RTE Karnataka Admission 2022-23 : ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಸಾರ್ವಜನಿಕ ಶಿಕ್ಷಣ ಇಲಾಖೆಯು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (RTE) ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶಾತಿ ಅಧಿಸೂಚನೆಯನ್ನು ಪ್ರಕಟ ಮಾಡಿದೆ.

 
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶಾತಿ  2022-23 ಗೆ ಅರ್ಜಿ ಆಹ್ವಾನ

ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಶೇ.25% ರಷ್ಟು ಸೀಟುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆರ್‌ಟಿಇ ಕಾಯ್ದೆ 2009ರಲ್ಲಿ ಜಾರಿಯಾಗಿದ್ದು, ಅಂದಿನಿಂದಲೂ ರಾಜ್ಯದಲ್ಲಿ ಜಾರಿಯಲ್ಲಿದೆ. 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ವಿವಿಧ ಹಂತಗಳನ್ನು ಹೊಂದಿದೆ. ಒಟ್ಟಾರೆ ಏಪ್ರಿಲ್ 30ರೊಳಗೆ ಪ್ರವೇಶ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

RTE ಸೀಟಿಗಾಗಿ ಅರ್ಜಿ ಸಲ್ಲಿಸಲು ಅರ್ಹತೆ ಏನು? :

RTE ಸೀಟಿಗಾಗಿ ಅರ್ಜಿ ಸಲ್ಲಿಸಲು ಅರ್ಹತೆ ಏನು? :

* ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 3.5 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಇದರ ಉದ್ದೇಶ. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಈ ಅರ್ಹತೆಗಳು ಮುಖ್ಯವಾಗುತ್ತವೆ.
* ವಿದ್ಯಾರ್ಥಿ ಕರ್ನಾಟಕದ ಮೂಲ ನಿವಾಸಿ ಆಗಿರಬೇಕು.
* ಎಲ್‌ಕೆಜಿಗೆ ಅರ್ಜಿ ಸಲ್ಲಿಸಬೇಕಾದರೆ ಮಗುವಿನ ವಯಸ್ಸು 3 ವರ್ಷ 5 ತಿಂಗಳಿನಿಂದ 5 ವರ್ಷದ ಒಳಗಿರಬೇಕು. (ಅಂದರೆ 2017ರ ಆಗಸ್ಟ್ 1ರಿಂದ 2018ರ ಆಗಸ್ಟ್ 1ರೊಳಗೆ ಮಗುವಿನ ಜನನ ಆಗಿರಬೇಕು)
* ಒಂದನೇ ತರಗತಿಗೆ ಅರ್ಜಿ ಸಲ್ಲಿಸುವ ಮಗುವಿಗೆ 5 ವರ್ಷ 5 ತಿಂಗಳಿನಿಂದ 7 ವರ್ಷದ ಒಳಗೆ ಇರಬೇಕು. (ಅಂದರೆ, 2015ರ ಆಗಸ್ಟ್ 1ರಿಂದ 2016ರ ಆಗಸ್ಟ್ 1ರೊಳಗೆ ಮಗುವಿನ ಜನನ ಆಗಿರಬೇಕು.
* ಕುಟುಂಬದ ಆದಾಯ ವಾರ್ಷಿಕ 3.5 ಲಕ್ಷ ಮೀರಿರಬಾರದು.
* ಮಗು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
* ಮುಖ್ಯವಾಗಿ ಅನಾಥ ಮಗು, ವಿಶೇಷ ಅಗತ್ಯಯುಳ್ಳ ಮಗು (CWSN), ಎಚ್‌ಐವಿ ಸೋಂಕಿತ ಮಗು/ಭಾದಿತ ಮಗು, ವಲಸೆ ಮತ್ತು ಬೀದಿ ಮಗು, ಬರಗಾಲ ಕಾರಣ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಗು, ಮಂಗಳಮುಖಿ ಇಂತಹ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಸೂಕ್ತ ಪ್ರಮಾಣಪತ್ರಗಳನ್ನು ಪಡೆದಿರಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವುಗಳ ನೈಜತೆ ಪರಿಶೀಲಿಸಿ ಅವರೇ ಅರ್ಜಿ ಸಲ್ಲಿಕೆಗೆ ನೆರವಾಗುತ್ತಾರೆ.

ಶಿಕ್ಷಣ ಇಲಾಖೆ ವೇಳಾಪಟ್ಟಿ :
 

ಶಿಕ್ಷಣ ಇಲಾಖೆ ವೇಳಾಪಟ್ಟಿ :

ಜನವರಿ 7,2022 : 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆಯ ಬಗ್ಗೆ ಮಾರ್ಗಸೂಚಿ ಹೊರಡಿಸಿರುವುದು
ಜನವರಿ 10,2022 : ಆರ್.ಟಿ.ಇ ದಾಖಲಾತಿ ಪ್ರಕ್ರಿಯೆ ಕುರಿತಂತೆ ವೀಡಿಯೋ ಸಂವಾದ ಕಾರ್ಯಕ್ರಮ
ಜನವರಿ 18,2022 : ತಂತ್ರಾಂಶದ ಡೆಮೋ
ಜನವರಿ 18,2022 : ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿದಂತೆ ನೆರೆಹೊರೆಯ ಎಲ್ಲಾ ಶಾಲೆಗಳ ತಾತ್ಕಾಲಿಕ ಪಟ್ಟಿ ಪ್ರಕಟಣೆ
ಜನವರಿ 24,2022 : ನೆರೆಹೊರೆ ಶಾಲೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ
ಜನವರಿ 24,2022 : ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ ಹಾಗೂ 1ನೇ ತರಗತಿ ಅನುದಾನರಹಿತ ಶಾಲೆಗಳಲ್ಲಿ ಶಾಲಾವಾರು ಶೆ.25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳ ಹಾಗೂ ಅನುದಾನಿತ ಶಾಲೆಗಳಲ್ಲಿ ಕನಿಷ್ಟ್ ಲಭ್ಯವಿರುವ ಶಾಲಾವಾರು ಸೀಟುಗಳ ಸಂಖ್ಯೆಯನ್ನು ಜಿಲ್ಲೆಯ ಅಧಿಕೃತ ವೆಬ್‌ಸೈಟ್ ಅಥವಾ ಕಚೇರಿಯ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸುವುದು.
ಫೆಬ್ರವರಿ 1 ರಿಂದ 2,2022 : ಅರ್ಜಿ ಸಲ್ಲಿಸಲು ಪ್ರಯೋಗಾರ್ಥ ಅವಧಿ
ಫೆಬ್ರವರಿ 3 ರಿಂದ ಮಾರ್ಚ್ 3,2022 : ಅನುದಾನಿತ ಶಾಲೆಗಳೂ ಸೇರಿದಂತೆ ದಾಖಲಾತಿ ಕೋರಿ ಪೋಷಕರು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅವಧಿ
ಫೆಬ್ರವರಿ 2 ರಿಂದ ಮಾರ್ಚ್ 7,2022 : ಇ.ಐ.ಡಿ ಮೂಲಕ ಸಲ್ಲಿಸಿದ ಅರ್ಜಿಗಳ ದತ್ತಾಂಶದ ನೈಜತೆ ಪರಿಶೀಲನೆ
ಫೆಬ್ರವರಿ 4 ರಿಂದ ಮಾರ್ಚ್ 7,2022 : ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ದವಲ್ಲದ ಅರ್ಜಿಗಳಲ ಪರಿಶೀಲನೆ
ಮಾರ್ಚ್ 14,2022 : ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ
ಮಾರ್ಚ್ 23,2022 : ಆನ್‌ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ
ಮಾರ್ಚ್ 24 ರಿಂದ ಏಪ್ರಿಲ್ 4,2022 : ಶಾಲೆಗಳ ದಾಖಲಾತಿ ಆರಂಭ
ಮಾರ್ಚ್ 24 ರಿಂದ ಏಪ್ರಿಲ್ 4,2022 : ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವುದು.
ಏಪ್ರಿಲ್ 19,2022 : ಆನ್‌ಲೈನ್ ತಂತ್ರಾಂಶದ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ
ಏಪ್ರಿಲ್ 20 ರಿಂದ 30,2022 : ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಅವಧಿ
ಏಪ್ರಿಲ್ 20 ರಿಂದ 30,2022 : ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸುವುದು

ಮ್ಯಾಪ್‌ ಮಾಡಲು ಸೂಚನೆ :

ಮ್ಯಾಪ್‌ ಮಾಡಲು ಸೂಚನೆ :

ನೆರೆಹೊರೆಯಲ್ಲಿರುವ ಯಾವುದೇ ಶಾಲೆಯನ್ನು ಕೈಬಿಡದಂತೆ ಎಲ್ಲ ಸರ್ಕಾರಿ, ಬಿಬಿಎಂಪಿ ಶಾಲೆಗಳು ಮತ್ತು ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳನ್ನು ಮ್ಯಾಪಿಂಗ್ ಮಾಡಲು ಸೂಚಿಸಲಾಗಿದೆ. ಕೇವಲ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳನ್ನು ಪಟ್ಟಿಯಲ್ಲಿ ಸೇರಿಸುವಂತಿಲ್ಲ. ಅಲ್ಲದೆ, ಅಲ್ಪಸಂಖ್ಯಾತ ಘೋಷಣಾ ಪ್ರಮಾಣ ಪತ್ರ ಪಡೆದಿರುವ ಹಾಗೂ ಈಗಾಗಲೇ ಮುಚ್ಚಿರುವ, ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆದಿರುವ ಶಾಲೆಗಳನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಸೂಚಿಸಲಾಗಿದೆ.

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸುವ ಕ್ರಮ ಹಾಗೂ ಪರಿಶೀಲನೆ :

ಅರ್ಜಿ ಸಲ್ಲಿಸುವ ಕ್ರಮ ಹಾಗೂ ಪರಿಶೀಲನೆ :

ಶಿಕ್ಷಣ ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವ ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಅಥವಾ ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ಒನ್, ಕರ್ನಾಟಕ ಒನ್, ತಾಲ್ಲೂಕು ಮತ್ತು ಹೋಬಳಿ ಮಟ್ಟದ ಅಟಲ್‌ಜಿ ಜನಸ್ನೇಹಿ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಒಂದು ವೇಳೆ ಪೋಷಕರ ಬಳಿ ಸ್ಮಾರ್ಟ್‌ಫೋನ್ ಇದ್ದಲ್ಲಿ ತಮ್ಮ ಮೊಬೈಲ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. ಈ ಸಂದರ್ಭದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌.ಡಿ. ಸಂಖ್ಯೆಯನ್ನು ಮಾತ್ರ ನಿಗದಿತ ಕಾಲಂನಲ್ಲಿ ನಮೂದಿಸಬೇಕು. ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲ. ಸೀಟು ಲಭ್ಯವಾಗಿ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಈ ಪ್ರಮಾಣ ಪತ್ರಗಳನ್ನು ಒದಗಿಸಬಹುದಾಗಿದೆ.

ಪೋಷಕರಿಗೆ ಎಸ್‌.ಎಂ.ಎಸ್‌ ಸಂದೇಶ :

ಪೋಷಕರಿಗೆ ಎಸ್‌.ಎಂ.ಎಸ್‌ ಸಂದೇಶ :

ತಂತ್ರಾಂಶದ ಮೂಲಕ ನೈಜತೆ ತಾಳೆ ಆಗದ ಅಪೂರ್ಣ ಅಥವಾ ಕ್ರಮಬದ್ದವಲ್ಲದ ಅರ್ಜಿಗಳ ತಂದೆ/ ತಾಯಿ ಪೋಷಕರ ಮೊಬೈಲಿಗೆ ದೋಷಗಳನ್ನು ಸರಿಪಡಿಸಲು ಎಸ್‌.ಎಂ.ಎಸ್‌ ಕಳುಹಿಸಲಾಗುವುದು. ಸಂಬಂಧಿಸಿದ ಪೋಷಕರು ಸಕಾಲಕ್ಕೆ ಪ್ರತಿಕ್ರಿಯಿಸುವುದು.

RTE 2022ಗೆ ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು :

RTE 2022ಗೆ ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು :

ಅರ್ಜಿದಾರರ ಆಧಾರ್ ಕಾರ್ಡ್
ಜನನ ಪ್ರಮಾಣಪತ್ರ
ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಮತ್ತು ಜಾತಿ ಪ್ರಮಾಣಪತ್ರ.
ಪೋಷಕರು ಅಂದರೆ ತಂದೆಯ ಅಥವಾ ತಾಯಿಯ ಆಧಾರ್ ಕಾರ್ಡ್
ಸರ್ಕಾರದ ಅನುಮೋದಿತ ವಿಳಾಸ ಪುರಾವೆ. ಉದಾಹರಣೆಗೆ ಆಧಾರ್ ಕಾರ್ಡ್/ಚಾಲನಾ ಪರವಾನಗಿ/ ಪಡಿತರ ಚೀಟಿ/ ಬ್ಯಾಂಕ್ ಪಾಸ್‌ಬುಕ್/ ಪಾಸ್‌ಪೋರ್ಟ್/ ವೋಟರ್ ಐಡಿ ಇತ್ಯಾದಿ.

RTE 2022ಗೆ ಅರ್ಜಿ ಸಲ್ಲಿಸುವುದು ಹೇಗೆ ? :

RTE 2022ಗೆ ಅರ್ಜಿ ಸಲ್ಲಿಸುವುದು ಹೇಗೆ ? :

ಸ್ಟೆಪ್ 1: ಅರ್ಜಿದಾರರು ಅಧಿಕೃತ ವೆಬ್‌ಸೈಟ್‌ http://www.schooleducation.kar.nic.in/pryedn/rteadmissions.html ಗೆ ಭೇಟಿ ನೀಡಿ.
ಸ್ಟೆಪ್ 2: ನಿಮ್ಮ ಅರ್ಜಿ ಸಂಖ್ಯೆ ಪಡೆಯಲು ಒಂದು ಭಾರಿ ನೊಂದಣಿ ಮಾಡುವುದು. ನಿಮ್ಮ ನೋಂದಾಯಿತ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬರಲಿದೆ.
ಸ್ಟೆಪ್ 3: ನಿಮ್ಮ ಅಪ್ಲಿಕೇಶನ್ ಸಂಖ್ಯೆಯನ್ನು ಪಡೆದ ನಂತರ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ ಮಕ್ಕಳ ವಿವರಗಳು ಮತ್ತು ಪೋಷಕರ ವಿವರಗಳನ್ನು ನಮೂದಿಸಿ.
ಸ್ಟೆಪ್ 4: ನಿಮ್ಮ ಮನೆಯಿಂದ 1 ಕಿಮೀ ಮತ್ತು 1-3 ಕಿಮೀ ವ್ಯಾಪ್ತಿಯಲ್ಲಿ ಶಾಲೆಗಳನ್ನು ಪಟ್ಟಿ ಮಾಡಲು ವಿಳಾಸವನ್ನು ನಿಖರವಾಗಿ ಪತ್ತೆ ಮಾಡಿ.
ಸ್ಟೆಪ್ 5: ಶಾಲೆಯನ್ನು ಆಯ್ಕೆ ಮಾಡಿದಾಗ ಈಗ ಅಗತ್ಯವಿರುವ ಮಾನದಂಡವನ್ನು ಆಯ್ಕೆಮಾಡಿ.
ಸ್ಟೆಪ್ 6: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅಪ್ಲಿಕೇಶನ್ ಅನ್ನು ದೃಢೀಕರಿಸಿ.
ಸ್ಟೆಪ್ 7: ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿದ ಬಳಿಕ ನಿಮ್ಮ ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ.

ಅಭ್ಯರ್ಥಿಗಳು ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Karnataka Education Department released the notification for for admission of RTE 2022-23. Check out the Online Application Form, Date, Eligibility and required documents.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X