ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗಪ್ರಯೋಗಶಾಲೆಯಲ್ಲಿ 2021-22ನೇ ಸಾಲಿನಲ್ಲಿ ಒಂದು ವರ್ಷ ಅವಧಿಯ ರಂಗಶಿಕ್ಷಣ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 31ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ರಂಗಪ್ರಯೋಗಶಾಲೆಯು 2008 ರಲ್ಲಿ ಪ್ರಾರಂಭವಾಗಿದ್ದು, ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಶಾಸ್ತ್ರೀಯವಾಗಿ ಮತ್ತು ಪ್ರಾಯೋಗಿಕವಾಗಿ ರಂಗಭೂಮಿಯನ್ನು ಕಲಿಸುವ ಉದ್ದೇಶವನ್ನು ಹೊಂದಿದೆ.
ವಿದ್ಯಾರ್ಹತೆ ಏನಿರಬೇಕು :
ರಂಗಶಿಕ್ಷಣ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಸಲ್ಲಿಸಲು ಕನಿಷ್ಟ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ ಪದವೀಧರರಿಗೆ ಹೆಚ್ಚು ಆದ್ಯತೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ ಹೇಗಿರತ್ತೆ ?:
ಕಚೇರಿಗೆ ತಲುಪಿದ ಅರ್ಜಿಗಳನ್ನು ಪರಿಶೀಲಿಸಿ ಸಂದರ್ಶನ ನಡೆಯುವ ದಿನಾಂಕವನ್ನು ಫೋನ್ ಅಥವಾ ಅಂಚೆಯ ಮೂಲಕ ಅಭ್ಯರ್ಥಿಗಳಿಗೆ ತಿಳಿಸಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ :
ಆಸಕ್ತ ಅಭ್ಯರ್ಥಿಗಳು ರಂಗಶಾಲೆಯ ವೆಬ್ಸೈಟ್ http://theatreschoolsanehalli.org/index.php ನಲ್ಲಿ ಪ್ರವೇಶ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ಪೋಸ್ಟ್ ಮೂಲಕ ಕಚೇರಿಗೆ ತಲುಪಿಸಬಹುದು. ಅಥವಾ ಅಭ್ಯರ್ಥಿಗಳು ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ, ವಾಟ್ಸಪ್/ಜಿ ಮೇಲ್ ಮೂಲಕ ಅರ್ಜಿಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಪುನಃ ಅದೇ ದೂರವಾಣಿಗೆ ಸಂಖ್ಯೆಗೆ ವಾಟ್ಸಪ್ ಅಥವಾ ಮೇಲ್ ಮಾಡುವ ಮೂಲಕ ಆಗಸ್ಟ್ 31,2021ರೊಳಗೆ ಅರ್ಜಿಯನ್ನು ತಲುಪಿಸಬಹುದು.
ಅಥವಾ
ಪ್ರಾಚಾರ್ಯರು, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ, ಸಾಣೇಹಳ್ಳಿ-577 515, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಇಂದ ಅರ್ಜಿಗಳನ್ನು ತರಿಸಿಕೊಂಡು ಭರ್ತಿ ಮಾಡಿ ಕಚೇರಿಗೆ ತಲುಪಿಸಬಹುದು.
ಗಮನಿಸಿ:
ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಕರ್ನಾಟಕ ಹಾಗೂ ಭಾರತದ ರಂಗತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯಲಿವೆ.
ಸೂಚನೆ :
ಸಂದರ್ಶನ ಹಾಗೂ ತರಗತಿಗಳಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಝರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯ ಹಾಗೂ ಸಂದರ್ಶನಕ್ಕೆ ಬರುವಾಗ ಎಲ್ಲಾ ಅಭ್ಯರ್ಥಿಗಳು ತಮ್ಮ ಊರಿನಿಂದಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣ ಪತ್ರವನ್ನು ಶಾಲೆಯ ಕಚೇರಿಗೆ ಒಪ್ಪಿಸಬೇಕು.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ವಿವರಗಳು :
* ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ಜೆರಾಕ್ಸ್ ಪತ್ರಿ
* ಪದವಿ ಪ್ರಮಾಣ ಪತ್ರ
* ಪರಿಶಿಷ್ಟ ವರ್ಗ/ಪಂಗಡ/ಜಾತಿ ಸೇರಿದ್ದರೆ ಅದರ ವಿವರ
* ವಿಶೇಷ ಆಸಕ್ತಿ, ಹವ್ಯಾಸಗಳಿದ್ದರೆ ಬರೆದು ಅರ್ಜಿಯೊಂದಿಗೆ ಲಗತ್ತಿಸಬೇಕು
* ಶಾಲಾ ವರ್ಗಾವಣೆ ಪತ್ರದ ನಕಲು
* ಇತ್ತೀಚಿನ ಮೂರು ಭಾವ ಚಿತ್ರಗಳು
ಸಂದರ್ಶನಕ್ಕೆ ಬರುವಾಗ ತರಬೇಕಾದ ವಿವರಗಳು :
* ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ಮೂಲ ಪ್ರತಿ
* ಪದವಿ ಪ್ರಮಾಣ ಪತ್ರ
* ಇತರೆ ಪ್ರಶಸ್ತಿ ಪ್ರಮಾಣ ಪತ್ರಗಳು
* ಪತ್ರಿಕಾ ಲೇಖನಗಳಿದ್ದರೆ ಅವುಗಳ ವಿವರ
ಈ ರಂಗಶಾಲೆಯು ಅಭಿನಯವನ್ನೇ ಕೇಂದ್ರವಾಗಿಟ್ಟುಕೊಂಡು ಅದನ್ನು ಕಲಿಸುವ ಶಾಲೆಯಾಗಿ ರೂಪುಗೊಳ್ಳುತ್ತಿದೆ. ನಟನೆಯ ಪರಂಪರೆ ಬೆಳೆಯಬೇಕೆಂಬುದೇ ಈ ಶಾಲೆಯ ಆಶಯವಾಗಿದ್ದು, ಅದಕ್ಕಾಗಿ ದೇಶದ ಹಲವು ಮೂಲರೂಪದ, ಅಪರೂಪದ ಪ್ರದರ್ಶಕ ಕಲೆಗಳನ್ನು ನೇರವಾಗಿ ಅದನ್ನೇ ಅಭ್ಯಾಸ ಮಾಡುತ್ತಿರುವವರ ಮೂಲಕ ಕಲಿಸಲಾಗುತ್ತಿದೆ.
ಈ ರಂಗಶಾಲೆಯಲ್ಲಿನ ಪಾಠ-ಪ್ರವಚನಗಳಿಗೆ ಬಹುಪಾಲು ರಾಜ್ಯ ಹಾಗೂ ರಾಜ್ಯದ ಅತಿಥಿ ಅಧ್ಯಾಪಕರುಗಳನ್ನು ಆಶ್ರಯಿಸಿದೆ. ವರ್ಷವರ್ಷವೂ ಅತಿಥಿ ಉಪನ್ಯಾಸಕರನ್ನು ಬದಲಾಯಿಸುವ ಮೂಲಕ ರಂಗ ಶಿಕ್ಷಣಕ್ಕೆ ವೈವಿಧ್ಯತೆಯನ್ನು ನೀಡಲಾಗಿದೆ.
ಶಾಲೆಯು ಆರಂಭವಾದಗಿನಿಂದ ಅನೇಕ ನಾಟಕಗಳನ್ನು ಹಾಗೂ ಅಭ್ಯಾಸ ಪ್ರಯೋಗಗಳನ್ನು ನಡೆಸಿದೆ. ಪ್ರತಿ ವರ್ಷ ಯಕ್ಷಗಾನ ದೊಡ್ಡಾಟ, ಸಣ್ಣಕತೆ, ಕಾವ್ಯಗಳ ಮೇಲಿನ ಆಶುವಿಸ್ತರಗಳು ನಡೆದಿವೆ.
ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್ theatreschoolsanehalli.org ಗೆ ಭೇಟಿ ನೀಡಿ.
ಅಭ್ಯರ್ಥಿಗಳು ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿರುವ ಕುರಿತು ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











