ಭಾರತದಲ್ಲಿರುವ ಟಾಪ್ 10 BEd ಕಾಲೇಜ್‌ಗಳು

By Nishmitha B

ಟೀಚಿಂಗ್ ಒಂದು ಗೌರವಯುತ ಹುದ್ದೆಯಾಗಿದೆ. ಈ ಹುದ್ದೆಯಿಂದ ಸಮಾಜಕ್ಕೆ ತುಂಬಾ ಪ್ರಯೋಜನವಿದೆ. ಟೀಚರ್ಸ್ ತಮ್ಮೆಲ್ಲಾ ಜ್ಞಾನ ಹಾಗೂ ಅನುಭವನ್ನ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಾರೆ. ಹಾಗಾಗಿ ಶಿಕ್ಷಕ ವೃತ್ತಿ ತುಂಬಾ ಪವಿತ್ರವಾದುದು

ಎಲ್ಲರಿಗೂ ಟೀಚಿಂಗ್ ಮಾಡುವ ಕೌಶಲ್ಯ ಇರುವುದಿಲ್ಲ. ಆದ್ರೆ ಟೀಚಿಂಗ್ ಮಾಡಬೇಕು ಎಂಬ ಹಂಬಲವಿರುತ್ತದೆ. ಟೀಚಿಂಗ್ ಮಾಡಲು ಕೆಲವೊಂದು ಅರ್ಹತೆಗಳು ಬೇಕಾಗುತ್ತದೆ. ಆ ಅರ್ಹತೆ ಹೇಗೆ ಪಡೆಯುವುದು ಎಂದು ಯೋಚಿಸುತ್ತಿದ್ದೀರಾ...? ಅದಕ್ಕೆಂದೇ ನಮ್ಮ ದೇಶದಲ್ಲಿ ಕೆಲವೊಂದು ಶಿಕ್ಷಣ ಸಂಸ್ಥೆಗಳು ಇವೆ. ಅವು ನಿಮಗೆ ಈ ಕೌಶಲ್ಯವನ್ನ ಕಲಿಸಿ ಕೊಡುತ್ತವೆ.

ದೇಶದಲ್ಲಿ ಈ ಕೋರ್ಸ್ ಬಗ್ಗೆ ನಿಮಗೆ ತಿಳಿಸಿಕೊಡಲು ಸಾವಿರಾರು ಕಾಲೇಜುಗಳಿವೆ. ಆದ್ರೆ ಎಲ್ಲಾ ಕಾಲೇಜುಗಳು ಸ್ಟಾಂಡರ್ಡ್ ಲೆವೆಲ್‌ನಲ್ಲಿ ಈ ಬಗ್ಗೆ ತಿಳಿಸಿಕೊಡುವುದಿಲ್ಲ. ಬೆಸ್ಟ್ ಶಿಕ್ಷಣ ಸಂಸ್ಥೆಗಳಲ್ಲಿ ನೀವು ಟೀಚಿಂಗ್ ಕೋರ್ಸ್ ಮಾಡಿದ್ದಲ್ಲಿ, ನೀವು ಮುಂದೆ ವಿದ್ಯಾರ್ಥಿಗಳಿಗೆ ಕೂಡಾ ಉತ್ತಮ ಮಾರ್ಗದರ್ಶಕರಾಗಬಹುದು. ಅಂತಹ ಟಾಪ್ 10 ಕಾಲೇಜುಗಳ ಲಿಸ್ಟ್‌ ಇಲ್ಲಿದೆ

 1 ದಕ್ಷಿಣ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜು:

1 ದಕ್ಷಿಣ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜು:

ಇದು ಬಿಎಡ್ ಕೋರ್ಸ್ ಮಾಡಲು ಬೆಸ್ಟ್ ಕಾಲೇಜು ಆಗಿದೆ. ಈ ಕಾಲೇಜು ವಿದ್ಯಾರ್ಥಿಗಳಿಗೆ ಟೀಚಿಂಗ್ ಮಾಡುವ ಸಾಮರ್ಥ್ಯದ ಜತೆ ಅವರಲ್ಲಿ ಇನ್ನೂ ಕಲಿಯುವಂತಹ ಮನೋಭಾವವನ್ನ ಹುಟ್ಟಿಸುವಂತೆ ಮಾಡುತ್ತದೆ. ಇಲ್ಲಿ ಶಿಕ್ಷಣ ಶುಲ್ಕ ಹೀಗಿದೆ ರೂ. 20,000. ಯೂನಿಕ್ ಹಾಗೂ ವಿವಿಧ ಟೆಕ್ನಿಕ್ಸ್ ಗಳ ಮೂಲಕ ಇಲ್ಲಿ ಕಲಿಸಿಕೊಡಲಾಗುತ್ತದೆ. ನೀವು ಟೀಚರ್ ಆಗಬೇಕು ಅಂದುಕೊಂಡಿದ್ದರೆ ಇಲ್ಲಿಗೆ ಇಂದೇ ಅಪ್ಲೈ ಮಾಡಿ

ಕಾಲೇಜಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ :

 

2. ಕಸ್ತೂರಿ ರಾಮ್ ಕಾಲೇಜು ಆಫ್ ಹೈಯರ್ ಎಜ್ಯುಕೇಶನ್, ವಾಯುವ್ಯ ದೆಹಲಿ

2. ಕಸ್ತೂರಿ ರಾಮ್ ಕಾಲೇಜು ಆಫ್ ಹೈಯರ್ ಎಜ್ಯುಕೇಶನ್, ವಾಯುವ್ಯ ದೆಹಲಿ

ಇಲ್ಲಿ ವಿದ್ಯಾರ್ಥಿಗಳನ್ನು ಕೌಶಲ್ಯ ಹಾಗೂ ಇಟಿ ಪರೀಕ್ಚೆ ಮಾಡಿ ಈ ಕೋರ್ಸ್ ಗೆ ಆಯ್ಕೆ ಮಾಡಲಾಗುತ್ತದೆ. ಸಂಪೂರ್ಣ ಕೋರ್ಸ್ ಗೆ ಇಲ್ಲಿನ ಫೀಸ್ 40,000 ರೂ. ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನ ಪಿಕ್ ನಿಕ್ ಹಾಗೂ ಔಟಿಂಗ್ ಗೆಲ್ಲಾ ಕರೆದುಕೊಂಡು ಹೋಗುತ್ತಾರೆ
ಈ ಕಾಲೇಜಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ :

3. ಬೋಧನಾ ವಿಭಾಗದ ಶಿಕ್ಷಣ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ, ದಕ್ಷಿಣ ದೆಹಲಿ
 

3. ಬೋಧನಾ ವಿಭಾಗದ ಶಿಕ್ಷಣ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ, ದಕ್ಷಿಣ ದೆಹಲಿ

1938 ರಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪನೆಯಾಯಿತು. ಇಡೀ ದೇಶದಲ್ಲಿ ಈ ಕಾಲೇಜು ಅತೀ ಹೆಚ್ಚು ಸಂಘಟಿತವಾಗಿರುವ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಎರಡು ವಿಭಾಗಗಳಿವೆ. ಒಂದು ಎಜ್ಯುಕೇಶನಲ್ ಸ್ಟಡೀಸ್, ಇನ್ನೊಂದು ಟೀಚರ್ ಟ್ರೈನಿಂಗ್ ಹಾಗೂ ನಾನ್ ಫಾರ್ಮಲ್ ಎಜ್ಯುಕೇಶನ್ ವಿಭಾಗ. ಈ ಎರಡು ವಿಭಾಗದಲ್ಲಿ ವಿದ್ಯಾರ್ಥಿಗಳು ಡಿಗ್ರಿ ಪಡೆಯುತ್ತಾರೆ. ಈ ಕೋರ್ಸ್ ನ ಶುಲ್ಕ ರೂ 9000 ಎಂದು ಅಂದಾಜಿಸಲಾಗಿದೆ

ಈ ಕಾಲೇಜಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ :

4. ಡಿಪಾರ್ಟ್ ಮೆಂಟ್ ಆಫ್ ಎಜ್ಯುಕೇಶನ್, ಯೂನಿವರ್ಸಿಟಿ ಆಫ್ ದೆಹಲಿ, ನವದೆಹಲಿ:

4. ಡಿಪಾರ್ಟ್ ಮೆಂಟ್ ಆಫ್ ಎಜ್ಯುಕೇಶನ್, ಯೂನಿವರ್ಸಿಟಿ ಆಫ್ ದೆಹಲಿ, ನವದೆಹಲಿ:

ಈ ಕಾಲೇಜಿನಲ್ಲಿ 500 ಕ್ಕೂ ಅಧಿಕ ಸೀಟುಗಳಿವೆ. ಬೆಸ್ಟ್ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಅವಕಾಶ ಸಿಗುವುದು. ಅದಕ್ಕಾಗಿ ಇಲ್ಲಿ ಪ್ರವೇಶ ಪರೀಕ್ಷೆಗಳು ಕೂಡಾ ಇದೆ. ಈ ಕೋರ್ಸ್ ನ ಫೀಸ್ ಸೂಮಾರು 20,000 ಆಗಿದೆ

ಈ ಕಾಲೇಜಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ :

 

5 ಆಲ್ ಅಮೀನ್ ಕಾಲೇಜು ಆಫ್ ಎಜ್ಯುಕೇಶನ್, ಬೆಂಗಳೂರು

5 ಆಲ್ ಅಮೀನ್ ಕಾಲೇಜು ಆಫ್ ಎಜ್ಯುಕೇಶನ್, ಬೆಂಗಳೂರು

1960ರಲ್ಲಿ ಈ ಕಾಲೇಜು ಸ್ಥಾಪಿತವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನ ಈ ಸಂಸ್ಥೆ ನೀಡುತ್ತದೆ. ಇಲ್ಲಿಯ ಕಂಪ್ಲೀಟ್ ಕೋರ್ಸ್ ಗೆ ಫೀಸ್ ಹೀಗಿದೆ ರೂ. 30,000. ಇಲ್ಲಿ ಪದವಿ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಇದೀಗ ಗಲ್ಫ್ ರಾಷ್ಟ್ರಗಳಲ್ಲಿ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ಇನ್ನೂ ಕೆಲವರು ಯೂರೋಪ್ ರಾಷ್ಟ್ರಗಳಲ್ಲಿ ದುಡಿಯುತ್ತಿದ್ದಾರೆ

ಈ ಕಾಲೇಜಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ :

 

6. ವಿಜಯ ಟೀಚರ್ ಕಾಲೇಜು, ಬೆಂಗಳೂರು

6. ವಿಜಯ ಟೀಚರ್ ಕಾಲೇಜು, ಬೆಂಗಳೂರು

ಸಮಗ್ರ ಕಲಿಕೆ, ಅಸಾಧಾರಣ ಕ್ರೀಡಾ ಸೌಲಭ್ಯ ಹಾಗೂ ಇನ್ನಿತ್ತರ ಚಟುವಟಿಕೆಗಳಿಗೆ ಈ ಕಾಲೇಜಿನಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಇಲ್ಲಿ ಟೀಚರ್ ಎಜ್ಯುಕೇಶನನ್ನು ಎಕ್ಸ್ ಕ್ಲೂಸಿವ್ ಆಗಿ ನೀಡುವುದು ಮಾತ್ರವಲ್ಲದೇ ಎರಡು ಡಿಫರೆಂಟ್ ಕೋರ್ಸ್ ಗಳನ್ನ ಆಫರ್ ಮಾಡುತ್ತದೆ. ಎರಡು ಕೋರ್ಸ್ ನ ಶುಲ್ಕ ಸರಿ ಸುಮಾರು ರೂ. 46,500 ಆಗಿದೆ
ಈ ಕಾಲೇಜಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

7. ಬಾಂಬೇ ಟೀಚರ್ಸ್ ಟ್ರೈನಿಂಗ್ ಕಾಲೇಜು, ಮುಂಬಯಿ

7. ಬಾಂಬೇ ಟೀಚರ್ಸ್ ಟ್ರೈನಿಂಗ್ ಕಾಲೇಜು, ಮುಂಬಯಿ

ಇಲ್ಲಿ ಕಲಿತಂತಹ ವಿದ್ಯಾರ್ಥಿಗಳು ದೇಶದ ಟಾಪ್ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ಕಂಪ್ಲೀಟ್ ಎರಡು ವರ್ಷಕ್ಕೆ ಇಲ್ಲಿನ ಶುಲ್ಕ ಸುಮಾರು 45,000 ರೂ ಆಗಿದೆ
ಈ ಕಾಲೇಜಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

8 ಅಮಿಟಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್, ಅಮಿಟಿ ವಿಶ್ವವಿದ್ಯಾಲಯ, ನವದೆಹಲಿ

8 ಅಮಿಟಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್, ಅಮಿಟಿ ವಿಶ್ವವಿದ್ಯಾಲಯ, ನವದೆಹಲಿ

ಪದವಿ ಸಿಗುವ ಮುನ್ನನೇ ಈ ಸಂಸ್ಥೆಯಲ್ಲಿ ಭೋದನೆ ಅಭ್ಯಸಿಸಲು ಅವಕಾಶ ನೀಡಲಾಗುತ್ತದೆ. ಇದರಿಂದ ಶಿಕ್ಷಕರಾಗುವ ಮೊದಲೇ ವಿದ್ಯಾರ್ಥಿಗಳಿಗೆ ಟೀಚಿಂಗ್ ಮಾಡುವ ಅನುಭವ ಸಿಗುತ್ತದೆ ಅಷ್ಟೇ ಅಲ್ಲ, ಅವರ ತಪ್ಪುಗಳು ಇದೇ ಹಂತದಲ್ಲಿ ತಿಳಿದು, ಸರಿಪಡಿಸಿಕೊಳ್ಳಲು ಒಂದು ವೇದಿಕೆ ಸಿಕ್ಕಂತಾಗುತ್ತದೆ

ಇನ್ನು ಈ ಕಾಲೇಜು ಕೂಡಾ ಹೆಚ್ಚಿನ ಫೆಸಿಲಿಟಿಯನ್ನ ವಿದ್ಯಾರ್ಥಿಗಳಿಗೆ ನೀಡುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ವ್ಯವಸ್ಥೆ ಕೂಡಾ ನೀಡಲಾಗುತ್ತದೆ. ವರ್ಷಕ್ಕೆ ಈ ಕೋರ್ಸ್ ನ ಶುಲ್ಕ ಸುಮಾರು 55,000

ಈ ಕಾಲೇಜಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

9 : ಫಾಕಲ್ಟಿ ಆಫ್ ಎಜ್ಯುಕೇಶನ್, ಡಾ ಎಂ.ಜಿ. ಆರ್. ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ, ಚೆನ್ನೈ

9 : ಫಾಕಲ್ಟಿ ಆಫ್ ಎಜ್ಯುಕೇಶನ್, ಡಾ ಎಂ.ಜಿ. ಆರ್. ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ, ಚೆನ್ನೈ

ಇನ್ನು ಟೀಚಿಂಗ್ ಕೋರ್ಸ್ ಗೆ ಚೆನ್ನೈನ ಡಾ ಎಂ.ಜಿ. ಆರ್. ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ ಕೂಡಾ ಬೆಸ್ಟ್‌. ಟೀಚಿಂಗ್ ಕಲಿಕೆ ಯಾವತ್ತೂ ನಿಲ್ಲುವುದಿಲ್ಲ ಹಾಗೆಯೇ ಮುಂದು ವರೆಯುತ್ತಾ ಇರುತ್ತದೆ. ಅಷ್ಟೇ ಅಲ್ಲ ಅವರು ಪ್ರತಿ ಜ್ಞಾನಕ್ಕೂ ಅಪ್‌ಡೇಟ್ ಆಗಿರಬೇಕು. ಈ ಕಾಲೇಜಿನ ವಿಶೇಷವೇನೆಂದ್ರೆ ಇಲ್ಲಿ ಬೃಹತ್ ಲೈಬ್ರರಿ ಇದೆ. ಈ ಲೈಬ್ರರಿಯಲ್ಲಿ ನಿಮಗೆ ಯಾವುದೋ ಪುಸ್ತಕ ಸಿಕ್ಕಿಲ್ಲ ಅನ್ನೋ ಮಾತೇ ಇಲ್ಲ. ವಿದ್ಯಾರ್ಥಿಗಳ ಸೆಲ್ಫ್ ಸ್ಟಡಿಗೆ ಈ ಕಾಲೇಜು ಹೆಚ್ಚಿನ ಒತ್ತು ನೀಡುತ್ತದೆ.

ಈ ಕಾಲೇಜಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

10. ಲೇಡಿ ಇರ್ವಿನ್ ಕಾಲೇಜ್, ದೆಹಲಿ ವಿಶ್ವವಿದ್ಯಾಲಯ, ನವದೆಹಲಿ

10. ಲೇಡಿ ಇರ್ವಿನ್ ಕಾಲೇಜ್, ದೆಹಲಿ ವಿಶ್ವವಿದ್ಯಾಲಯ, ನವದೆಹಲಿ

ಮಹಿಳೆಗಾಗಿ ಇರುವ ಮತ್ತೊಂದು ಬೆಸ್ಟ್ ಕಾಲೇಜು ಅಂದ್ರೆ ಅದು ದೆಹಲಿಯ ಲೇಡಿ ಇರ್ವಿನ್ ಕಾಲೇಜ್. ಈ ಕಾಲೇಜು ದೆಹಲಿ ವಿದ್ವವಿದ್ಯಾನಿಲಯದ ಅಡಿಯಲ್ಲಿ ಬರುತ್ತದೆ. ಇಲ್ಲಿಯ ಶುಲ್ಕ ರೂ 40,000. ಇನ್ನು ವಿಶೇಷವೇನೆಂದ್ರೆ ಇಲ್ಲಿ ತರಗತಿ ಮುಗಿದ ಬಳಿಕ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಟೀಚಿಂಗ್ ಮಾಡುವ ಚಟುವಟಿಕೆಗಳಲ್ಲಿ ಭಾಗವಹಿಸಬಹುದು

ಈ ಕಾಲೇಜಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

 

For Quick Alerts
ALLOW NOTIFICATIONS  
For Daily Alerts

English summary
help you make a pick about which college is good is which one is not, we have carefully studied the pros and cons of all of them and brought to you a cumulative list of the top 10 BEd colleges in India.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X