ಈ ಸ್ಟೇಟ್‌ನಲ್ಲಿ ಐಎಎಸ್ ಕೋರ್ಸ್ ಮಾಡಿದ್ರೆ ನೀವು ಪಕ್ಕಾ ಐಎಎಸ್ ಅಧಿಕಾರಿ ಆಗ್ತೀರಾ!

By Kavya

ಜೀವನದಲ್ಲಿ ಏನಾದ್ರೂ ದೊಡ್ಡದಾಗಿ ಸಾಧನೆ ಮಾಡಬೇಕೆಂದು ಎಲ್ಲರೂ ಕನಸು ಕಾಣುತ್ತಾರೆ. ಅದಕ್ಕಾಗಿ ನಾವು ಜೀವನದಲ್ಲಿ ಒಂದು ಗುರಿ ಅಥವಾ ಟಾರ್ಗೆಟ್ ಅಳವಡಿಸಿಕೊಂಡಿರುತ್ತೇವೆ ಸರಿ ತಾನೇ?

ಈ ಸ್ಟೇಟ್‌ನಲ್ಲಿ ಐಎಎಸ್ ಕೋರ್ಸ್ ಮಾಡಿದ್ರೆ ನೀವು ಪಕ್ಕಾ ಐಎಎಸ್ ಅಧಿಕಾರಿ ಆಗ್ತೀರಾ!

 

ಏನೋ ನಿಮಗೆ ಜೀವನದಲ್ಲಿ ಡಾಕ್ಟರ್, ಇಂಜಿನೀಯರ್, ಜರ್ನಲಿಸ್ಟ್ ಅಥವಾ ರೈಟರ್ ಹೀಗೇ ಏನೇನೋ ಆಗಬೇಕಂಬ ಆಸೆ ಇರುತ್ತದೆ. ಅದೇ ಥರಹ ಕೆಲವರು ಐಎಎಸ್ ಆಗಬೇಕೆಂದು ಕನಸು ಕಾಣುತ್ತಾರೆ. ಈ ರೀತಿ ಕನಸು ಕಾಣುವವರು ಇಂಟಲಿಜೆಂಟ್ ಆಗಿರಬೇಕು ಹಾಗೆಯೇ ಜತೆಗೆ ಸ್ಮಾರ್ಟ್ ಕೂಡಾ ಆಗಿರಬೇಕು.

ಇದೀಗ ನಿಮಗೆ ಐಎಎಸ್ ಆಫೀಸರ್ ಆಗಬೇಕೆಂಬ ಕನಸು ಕಾಣುತ್ತಿದ್ದರೆ, ಮೊದಲಿಗೆ ಪ್ರತಿಯೊಂದು ಚಿಕ್ಕ ಮಾಹಿತಿ ಬಗ್ಗೆಯೂ ನೀವು ಆಳವಾಗಿ ಅಧ್ಯಯನ ಮಾಡಬೇಕು. ಅಷ್ಟೇ ಅಲ್ಲ ಇನ್ನು ಐಎಎಸ್ ಆಫೀಸರ್ ಆಗಬೇಕೆಂದಿದ್ದರೆ ಕೋಚಿಂಗ್ ಕೂಡಾ ಮುಖ್ಯ. ಆದ್ರೆ ಯಾವ ಕೋಚಿಂಗ್ ಕ್ಲಾಸ್ ಎಂದು ಆಯ್ಕೆ ಮಾಡುವುದು ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಟಾಸ್ಕ್ ಆಗಿರುತ್ತದೆ.

ALSO READ: ಯಾವ ಎಂಬಿಎ ಸ್ಪೇಶಲೈಜೇಶನ್ ಬೆಸ್ಟ್ ನಿಮಗೆ ಗೊತ್ತಾ?

ಇಂದು ಕೆರಿಯರ್ ಇಂಡಿಯಾ ನಿಮಗೆ ಐಎಎಸ್ ಕೋರ್ಸ್ ಗೆ ಯಾವ ಕೋಚಿಂಗ್ ಸಂಸ್ಥೆ ಬೆಸ್ಟ್ ಎಂಬ ಮಾಹಿತಿ ನೀಡುತ್ತಿದೆ ಮುಂದಕ್ಕೆ ಓದಿ.

ಟ್ರೆಂಡ್, ಪಾಪ್ಯುಲಾರಿಟಿ ಹಾಗೂ ಫಲಿತಾಂಶದ ಆಧಾರದ ಮೇಲೆ ಎಲ್ಲಿಯ ಕೋಚಿಂಗ್ ಸೆಂಟರ್ ಬೆಸ್ಟ್ ಎಂಬ ಲಿಸ್ಟ್ ಇಲ್ಲಿದೆ.

ದೆಹಲಿ:

ಕಂಫರ್ಟ್ ಹಾಗೂ ಕನ್ವೀಯನ್ಸ್ ವಿಚಾರ ಬಂದ್ರೆ ಭಾರತದ ಇತರ ಸಿಟಿಗಳಿಗಿಂತ ದೆಹಲಿ ಮೊದಲ ಸ್ಥಾನದಲ್ಲಿ ಬರುತ್ತದೆ. ದೆಹಲಿಯು ಅಲ್ಲಿನ ಎಜ್ಯುಕೇಶನ್ ಸಿಸ್ಟಮ್‌ಗೆ ಈಗಾಗಲೇ ಫೇಮಸ್. ಕಳೆದ ವರ್ಷದ ಫಲಿತಾಂಶವನ್ನ ಚೆಕ್ ಮಾಡಿದಾಗ ದೆಹಲಿಯಲ್ಲಿ ಕಲಿತ ಹೆಚ್ಚಿನ ಮಂದಿ ವಿದ್ಯಾರ್ಥಿಗಳು ಐಎಎಸ್ ಸ್ಥಾನ ಅಲಂಕರಿಸಿದ್ದಾರೆ. ಇಲ್ಲಿ ಹಲವಾರು ಎಕ್ಸ್‌ಪರ್ಟ್ಸ್ ಉತ್ತಮ ಮಟ್ಟದ ಶಿಕ್ಷಣವನ್ನ ನೀಡುತ್ತಾರೆ.

ALSO READ: ಕ್ಲಿಕ್ ಕ್ಲಿಕ್ ನಿಮಗೂ ಈ ಹವ್ಯಾಸವಿದೆಯಾ... ಟಾಪ್ ಐದು ಫೋಟೋಗ್ರಾಫಿ ಕೋರ್ಸಗಳು

 

ಅಲಹಾಬಾದ್:

ಹಿಂದಿ ಮಾಧ್ಯಮದಿಂದ ಯಾರು ಬಂದಿರುತ್ತಾರೋ ಅಂತಹ ವಿದ್ಯಾರ್ಥಿಗಳಿಗೆ ಅಲಹಾಬಾದ್ ಫೇಮಸ್ ಸಿಟಿಯಾಗಿದೆ. ಇಲ್ಲಿ ಕನಿಷ್ಟ ಶುಲ್ಕಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಸಿವಿಲ್ ಪರೀಕ್ಷೆಯ ಕೊನೆಯ ಲಿಸ್ಟ್‌ನಲ್ಲಿ ಸೆಲೆಕ್ಟ್ ಆಗಿರೋ ಹೆಚ್ಚಿನ ವಿದ್ಯಾರ್ಥಿಗಳು ಅಲಹಾಬಾದ್‌ನಲ್ಲಿ ಸ್ಟಡಿ ಮಾಡಿದ ವಿದ್ಯಾರ್ಥಿಗಳಾಗಿರುತ್ತಾರೆ. ಅಲಹಾಬಾದ್‌ನಲ್ಲಿ ಬಡೋರಿಯಾ ಅಕಾಡೆಮಿ, ಬಿಪಿನ್ ಅಕಾಡೆಮಿ, ಆರ್‌ಸಿ ಸಿನ್ಹಾ ಅಕಾಡೆಮಿ, ಕಾಸ್ಮೋಸ್ ಅಕಾಡಿಮಿ, ನಿಥಾ ಅಕಾಡೆಮಿ ಹಾಗೂ ಇನ್ನಿತರ ಫೇಮಸ್ ಸಂಸ್ಥೆಗಳಿವೆ.

ಲಖ್ನೋ:

ಐಎಎಸ್ ತಯಾರಿಗೆ ಲಖ್ನೋ ಸಿಟಿ ಪೇಮಸ್. ಈ ಸಿಟಿಯಲ್ಲಿ ಹಲವಾರು ಫೇಮಸ್ ಕೋಚಿಂಗ್ ಸೆಂಟರ್‌ಗಳಿವೆ. ಉತ್ತರ ಪ್ರದೇಶದ ರಾಜಧಾನಿಯಾಗಿರುವ ಇಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀವು ಕಾಣಬಹುದು. ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಬೇಕಾಗಿರುವ ಮೂಲ ಸವಲತ್ತುಗಳು ಕೂಡಾ ಸುಲಭವಾಗಿ ದೊರೆಯುತ್ತದೆ. ಇನ್ನು ಇದು ರಾಜಧಾನಿಯಾಗಿರುವುದರಿಂದ ಇಲ್ಲಿನ ಖರ್ಚುವೆಚ್ಚ ಸ್ವಲ್ಪ ಅಧಿಕವೇ ಇದೆ.

ಪಾಟ್ನಾ:

ಈ ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಐಎಎಸ್ ಕೋಚಿಂಗ್ ಲೆವೆಲ್ ಇದೀಗ ಇಲ್ಲಿ ತುಂಬಾ ಇಂಪ್ರೂವ್ ಆಗಿದೆ. ಸೆಲೆಕ್ಟ್ ಆದ ಲಿಸ್ಟ್‌ನಲ್ಲಿ ಬಿಹಾರ್ ಅಭ್ಯರ್ಥಿಯೇನಾದ್ರೂ ಇದ್ರೆ ಖಂಡಿತ ನಿಮಗೆ ಅವರ ಶ್ರಮ ತಿಳಿಯುತ್ತದೆ. ಇಲ್ಲಿಯ ಶಿಕ್ಷಣದ ಗುಣಮಟ್ಟ ನೋಡಿದ್ರೆ ಇಲ್ಲಿನ ಕಲಿಕೆಯ ವಿಧಾನವು ನೀವು ಸುಲಭವಾಗಿ ಅರ್ಥಮಾಡಿಕೊಳ್ಳುವಂತಿದೆ. ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಟ್ನಾದಿಂದ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

ಜೈಪುರ್:

ಈ ಪಿಂಕ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಈ ನಗರ ಐಎಎಸ್ ಕೋಚಿಂಗ್ ಗೆ ಬೆಸ್ಟ್ ನಗರವಾಗಿದೆ. ಈ ನಗರದ ಅದೆಷ್ಟೋ ವಿದ್ಯಾರ್ಥಿಗಳು ಇದೀಗ ಐಎಎಸ್ ಸ್ಥಾನವನ್ನ ಅಲಂಕರಿಸಿದ್ದಾರೆ. ಇಲ್ಲಿಯ ಶೈಕ್ಷಣಿಕ ವಾತಾವರಣವು ಪಾಸಿಟೀವ್ ಆಗಿದ್ದು, ಹೈ ಲೆವೆಲ್ ಕೋಚಿಂಗ್ ಸೆಂಟರ್‌ಗಳನ್ನ ನೀವು ಇಲ್ಲಿ ಗುರುತಿಸಬಹುದು.

ALSO READ: ಬೆಂಗಳೂರಿನ ಬೆಸ್ಟ್ ಪ್ರಿ- ಸ್ಕೂಲ್‌ಗಳು... ಈ ಸ್ಕೂಲ್‌ಗಳಿಂದಲೇ ಮಕ್ಕಳ ಶಿಕ್ಷಣ ಪ್ರಾರಂಭಿಸಿ!

For Quick Alerts
ALLOW NOTIFICATIONS  
For Daily Alerts

English summary
if you are willing to become an IAS, then you should first do a deep research to know about every tiny information about it. Well! finding a good coaching centre is one of the most important tasks. So here we have listed a few places that offer the best IAS training
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X