ಆರ್‌ಸಿಐ ವಿಶೇಷ ಶಿಕ್ಷಣ ಡಿಪ್ಲೋಮಾ ಪ್ರವೇಶಾತಿ ಆರಂಭ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ವಿಶೇಷ ಶಿಕ್ಷಣದಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿಯ ಧ್ಯೇಯದೊಂದಿಗೆ 2000-01 ರಿಂದ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರಗಳು ಪ್ರಾರಂಭವಾದವು. ಇವುಗಳು ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ವತಿಯಿಂದ ವಿಕಲಚೇತನರ ಕ್ಷೇತ್ರದಲ್ಲಿ ನಡೆಸುತ್ತಿರುವ ಏಕೈಕ ತರಬೇತಿ ಸಂಸ್ಥೆಯಾಗಿವೆ. ತರಬೇತಿ ಕೇಂದ್ರದಲ್ಲಿ 2ತರಬೇತಿ ಕಾರ್ಯಕ್ರಮಗಳು ಲಭ್ಯವಿದ್ದು, ಅಂಧ ಮಕ್ಕಳಿಗೆ ಶಿಕ್ಷಕರಾಗಲು D.Ed.Spl.Edu.(VI) ಹಾಗೂ ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು D.Ed.Spl.Edu.(HI) ತರಬೇತಿಗಳನ್ನು ಭಾರತೀಯ ಪುನರ್ವಸತಿ ಮಂಡಳಿ (RCI) ನವದೆಹಲಿಯವರ ಮಾನ್ಯತೆಯೊಂದಿಗೆ ನಡೆಸಲಾಗುತ್ತಿದೆ.

ತರಬೇತಿ ಕೇಂದ್ರವು ನುರಿತ ಭೋಧನಾ ವರ್ಗವನ್ನು ಹೊಂದಿರುವುದರ ಜೊತೆಗೆ, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ ಹಾಗೂ ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ಲ್ಯಾಬ್‌ಗಳಂತಹ ಸೌಲಭ್ಯವನ್ನು ಹೊಂದಿದೆ. ಪ್ರಶಿಕ್ಷಣಾರ್ಥಿಗಳಿಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುತ್ತಿರುವ ವಸತಿ ನಿಲಯಗಳಲ್ಲಿ ವಸತಿ ಲಭ್ಯವಿರುತ್ತದೆ.

ವಿಶೇಷ ಶಿಕ್ಷಣದ ಶಿಕ್ಷಕರಾಗಬಯಸುವವರು ಅರ್ಜಿ ಹಾಕಿ

 

ಉದ್ಯೋಗಾವಕಾಶಗಳು:

ತರಬೇತಿ ಕೇಂದ್ರದಲ್ಲಿ ವಿಶೇಷ ಡಿ.ಇಡಿಯನ್ನು ಪೂರೈಸಿದ ಅಭ್ಯರ್ಥಿಗಳು-

1 ವಿಶೇಷ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ ಸೇವೆ ಸಲ್ಲಿಸಬಹುದು.

2 ಶಿಕ್ಷಣ ಇಲಾಖೆಯು ನಡೆಸುವ TET ಪರೀಕ್ಷೆ ಮತ್ತು ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಅರ್ಹರಾಗಿರುತ್ತಾರೆ ಹಾಗೂ ನೇಮಕಗೊಂಡಿರುತ್ತಾರೆ.

3 ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ತಜ್ಞರಾಗಿ ಕಾರ್ಯನಿರ್ವಹಿಸಬಹುದು.

4ಸರ್ವ ಶಿಕ್ಷಣ ಅಭಿಯಾನದಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು.

5 ಸಾಮಾನ್ಯ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು.

6 ಗೃಹ ಆಧಾರಿತ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು.

ತರಬೇತಿಗಳು:

ವಿಶೇ‍ಷ ಶಿಕ್ಷಣದಲ್ಲಿ ಡಿಪ್ಲೋಮ (ದೃಷ್ಠದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು)

ತರಬೇತಿಯ ಹೆಸರು: D.Ed.Spl.Edu.(VI): D.Ed Special Education-Visual Impairment

ಅವಧಿ: 2 ವರ್ಷಗಳು (4 ಸೆಮಿಸ್ಟರ್)

ಅರ್ಹತೆ: ಪಿಯುಸಿ ಯಲ್ಲಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. (ಎಸ್‌.ಸಿ, ಎಸ್‌.ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.45%)

ದೃಷ್ಟಿದೋಷವುಳ್ಳವರು. ದೈಹಿಕ ನ್ಯೂನ್ಯತೆವುಳ್ಳವರು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ಪ್ರವೇಶವಿರುತ್ತದೆ.ಈ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಗರಿಷ್ಟ ದಾಖಲಾತಿ 25

ಬೋಧನಾ ಮಾಧ್ಯಮ: ಕನ್ನಡ

ನಿಗದಿತ ಶುಲ್ಕ: ಪ್ರತಿ ಶೈಕ್ಷಣಿಕ ವರ್ಷಕ್ಕೆ ರೂ.11,025/-ಭೋಧನಾ ಶುಲ್ಕ

(ಎಸ್‌.ಸಿ/ಎಸ್‌.ಟಿ/ಅಂಧ/ಅಲ್ಪದೃಷ್ಟಿ/ದೈಹಿಕ ವಿಕಲಚೇತನರಿಗೆ ಸರ್ಕಾರದಿಂದ ಶುಲ್ಕ ಮುರುಪಾವತಿ ಸೌಲಭ್ಯ ಇರುತ್ತದೆ).

ಭದ್ರತಾ ಠೇವಣಿ ರೂ.2000/-

(ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ ಭದ್ರತಾ ಠೇವಣಿಯನ್ನು ಮರುಪಾವತಿಸಲಾಗುತ್ತದೆ.)

ವಿಶೇಷ ಶಿಕ್ಷಣದಲ್ಲಿ (ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು)

ತರಬೇತಿಯ ಹೆಸರು: D.Ed.Spl.Ed.(HI): D.Ed Special Education- Hearing Impairment

ಅವಧಿ- 2ವರ್ಷಗಳು (4 ಸೆಮಿಸ್ಟರ್‌ಗಳು)

ಪಿಯುಸಿ ಯಲ್ಲಿ ಶೇ.50ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. (ಎಸ್‌.ಸಿ,ಎಸ್‌.ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.45%)

 

ದೈಹಿಕ ನ್ಯೂನ್ಯತೆವುಳ್ಳವರು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ಪ್ರವೇಶವಿರುತ್ತದೆ.

ಈ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಗರಿಷ್ಟ ದಾಖಲಾತಿ :25

ಬೋಧನಾ ಮಾಧ್ಯಮ: ಕನ್ನಡ

ನಿಗದಿತ ಶುಲ್ಕ: ಯಾವುದೇ ಬೋಧನಾ ಶುಲ್ಕ ಇರುವುದಿಲ್ಲ (ಉಚಿತ)

ಭದ್ರತಾ ಠೇವಣಿ ರೂ.2,000/- (ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ ಭದ್ರತಾ ಠೇವಣಿಯನ್ನು ಮರುಪಾವತಿಸಲಾಗುತ್ತದೆ._

ಅರ್ಜಿಗಳ ಸಲ್ಲಿಕೆ:

ತರಬೇತಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸ ಬೇಕಾಗಿರುತ್ತದೆ. ಬೇರಾವುದೇ ಮಾಧ್ಯಮದ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಅರ್ಜಿಗಳು ಆರ್‌ಸಿಐ ನ ಅಂತರ್ಜಾಲದಲ್ಲಿ https://applyadmission.net/aioat2019/ ಲಭ್ಯವಿರುತ್ತದೆ.

ಪ್ರವೇಶಾತಿಯ ವಿಧಾನ:

ಪ್ರವೇಶಾತಿಯು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯುತ್ತದೆ. ಭಾರತೀಯ ಪುನರ್ವಸತಿ ಮಂಡಳಿ (RCI) ರವರು ನಡೆಸುವ online ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಚಾಲ್ತಿಯಲ್ಲಿರುವ RCI ನಿಯಮಾನುಸಾರ ದಾಖಲು ಮಾಡಿಕೊಳ್ಳಬಹುದು.

ಪ್ರಮುಖ ದಿನಾಂಕಗಳು:

ಪ್ರಕ್ರಿಯೆಯ ಹಂತಗಳು ದಿನಾಂಕ
Online ನಲ್ಲಿ ಅರ್ಜಿ ಲಭ್ಯತೆ ಮತ್ತು ನೊಂದಣಿ ಪ್ರಾರಂಭ1-2-2019 ರಿಂದ
Online ನಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಲು ಕೊನೆಯ ದಿನಾಂಕ15-3-2019
Online ನಲ್ಲಿ ಪರೀಕ್ಷೆ ನಡೆಯುವ ದಿನಾಂಕ21-4-2019
Online ಪರೀಕ್ಷೆಗಳ ಫಲಿತಾಂಶ ಪ್ರಕಟಣೆ24-4-2019
ಮೊದಲ ಸುತ್ತಿನ ಪ್ರವೇಶಾತಿ ಪ್ರಕಟಣೆ ಪಟ್ಟಿಯ ಕೊನೆಯ ದಿನಾಂಕ30-4-2019ರಿಂದ 6-5-2019
ದ್ವಿತೀಯ ಸುತ್ತಿನ ಪ್ರವೇಶಾತಿ ಪ್ರಕಟಣೆ ಪಟ್ಟಿಯ ಕೊನೆಯ ದಿನಾಂಕ8-5-2019ರಿಂದ 15-5-2019
ಕೊನೆಯ ಸುತ್ತಿನ ಪ್ರವೇಶಾತಿ ಪ್ರಕಟಣೆ ಪಟ್ಟಿಯ ಕೊನೆಯ ದಿನಾಂಕ17-5-2019ರಿಂದ 25-5-2019

ಈ ಪ್ರವೇಶಾತಿಯ ಅಧಿಸೂಚನೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಕೋರ್ಸ್ ಗಳ ಇನ್ನಷ್ಟು ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ವೀಕ್ಷಿಸಿ.

For Quick Alerts
ALLOW NOTIFICATIONS  
For Daily Alerts

English summary
RCI invites applications from eligible candidates to get an admission in mysore for special teacher courses
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X