ಜೀವನದಲ್ಲಿ ಏನಾದ್ರೂ ದೊಡ್ಡದಾಗಿ ಸಾಧನೆ ಮಾಡಬೇಕೆಂದು ಎಲ್ಲರೂ ಕನಸು ಕಾಣುತ್ತಾರೆ. ಅದಕ್ಕಾಗಿ ನಾವು ಜೀವನದಲ್ಲಿ ಒಂದು ಗುರಿ ಅಥವಾ ಟಾರ್ಗೆಟ್ ಅಳವಡಿಸಿಕೊಂಡಿರುತ್ತೇವೆ ಸರಿ ತಾನೇ?

ಏನೋ ನಿಮಗೆ ಜೀವನದಲ್ಲಿ ಡಾಕ್ಟರ್, ಇಂಜಿನೀಯರ್, ಜರ್ನಲಿಸ್ಟ್ ಅಥವಾ ರೈಟರ್ ಹೀಗೇ ಏನೇನೋ ಆಗಬೇಕಂಬ ಆಸೆ ಇರುತ್ತದೆ. ಅದೇ ಥರಹ ಕೆಲವರು ಐಎಎಸ್ ಆಗಬೇಕೆಂದು ಕನಸು ಕಾಣುತ್ತಾರೆ. ಈ ರೀತಿ ಕನಸು ಕಾಣುವವರು ಇಂಟಲಿಜೆಂಟ್ ಆಗಿರಬೇಕು ಹಾಗೆಯೇ ಜತೆಗೆ ಸ್ಮಾರ್ಟ್ ಕೂಡಾ ಆಗಿರಬೇಕು.
ಇದೀಗ ನಿಮಗೆ ಐಎಎಸ್ ಆಫೀಸರ್ ಆಗಬೇಕೆಂಬ ಕನಸು ಕಾಣುತ್ತಿದ್ದರೆ, ಮೊದಲಿಗೆ ಪ್ರತಿಯೊಂದು ಚಿಕ್ಕ ಮಾಹಿತಿ ಬಗ್ಗೆಯೂ ನೀವು ಆಳವಾಗಿ ಅಧ್ಯಯನ ಮಾಡಬೇಕು. ಅಷ್ಟೇ ಅಲ್ಲ ಇನ್ನು ಐಎಎಸ್ ಆಫೀಸರ್ ಆಗಬೇಕೆಂದಿದ್ದರೆ ಕೋಚಿಂಗ್ ಕೂಡಾ ಮುಖ್ಯ. ಆದ್ರೆ ಯಾವ ಕೋಚಿಂಗ್ ಕ್ಲಾಸ್ ಎಂದು ಆಯ್ಕೆ ಮಾಡುವುದು ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಟಾಸ್ಕ್ ಆಗಿರುತ್ತದೆ.
ಟ್ರೆಂಡ್, ಪಾಪ್ಯುಲಾರಿಟಿ ಹಾಗೂ ಫಲಿತಾಂಶದ ಆಧಾರದ ಮೇಲೆ ಎಲ್ಲಿಯ ಕೋಚಿಂಗ್ ಸೆಂಟರ್ ಬೆಸ್ಟ್ ಎಂಬ ಲಿಸ್ಟ್ ಇಲ್ಲಿದೆ.
ದೆಹಲಿ:
ಕಂಫರ್ಟ್ ಹಾಗೂ ಕನ್ವೀಯನ್ಸ್ ವಿಚಾರ ಬಂದ್ರೆ ಭಾರತದ ಇತರ ಸಿಟಿಗಳಿಗಿಂತ ದೆಹಲಿ ಮೊದಲ ಸ್ಥಾನದಲ್ಲಿ ಬರುತ್ತದೆ. ದೆಹಲಿಯು ಅಲ್ಲಿನ ಎಜ್ಯುಕೇಶನ್ ಸಿಸ್ಟಮ್‌ಗೆ ಈಗಾಗಲೇ ಫೇಮಸ್. ಕಳೆದ ವರ್ಷದ ಫಲಿತಾಂಶವನ್ನ ಚೆಕ್ ಮಾಡಿದಾಗ ದೆಹಲಿಯಲ್ಲಿ ಕಲಿತ ಹೆಚ್ಚಿನ ಮಂದಿ ವಿದ್ಯಾರ್ಥಿಗಳು ಐಎಎಸ್ ಸ್ಥಾನ ಅಲಂಕರಿಸಿದ್ದಾರೆ. ಇಲ್ಲಿ ಹಲವಾರು ಎಕ್ಸ್‌ಪರ್ಟ್ಸ್ ಉತ್ತಮ ಮಟ್ಟದ ಶಿಕ್ಷಣವನ್ನ ನೀಡುತ್ತಾರೆ.
ಲಖ್ನೋ:
ಐಎಎಸ್ ತಯಾರಿಗೆ ಲಖ್ನೋ ಸಿಟಿ ಪೇಮಸ್. ಈ ಸಿಟಿಯಲ್ಲಿ ಹಲವಾರು ಫೇಮಸ್ ಕೋಚಿಂಗ್ ಸೆಂಟರ್‌ಗಳಿವೆ. ಉತ್ತರ ಪ್ರದೇಶದ ರಾಜಧಾನಿಯಾಗಿರುವ ಇಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀವು ಕಾಣಬಹುದು. ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಬೇಕಾಗಿರುವ ಮೂಲ ಸವಲತ್ತುಗಳು ಕೂಡಾ ಸುಲಭವಾಗಿ ದೊರೆಯುತ್ತದೆ. ಇನ್ನು ಇದು ರಾಜಧಾನಿಯಾಗಿರುವುದರಿಂದ ಇಲ್ಲಿನ ಖರ್ಚುವೆಚ್ಚ ಸ್ವಲ್ಪ ಅಧಿಕವೇ ಇದೆ.
ಪಾಟ್ನಾ:
ಈ ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಐಎಎಸ್ ಕೋಚಿಂಗ್ ಲೆವೆಲ್ ಇದೀಗ ಇಲ್ಲಿ ತುಂಬಾ ಇಂಪ್ರೂವ್ ಆಗಿದೆ. ಸೆಲೆಕ್ಟ್ ಆದ ಲಿಸ್ಟ್‌ನಲ್ಲಿ ಬಿಹಾರ್ ಅಭ್ಯರ್ಥಿಯೇನಾದ್ರೂ ಇದ್ರೆ ಖಂಡಿತ ನಿಮಗೆ ಅವರ ಶ್ರಮ ತಿಳಿಯುತ್ತದೆ. ಇಲ್ಲಿಯ ಶಿಕ್ಷಣದ ಗುಣಮಟ್ಟ ನೋಡಿದ್ರೆ ಇಲ್ಲಿನ ಕಲಿಕೆಯ ವಿಧಾನವು ನೀವು ಸುಲಭವಾಗಿ ಅರ್ಥಮಾಡಿಕೊಳ್ಳುವಂತಿದೆ. ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಟ್ನಾದಿಂದ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.
ಜೈಪುರ್:
ಈ ಪಿಂಕ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಈ ನಗರ ಐಎಎಸ್ ಕೋಚಿಂಗ್ ಗೆ ಬೆಸ್ಟ್ ನಗರವಾಗಿದೆ. ಈ ನಗರದ ಅದೆಷ್ಟೋ ವಿದ್ಯಾರ್ಥಿಗಳು ಇದೀಗ ಐಎಎಸ್ ಸ್ಥಾನವನ್ನ ಅಲಂಕರಿಸಿದ್ದಾರೆ. ಇಲ್ಲಿಯ ಶೈಕ್ಷಣಿಕ ವಾತಾವರಣವು ಪಾಸಿಟೀವ್ ಆಗಿದ್ದು, ಹೈ ಲೆವೆಲ್ ಕೋಚಿಂಗ್ ಸೆಂಟರ್‌ಗಳನ್ನ ನೀವು ಇಲ್ಲಿ ಗುರುತಿಸಬಹುದು.


Click it and Unblock the Notifications











