ್ತಿದೆ. ಮುಂದಕ್ಕೆ ಓದಿ.

ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದ್ರೆ ವರ್ಷಕ್ಕೆ ಸಂಪಾದನೆ ಎಷ್ಟು ಗೊತ್ತಾ?

ಯಾವ ವಿದ್ಯಾರ್ಥಿಗಳಿಗೆ ತಮ್ಮ ನೆಚ್ಚಿನ ಕ್ಷೇತ್ರವಾಗಿರುವ ಸ್ಪೋರ್ಟ್ಸ್ ನ್ನೇ ಕೆರಿಯರ್ ನ್ನಾಗಿ ರೂಪಿಸಿಕೊಳ್ಳಬೇಕು ಎಂದಿದೆಯೋ, ಅವರು ಈ ಅವಕಾಶವನ್ನ ಉಪಯೋಗಿಸಿಕೊಳ್ಳಬಹುದು. ಇದೊಂದು ಚಾಲೇಂಜಿಂಗ್ ಕೆರಿಯರ್ ಮಾತ್ರವಲ್ಲದೇ, ಎಕ್ಸೈಟಿಂಗ್ ಕೆರಿಯರ್ ಕೂಡಾ ಆಗಿದೆ. ಸ್ಪೋರ್ಟ್ಸ್ ಹಾಗೂ ಮ್ಯಾನೇಜ್‌ಮೆಂಟ್ ಕಾಂಬಿನೇಶನ್ ನೇ ಈ ಕೋರ್ಸ್. ಬನ್ನಿ ಈ ಕೋರ್ಸ್ ಬಗ್ಗೆ ಮತ್ತಷ್ಟು ಡೀಟೆಲ್ ಆಗಿ ತಿಳಿದುಕೊಳ್ಳೋಣ.

<strong>ಸ್ಪೋರ್ಟ್ಸ್ ಅಂದ್ರೆ ಬರೀ ಆಟಗಾರರು ಮಾತ್ರವಲ್ಲ... ಬೇರೆ ಯಾವೆಲ್ಲಾ ಹುದ್ದೆಗಳಿವೆ ಗೊತ್ತಾ?</strong>ಸ್ಪೋರ್ಟ್ಸ್ ಅಂದ್ರೆ ಬರೀ ಆಟಗಾರರು ಮಾತ್ರವಲ್ಲ... ಬೇರೆ ಯಾವೆಲ್ಲಾ ಹುದ್ದೆಗಳಿವೆ ಗೊತ್ತಾ?

ಎಂಬಿಎ ಇನ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ನಲ್ಲಿ ಏನೆಲ್ಲಾ ಇದೆ ಕಲಿಯಲು:

ಸ್ಪೋರ್ಟ್ಸ್ ಜತೆ ಮ್ಯಾನೇಜ್‌ಮೆಂಟ್ ಹಾಗೂ ಅಡ್ಮಿನಿಸ್ಟ್ರೇಶನ್ ವಿಷಯಕ್ಕೆ ಸಂಬಂಧಪಟ್ಟ ಟಾಪಿಕ್ ಇರುತ್ತದೆ. ವಿದ್ಯಾರ್ಥಿಗಳು ಆರ್ಗನೈಸೇಶನ್ ಮತ್ತು ಮ್ಯಾನೇಜ್‌ಮೆಂಟ್ ಇನ್ ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಗೆ ಸಂಬಂಧಪಟ್ಟ ಇನ್ನಿತ್ತರ ಮೂಲಭೂತ ವಿಷಯಗಳ ಬಗ್ಗೆ ತಿಳಿಸಲಾಗುತ್ತದೆ. ಅಷ್ಟೇ ಅಲ್ಲ ಈ ಕೋರ್ಸ್ ಪ್ರಿನ್ಸಿಪಲ್ ಆಫ್ ಮ್ಯಾನೇಜ್‌ಮೆಂಟ್, ಆರ್ಗನೈಸೇಶನಲ್ ಬಿಹೇವಿಯರ್, ಮಾರ್ಕೇಟಿಂಗ್, ಎಕಾನಾಮಿಕ್ ಅನಾಲಿಸ್, ಅಕೌಂಟಿಂಗ್ ಫಾರ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್, ಬ್ಯುಸಿನೆಸ್ ಲಾಸ್, ಪ್ರೊಫೆಶನಲ್ ಕಮ್ಯುನಿಕೇಶನ್ ಮತ್ತು ಟೂಲ್ಸ್ ಆಫ್ ಎಫೆಕ್ಟೀವ್ ಮ್ಯಾನೇಜ್‌ಮೆಂಟ್ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಇಂಜಿನೀಯರಿಂಗ್ ಕನಸು ಕಾಣುವ ವಿದ್ಯಾರ್ಥಿಗಳಿಗೆ... ಮುಂದಿನ ವರ್ಷದ ಎಂಟ್ರೇಂಸ್ ಎಕ್ಸಾಂ ಡೀಟೆಲ್ಸ್!

ಅಷ್ಟೇ ಅಲ್ಲದೇ, ಈ ಕೋರ್ಸ್ ನಲ್ಲಿ ಇನ್ನೂ ಕೆಲವು ಪ್ರಮುಖ ಕಾಂಸೆಪ್ಟ್ ಗಳಿವೆ. ಅವುಗಳು ಯಾವುವುವೆಂದ್ರೆ, ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್, ಸ್ಪೋರ್ಟ್ಸ್ ಮಾರ್ಕೇಟಿಂಗ್, ಸ್ಪೋರ್ಟ್ಸ್ ಮೆಡಿಸನ್ ಮತ್ತು ನ್ಯೂಟ್ರಿಷನ್, ಸ್ಪೋರ್ಟ್ಸ್ ಲಾ ಮತ್ತು ರಿಸ್ಕ್ ಮ್ಯಾನೇಜ್‌ಮೆಂಟ್, ಫಂಡಿಂಗ್ ಇನ್ ಸ್ಪೋರ್ಟ್ಸ್, ಅಡ್ವರ್ಟೈಸಿಂಗ್ ಮತ್ತು ಪಬ್ಲಿಕ್ ರಿಲೇಶನ್ ಇನ್ ಸ್ಪೋರ್ಟ್ಸ್ ಇತ್ಯಾದಿ ಟಾಪಿಕ್ ಬಗ್ಗೆಯೂ ಕಲಿಸಿಕೊಡಲಾಗುತ್ತದೆ.

ಎಂಬಿಎ ಇನ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ನಲ್ಲಿ ಕೆರಿಯರ್ ಹೀಗೆ ರೂಪಿಸಿಕೊಳ್ಳಬಹುದು:

ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಎಂಬುವುದು ಚಿಕ್ಕ ಕ್ಷೇತ್ರವಲ್ಲ. ಇನ್ನು ಈ ಕ್ಷೇತ್ರದಲ್ಲಿ ನೀವು ಎಂಬಿಎ ಮಾಡಿದ್ದೀರಿ ಎಂದಾದ್ರೆ ನಿಮ್ಮ ಮುಂದೆ ಹಲವಾರು ಉದ್ಯೋಗವಕಾಶಗಳು ತೆರೆದುಕೊಳ್ಳುತ್ತದೆ. ಸ್ಪೋರ್ಟ್ಸ್ ಕ್ಲಬ್, ಟೀಂ, ಎನ್‌ಜಿಓ, ಫಿಟ್ ನೆಸ್ ಕ್ಲಬ್, ರೀಕ್ರಿಯೇಶನ್ ಫೆಸಿಲಿಟಿ. ಸ್ಪೋರ್ಟಿಂಗ್ ಏಜೆನ್ಸೀಸ್ ಮುಂತಾದ ಕ್ಷೇತ್ರಗಳಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು.

ಅಷ್ಟೇ ಅಲ್ಲದೇ ಮ್ಯಾನೇಜರ್, ಸ್ಪೋರ್ಟ್ಸ್ ಸೇಲ್ಸ್ ಮ್ಯಾನೇಜರ್, ಸ್ಪೋರ್ಟ್ಸ್ ಏಜೆಂಟ್, ಸ್ಪೋರ್ಟ್ಸ್ ಫಿಸಿಯೋಲಾಜಿಸ್ಟ್, ಸ್ಪೋರ್ಟ್ಸ್ ಇಂಸ್ಟ್ರಕ್ಟರ್, ಸ್ಪೋರ್ಟ್ಸ್ ಅಡ್ಮಿನಿಸ್ಟ್ರೇಟರ್, ಸ್ಟೇಡಿಯಂ ಮ್ಯಾನೇಜರ್, ಸ್ಪೋರ್ಟ್ಸ್ ನ್ಯೂಟ್ರಿಶನಿಸ್ಟ್ ಮತ್ತು ಅಥ್ಲೇಟಿಕ್ ಡೈರೆಕ್ಟರ್ ಹುದ್ದೆಯನ್ನೂ ಕೂಡಾ ನೀವು ಅಲಂಕರಿಸಬಹುದು.

ಪಬ್ಲಿಕ್ ಸೆಕ್ಟರ್ ಕಂಪನಿಗಳು ಮಾತ್ರವಲ್ಲದೇ ಕಾರ್ಪೋರೇಟ್ ಕಂಪನಿಗಳು ಕೂಡಾ ಇದೀಗ ಎಂಬಿಎ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದವರಿಂದ ಹಲವಾರು ಜಾಬ್ ಆಫರ್ ನೀಡುತ್ತಿದೆ. ಸ್ಟಾರ್ ಸ್ಪೋರ್ಟ್ಸ್, ಇಎಸ್ ಪಿಎನ್ ಕ್ರಿಕಿಂಫೋ ಮತ್ತು ಜೆಎಸ್ ಡಬ್ಲ್ಯೂ ಸ್ಪೋರ್ಟ್ಸ್ ಸೇರಿದಂತೆವ ಹಲವಾರು ಪ್ರೈವೇಟ್ ಕಂಪನಿಗಳು ಈ ಕೋರ್ಸ್ ಮಾಡಿದವರಿಗೆ ಜಾಬ್ ಆಫರ್ ನೀಡುತ್ತಿದೆ.

<strong>ಈ ಸ್ಟೇಟ್‌ನಲ್ಲಿ ಐಎಎಸ್ ಕೋರ್ಸ್ ಮಾಡಿದ್ರೆ ನೀವು ಪಕ್ಕಾ ಐಎಎಸ್ ಅಧಿಕಾರಿ ಆಗ್ತೀರಾ!</strong>ಈ ಸ್ಟೇಟ್‌ನಲ್ಲಿ ಐಎಎಸ್ ಕೋರ್ಸ್ ಮಾಡಿದ್ರೆ ನೀವು ಪಕ್ಕಾ ಐಎಎಸ್ ಅಧಿಕಾರಿ ಆಗ್ತೀರಾ!

ಎಂಬಿಎ ಇನ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕೋರ್ಸ್ ನೀಡುವ ಟಾಪ್ ಕಾಲೇಜುಗಳು:

  • ಸಿಸ್ಟರ್ ನಿವೇದಿತ ಯೂನಿವರ್ಸಿಟಿ, ಕೊಲ್ಕತ್ತಾ
  • ಎಂಐಟಿ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ಪುಣೆ
  • ನ್ಯಾಷನಲ್ ಅಕಾಡೆಮಿ ಆಫ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್, ಮುಂಬಯಿ
  • ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್, ಮುಂಬಯಿ
  • ಸಿಂಬೋಸಿಸ್ ಸ್ಕೂಲ್ ಆಫ್ ಸ್ಪೋರ್ಟ್ಸ್ ಸೈನ್ಸ್ , ಪುಣೆ
  • ತಮಿಳು ನಾಡು ಫಿಸಿಕಲ್ ಎಜ್ಯುಕೇಶನ್ ಮತ್ತು ಸ್ಪೋರ್ಟ್ಸ್ ಯೂನಿವರ್ಸಿಟಿ, ಚೆನ್ನೈ
For Quick Alerts
ALLOW NOTIFICATIONS  
For Daily Alerts

English summary
Over the years, the sports industry has started generating sky-high revenues because it is considered as a showbiz of entertainment. The demand for the administrative positions is increasing consistently in the sports industry because of this reason. A range of courses are offered in sports that can lead to a rewarding career in the sports industry.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X