Ninasam Diploma Admission 2021-22 : ರಂಗಾಯಣದಲ್ಲಿ ಡಿಪ್ಲೋಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ

ನೀನಾಸಮ್ ರಂಗಶಿಕ್ಷಣ ಕೇಂದ್ರದ ವಾರ್ಷಿಕ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ನೀನಾಸಮ್ ರಂಗಶಿಕ್ಷಣ ಕೇಂದ್ರ 2020-21ನೇ ಸಾಲಿನ ಡಿಪ್ಲೋಮಾ ಶಿಕ್ಷಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಗಸ್ಟ್ 25,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಹತೆ:

ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಇರಬೇಕು. ಪದವೀಧರರಿಗೆ ಹೆಚ್ಚು ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿಯಿದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದ್ದು ಅಗತ್ಯ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಊಟ, ವಸತಿ ವ್ಯವಸ್ಥೆ ಇದ್ದು ವಿದ್ಯಾರ್ಥಿವೇತನ ದೊರೆಯುತ್ತದೆ.

ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ರಂಗಕಲ್ಪನೆ, ರಂಗ ಇತಿಹಾಸ, ನಾಟಕ ಇತಿಹಾಸ, ರಂಗನಟನೆ, ರಂಗಸಿದ್ಧತೆ, ರಂಗವ್ಯವಸ್ಥೆ ಮುಂತಾಗಿ ವಿಸ್ತಾರವಾದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಕೇಂದ್ರದ ನುರಿತ ಅಧ್ಯಾಪಕರುಗಳಲ್ಲದೆ ಹೊರಗಿನ ತಜ್ಞರನ್ನು ಕರೆಸಿ ಸಾಕಷ್ಟು ಪ್ರಬುದ್ಧ ಶಿಕ್ಷಣ ಕೊಡಲಾಗುತ್ತದೆ. ಒಳ್ಳೆಯ ಗ್ರಂಥ ಭಂಡಾರ ಹಾಗೂ ದೃಶ್ಯಶ್ರವ್ಯ ಪರಿಕರಗಳ ಅನುಕೂಲತೆಯಿದ್ದು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿದಿನ ಸುಮಾರು 12 (07.00 am- 09.30 pm) ಗಂಟೆಗಳಷ್ಟು ಕಾಲ ಅಭ್ಯಾಸದಲ್ಲಿ ತೊಡಗಿರಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಸಂದರ್ಶನಕ್ಕೆ ಪ್ರತ್ಯೇಕ ಕರೆಯೋಲೆಯನ್ನು ದೂರವಾಣಿ ಮೂಲಕ ಕಳಿಸಲಾಗುತ್ತದೆ; ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಮಾಹಿತಿ ಪ್ರಕಾರ ಸಿದ್ಧತೆ ಮಾಡಿಕೊಂಡು ಸಂದರ್ಶನಕ್ಕೆ ಹಾಜರಾಗಬೇಕಿರುತ್ತದೆ.

ಅರ್ಜಿ ಸಲ್ಲಿಕೆ :

ಅರ್ಜಿ ಸಲ್ಲಿಸುವ ವಿಧಾನ ಈ ಜಾಲತಾಣದಲ್ಲಿ ಮೂರು ಪ್ರತ್ಯೇಕ ಕಡತಗಳಲ್ಲಿರುವ ಕೇಂದ್ರದ ಪರಿಚಯ ಪತ್ರ, ಅರ್ಜಿ ಫಾರಂ, ಶುಲ್ಕ ಮತ್ತು ಸಂದರ್ಶನದ ವಿವರಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿ.
ಅಂತರ್ಜಾಲದ ಸಂಪರ್ಕ ಇಲ್ಲದವರು ಕೆಳಗಿರುವ ನೀನಾಸಮ್ ವಿಳಾಸಕ್ಕೆ ಕಾಗದ ಬರೆದು ಉಚಿತವಾಗಿ ಕೇಂದ್ರದ ಪರಿಚಯ ಪತ್ರ, ಅರ್ಜಿ ಫಾರಂ, ಶುಲ್ಕ ಮತ್ತು ಸಂದರ್ಶನದ ವಿವರಗಳು - ಇವನ್ನು ತರಿಸಿಕೊಳ್ಳಬಹುದು.

ವಿವರಗಳನ್ನು ಓದಿ ಅರ್ಥ ಮಾಡಿಕೊಂಡು ನೀವು ಅರ್ಜಿ ಸಲ್ಲಿಸಬಹುದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.
ಅರ್ಜಿಫಾರಂನ್ನು ಪ್ರಿಂಟ್ ಮಾಡಿಕೊಂಡು ಅದನ್ನು ನಿಮ್ಮದೇ ಹಸ್ತಾಕ್ಷರದಲ್ಲಿ ತುಂಬಿ.
ಅದರಲ್ಲಿರುವ ಎಲ್ಲ ಲಗತ್ತುಗಳೊಂದಿಗೆ, ರೂ. 500 ಅರ್ಜಿ ಶುಲ್ಕದ ಡಿಡಿ ಸಮೇತ (ನೀನಾಸಮ್ ರಂಗಶಿಕ್ಷಣ ಕೇಂದ್ರ ಎಂಬ ಹೆಸರಿಗೆ, ಕರ್ನಾಟಕ ಬ್ಯಾಂಕ್ ಹೆಗ್ಗೋಡು ಶಾಖೆ ಅಥವಾ ಬೇರಾವುದೇ ಬ್ಯಾಂಕಿನ ಸಾಗರ ಶಾಖೆಯಲ್ಲಿ ಸಂದಾಯವಾಗುವಂತೆ), ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ 577 417 - ಇಲ್ಲಿಗೆ ರಿಜಿಸ್ಟರ್ಡ್ ಅಂಚೆ ಮೂಲಕ ರವಾನಿಸಿ.
ಅಂತರ್ಜಾಲದ ಮೂಲಕ ಅಥವಾ ಈಮೈಲ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಇರುವುದಿಲ್ಲ. ಸಂದರ್ಶನಕ್ಕೆ ಪ್ರತ್ಯೇಕ ಕರೆಯೋಲೆ ಕಳಿಸುವುದಿಲ್ಲ; ಜತೆಗಿರುವ ಪತ್ರದಲ್ಲಿ ಸೂಚಿಸಿರುವ ಪ್ರಕಾರ ಸಿದ್ಧತೆ ಮಾಡಿಕೊಂಡು ಸಂದರ್ಶಕ್ಕೆ ಬನ್ನಿ.

ಗಮನಿಸಿ:

ಅಕ್ಟೋಬರ್ 1,2021ರಿಂದ ಭೌತಿಕವಾಗಿ ತರಗತಿಗಳನ್ನು ಪ್ರಾರಂಭಿಸುವ ಯೋಜನೆ ಇದೆ. ಕೋವಿಡ್ ಸಂಬಂಧಿ ಸರ್ಕಾರಿ ಆದೇಶದ ಅನುಸಾರ ಇದು ಬದಲಾಗಬಹುದು. ಕೋವಿಡ್ ಕಾರಣ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ತರಬೇತಿಯ ಅವಧಿಯನ್ನು ಕಡಿತಗೊಳಿಸುವ ಸಾಧ್ಯತೆ ಇರುತ್ತದೆ.

ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್ www.ninasam.org ಗೆ ಭೇಟಿ ನೀಡಿ.

More News  

For Quick Alerts
ALLOW NOTIFICATIONS  
For Daily Alerts

English summary
Ninasam theatre institute released notification and invites applications for one year diploma course.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+