ಯಾವುದೇ ಕಾಲೇಜಿನಲ್ಲಿ ಅಡ್ಮಿಶನ್ ಪ್ರಾರಂಭವಾದ ಕೂಡಲೇ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್ ಆಯ್ಕೆ ಮಾಡುವುದು ಎಂದು ಗೊಂದಲ ಮೂಡುತ್ತದೆ. ಯಾಕೆಂದ್ರೆ ಇಂದು ಆಯ್ಕೆ ಮಾಡುವ ಕೋರ್ಸ್ ನಿಂದ ಮುಂದೆ ಕೆರಿಯರ್ ನಿರ್ಧಾರವಾಗುತ್ತದೆ. ೧೨ನೇ ತರಗತಿ ಬಳಿಕ ಯಾವ ಕೋರ್ಸ್ ಮಾಡಿದ್ರೆ ಬೆಸ್ಟ್ ಜಾಬ್ ನಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳು ಗೊಂದಲದಲ್ಲಿ ಇರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಇದೀಗ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ.

ಮಾರ್ಕೆಟ್ ನಲ್ಲಿ ಯಾವ ಜಾಬ್ ಗೆ ಇದೀಗ ಬೇಡಿಕೆ ಇದೆ ಎಂದು ತಿಳಿದು ನೀವು ಕೋರ್ಸ್ ಆಯ್ಕೆ ಮಾಡುವುದು ಉತ್ತಮ.ಇಲ್ಲಿ ಕೆರಿಯರ್ ಇಂಡಿಯಾ ಕೆಲವೊಂದು ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಿದೆ. ಅವುಗಳು ಯಾವುವು ಎಂದು ಮುಂದಕ್ಕೆ ಓದಿ.
ಕಂಪ್ಯೂಟರ್ ಸೈನ್ಸ್ ಮತ್ತು ಇಂಫೋರ್ಮೇಶನ್ ಸಿಸ್ಟಮ್:
ಕಂಪ್ಯೂಟರ್ ಸೈನ್ಸ್ ಮತ್ತು ಇಂಫೋರ್ಮೇಶನ್ ಸಿಸ್ಟಮ್ ಕೋರ್ಸ್ ಮಾಡಿದವರಿಗೆ ಹೆಚ್ಚಿನ ಉದ್ಯೋಗವಕಾಶವಿದೆ ಎಂದು ಸರ್ವೇ ಒಂದರಲ್ಲಿ ತಿಳಿದು ಬಂದಿದೆ. ೧೦ನೇ ತರಗತಿ ಬಳಿಕ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಮತ್ತು ಇಂಫೋರ್ಮೇಶನ್ ಸಿಸ್ಟಮ್ ಕೋರ್ಸ್ ಮಾಡಬಹುದು. ಕಂಪ್ಯೂಟರ್ ಸೈನ್ಸ್ ಸಬ್‌ಜೆಕ್ಟ್ ಇಂಜಿನೀಯರಿಂಗ್ ಸಬ್‌ಜೆಕ್ಟ್ ಗೆ ಸಂಬಂಧಿಸಿರುತ್ತದೆ.
ಬ್ಯುಸಿನೆಸ್ ಆಂಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್:
ಇದೀಗ ಜಾಬ್ ಮಾರ್ಕೆಟ್ ನಲ್ಲಿ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕೂಡಾ ಸಖತ್ ಫೇಮಸ್. ಯಾರೂ ಈ ಸಬ್‌ಜೆಕ್ಟ್ ನಲ್ಲಿ ಸ್ನಾತಕೋತ್ತರ ಪದವಿ ಮಾಡಿರುತ್ತಾರೋ, ಅವರು ಉತ್ತಮ ವೇತನದ ಜಾಬ್ ಪಡೆದುಕೊಳ್ಳಬಹುದು.
ನಿಮಗೂ ಈ ಕೋರ್ಸ್ ಮಾಡಬೇಕು ಎಂದಿದ್ದರೆ 12ನೇ ತರಗತಿ ಆದ ಕೂಡಲೇ ಬಿಬಿಎ ಕೋರ್ಸ್ ಪ್ರಾರಂಭಿಸಬಹುದು. ಅಷ್ಟೇ ಅಲ್ಲ ಎಂಬಿಎ ಕೋರ್ಸ್ ಕೂಡಾ ಮಾಡಬಹುದು.
ಅಕೌಂಟೆಸಿ ಮತ್ತು ಫೈನಾನ್ಸ್:
ಅಕೌಂಟೆಸಿ ಮತ್ತು ಫೈನಾನ್ಸ್ ವಿಷಯದಲ್ಲಿ ಪದವಿ ಗಳಿಸಿದವರು, ಸರ್ಕಾರಿ ಹಾಗೂ ಖಾಸಾಗಿ ಸೆಕ್ಟರ್ ಗಳಲ್ಲಿ ಫೈನಾಂಶಿಯಲ್ ಅಕೌಂಟ್ ನಿರ್ವಹಣೆ ಹುದ್ದೆಗೆ ಟ್ರೈ ಮಾಡಬಹುದು. ಅಕೌಂಟೆಸಿ ಮತ್ತು ಫೈನಾನ್ಸ್ ಸಬ್‌ಜೆಕ್ಟ್ ಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕೆರಿಯರ್ ಪ್ರಾರಂಭಿಸಬಹುದು. ಅಷ್ಟೇ ಅಲ್ಲ ಸಬ್‌ಜೆಕ್ಟ್ ನಲ್ಲಿ ಸ್ನಾತಕೋತ್ತರ ಪದವಿ ಕೂಡಾ ಪಡೆಯಬಹುದು.
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನೀಯರಿಂಗ್:
ಇಂಜಿನೀಯರಿಂಗ್ ಕೋರ್ಸ್ ಗಳಾದ ಕಂಪ್ಯೂಟರ್ ಸೈನ್ಸ್ ಮತ್ತು ಇಂಫೋರ್ಮೇಶನ್ ಟೆಕ್ನಾಲಾಜಿ ಮಾತ್ರವಲ್ಲದೇ ವಿದ್ಯಾರ್ಥಿಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಇಂಜಿನೀಯರಿಂಗ್ ಕೋರ್ಸ್ ಕೂಡಾ ಮಾಡಬಹುದು. ಈ ಕೋರ್ಸ್ ಮಾಡಿದವರಿಗೂ ಉತ್ತಮ ಉದ್ಯೋಗವಕಾಶವಿರುತ್ತದೆ. ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ ಪ್ರವೇಶಾತಿ ಪರೀಕ್ಷೆ ಮೂಲಕ ಅಭ್ಯರ್ಥಿಗಳು ಈ ಕೋರ್ಸ್ ಮಾಡಬಹುದು. ಹಲವಾರು ಇಂಡಸ್ಟ್ರಿಗಳಲ್ಲಿ ಈ ಕೋರ್ಸ್ ಮಾಡಿದವರಿಗೆ ಹೆಚ್ಚಿನ ಉದ್ಯೋಗವಕಾಶವಿರುವುದು ನೀವು ನೋಡಿರಬಹುದು.
ಎಕನಾಮಿಕ್ಸ್ ಮತ್ತು ಎಕಾನಾಮೆಟ್ರಿಕ್ಸ್:
ಎಕನಾಮಿಕ್ಸ್ ಎಂಬುವುದು ಸೋಶಲ್ ಸೈನ್ಸ್ ಗ್ರೂಪ್ ನ ಒಂದು ಭಾಗ. ೧೨ನೇ ತರಗತಿ ಬಳಿಕ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಬಹುದು. ಸೇವೆ ಮತ್ತು ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಗಳಲ್ಲಿ ಈ ಕೋರ್ಸ್ ಮಾಡಿದವರಿಗೆ ಹೆಚ್ಚಿನ ಉದ್ಯೋಗವಕಾಶವಿದೆ ಎಂದು ಸರ್ವೇವೊಂದರಲ್ಲಿ ತಿಳಿದುಬಂದಿದೆ.


Click it and Unblock the Notifications











