Top Engineering Colleges In Bangalore: ಬೆಂಗಳೂರು ನಗರದಲ್ಲಿ ಇರುವ ಫೇಮಸ್ ಇಂಜಿನೀಯರಿಂಗ್ ಕಾಲೇಜುಗಳು

12ನೇ ತರಗತಿ ನಂತರ ಹೆಚ್ಚು ಮಂದಿ ಆಯ್ಕೆ ಮಾಡುವುದು ಇಂಜಿನೀಯರಿಂಗ್ ಕೋರ್ಸ್. ದೇಶದಾದ್ಯಂತ ಸುಮಾರು ೪೦೦೦ ಇಂಜಿನೀಯರಿಂಗ್ ಕಾಲೇಜುಗಳಿವೆ.

By Kavya

12ನೇ ತರಗತಿ ನಂತರ ಹೆಚ್ಚು ಮಂದಿ ಆಯ್ಕೆ ಮಾಡುವುದು ಇಂಜಿನೀಯರಿಂಗ್ ಕೋರ್ಸ್. ದೇಶದಾದ್ಯಂತ ಸುಮಾರು 4000 ಇಂಜಿನೀಯರಿಂಗ್ ಕಾಲೇಜುಗಳಿವೆ. ಅಷ್ಟೇ ಅಲ್ಲ ನಮ್ಮ ಗಾರ್ಡನ್ ಸಿಟಿಯಲ್ಲೂ ಇಂಜಿನೀಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚೇ ಇದೆ. ಇನ್ನು ಬೆಂಗಳೂರನ್ನ ಸಿಲಿಕಾನ್ ಸಿಟಿ ಎಂತಲೂ ಕರೆಯುತ್ತಾರೆ. ಇಲ್ಲಿ 100 ಕ್ಕೂ ಅಧಿಕ ಎಮ್‌ಎನ್‌ಸಿ ಕಂಪನಿಗಳಿಗೆ ಬೆಂಗಳೂರು ಮನೆಯಾಗಿದೆ.

ಬೆಂಗಳೂರು ನಗರದಲ್ಲಿ ಇರುವ ಫೇಮಸ್ ಇಂಜಿನೀಯರಿಂಗ್ ಕಾಲೇಜುಗಳು

ನಗರದ ಫೇಮಸ್ ಇಂಜಿನೀಯರಿಂಗ್ ಕಾಲೇಜುಗಳ ಮಾಹಿತಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ. ಮುಂದಕ್ಕೆ ಓದಿ.

<strong>ಭಾರತದಲ್ಲಿರುವ ಟಾಪ್ 10 BEd ಕಾಲೇಜ್‌ಗಳು</strong>ಭಾರತದಲ್ಲಿರುವ ಟಾಪ್ 10 BEd ಕಾಲೇಜ್‌ಗಳು

ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಫೋರ್ಮೇಶನ್ ಟೆಕ್ನಾಲಾಜಿ:

ಹೊಸೂರು ರಸ್ತೆಯಲ್ಲಿ ಈ ಶಿಕ್ಷಣ ಸಂಸ್ಥೆ ಇದ್ದು, ಇದು 1999 ರಲ್ಲಿ ಸ್ಥಾಪಿಸಲಾಗಿದೆ. ಯುಜಿಸಿ ಯಿಂದ ಡೀಮ್ಡ್ ಯೂನಿವರ್ಸಿಟಿ ಎಂದು ಗುರುತಿಸಲ್ಪಟ್ಟಿದೆ. ಇಲ್ಲಿ ಇಂಜಿನೀಯರಿಂಗ್ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳು ಇವೆ.

ಆರ್ ವಿ ಕಾಲೇಜು ಆಫ್ ಇಂಜಿನೀಯರಿಂಗ್:

ಇದು ಖಾಸಾಗಿ ಶಿಕ್ಷಣ ಸಂಸ್ಥೆಯಾಗಿದೆ. 1963ರಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪಿತವಾಗಿದೆ. ನ್ಯಾಕ್ ಸಂಸ್ಥೆಯಿಂದ ಈ ಶಿಕ್ಷಣ ಸಂಸ್ಥೆಗೆ ಬಿ ಗ್ರೇಡ್ ಕೂಡಾ ಸಿಕ್ಕಿರುತ್ತದೆ. ಬಿ ಸೇರಿದಂತೆ ಇಂಜಿನೀಯರಿಂಗ್‌ಗೆ ಸಂಬಂಧಪಟ್ಟ ಹಲವಾರು ಕೋರ್ಸ್ ಗಳು ಲಭ್ಯವಿದೆ.

ಎಂಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ:

ಇದು ಕೂಡಾ ಖಾಸಾಗಿ ಶಿಕ್ಷಣ ಸಂಸ್ಥೆಯಾಗಿದೆ. ಈ ಆಟೋನೋಮಸ್ ಇನ್‌ಸ್ಟಿಟ್ಯೂಟ್ ಎಂಎಸ್ಆರ್ ನಗರದಲ್ಲಿ 1962 ರಂದು ಸ್ಥಾಪನೆ ಗೊಂಡಿದೆ. ನ್ಯಾಕ್ ಸಂಸ್ಥೆಯಿಂದ ಎ ಗ್ರೇಡ್ ಈ ಶಿಕ್ಷಣ ಸಂಸ್ಥೆಗೆ ನೀಡಲಾಗಿದೆ.

ಟಾಪ್ 10 ಭಾರತದ ವಿಜ್ಞಾನ ಕಾಲೇಜುಗಳು ಟಾಪ್ 10 ಭಾರತದ ವಿಜ್ಞಾನ ಕಾಲೇಜುಗಳು

ಬಿಎಂಎಸ್ ಕಾಲೇಜು ಆಫ್ ಇಂಜಿನೀಯರಿಂಗ್:

1946 ರಂದು ಬಸವನಗುಡಿ ಎಂಬಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡಿದೆ. ನ್ಯಾಕ್ ಸಂಸ್ಥೆಯಿಂದ ಎ ಗ್ರೇಡ್ ಈ ಶಿಕ್ಷಣ ಸಂಸ್ಥೆಗೆ ನೀಡಲಾಗಿದೆ. ಹಲವಾರು ಇಂಜಿನೀಯರಿಂಗ್ ಕೋರ್ಸ್ ಗಳ ಜತೆ ಎಂಬಿಎ, ಪಿಜಿಡಿಎಂ ಕೋರ್ಸ್ ಗಳು ಕೂಡಾ ಇಲ್ಲಿವೆ. ಇಲ್ಲಿ ಬಿಇ ಇನ್ ಬಯೋಟೆಕ್ನಾಲಾಜಿ ಫೇಮಸ್ ಕೋರ್ಸ್ ಆಗಿದೆ.

ಪಿಇಎಸ್ ಯೂನಿವರ್ಸಿಟಿ:

ಬೆಂಗಳೂರಿನಲ್ಲಿ ಇರುವ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇದು ಕೂಡಾ ಒಂದಾಗಿದೆ. ಬನಶಂಕರಿ ಎಂಬಲ್ಲಿ 1972 ರಂದು ಸ್ಥಾಪಿತವಾಗಿರುವ ಈ ಖಾಸಾಗಿ ಶಿಕ್ಷಣ ಸಂಸ್ಥೆಯು ಅಸೋಸಿಯೇಶನ್ ಆಫ್ ಇಂಡಿಯನ್ ಯೂನಿವರ್ಸಿಟಿಸ್ ನ ಸದಸ್ಯವಾಗಿದೆ. ಇಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಸುಮಾರು 35 ಕೋರ್ಸ್ ಗಳನ್ನ ನೀವು ನೋಡಬಹುದು.

ನ್ಯೂ ಹಾರಿಜಾನ್ ಕಾಲೇಜು ಆಫ್ ಇಂಜಿನೀಯರಿಂಗ್:

ಈ ಆಟೋನಾಮಸ್ ಶಿಕ್ಷಣ ಸಂಸ್ಥೆಯು2001 ರಲ್ಲಿ ಮಾರತಹಳ್ಳಿಯಲ್ಲಿ ಸ್ಥಾಪನೆಗೊಂಡಿತ್ತು. ಇಲ್ಲಿ ಇಂಜಿನಿಯರಿಂಗ್ ಸಂಬಂಧಪಟ್ಟ ಪದವಿ ಕೋರ್ಸ್ ಗಳನ್ನ ನೀಡಲಾಗುತ್ತದೆ.

ನೀವು ಮಾದರಿ ಶಿಕ್ಷಕರಾಗಬೇಕೇ... ದೇಶದ ಟಾಪ್ 10 ಎಂಎಡ್ ಕಾಲೇಜುಗಳ ಲಿಸ್ಟ್!ನೀವು ಮಾದರಿ ಶಿಕ್ಷಕರಾಗಬೇಕೇ... ದೇಶದ ಟಾಪ್ 10 ಎಂಎಡ್ ಕಾಲೇಜುಗಳ ಲಿಸ್ಟ್!

ಎನ್‌ಐಟಿಟಿಇ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ:

ಮಲ್ಟಿಡಿಸಿಪ್ಲೀನರಿ ಶಿಕ್ಷಣ ಸಂಸ್ಥೆ ಎಂದೇ ಎನ್‌ಐಟಿಟಿಇ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಸಂಸ್ಥೆಯು ಫೇಮಸ್.2001ರಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡಿದೆ. ನ್ಯಾಕ್ ಸಂಸ್ಥೆಯಿಂದ ಎ ಗ್ರೇಡ್ ಪಡೆದುಕೊಂಡಿದೆ ಈ ಶಿಕ್ಷಣ ಸಂಸ್ಥೆ.

ಎಎಂಸಿ ಕಾಲೇಜು ಆಫ್ ಇಂಜಿನೀಯರಿಂಗ್:

ಬ್ನನೇರುಘಟ್ಟದಲ್ಲಿ 1995ರಂದು ಈ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡಿದೆ. ಸಿವಿಲ್, ಮ್ಯಾಕಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಅಪ್ಲಿಕೇಶನ್ ಮುಂಥಾದ ವಿಷಯದಲ್ಲಿ ಇಲ್ಲಿ ಪದವಿ ಮಟ್ಟದ ಕೋರ್ಸ್ ಗಳನ್ನ ನೀಡಲಾಗುತ್ತದೆ. ಅಷ್ಟೇ ಅಲ್ಲ ಸ್ನಾತಕೋತ್ತರ ಕೋರ್ಸ್ ಗಳು ಕೂಡಾ ಇಲ್ಲಿವೆ

ಬಿಎನ್ ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ:

2001 ರಲ್ಲಿ ಈ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗಿದೆ. ಇಲ್ಲೂ ಕೂಡಾ ಇಂಜಿನೀಯರಿಂಗ್ ಸಂಬಂಧಪಟ್ಟಂತೆ ಹಲವಾರು ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ ಗಳು ಕೂಡಾ ಇವೆ.

ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜ್ಯುಕೇಶನ್:

ಬೆಂಗಳೂರಿನ ಉತ್ತರಹಳ್ಳಿ ಪ್ರಮುಖ ರಸ್ತೆ ಬಳಿ 1997ರಂದು ಈ ಶಿಕ್ಷಣ ಸಂಸ್ಥೆ ಸ್ಥಾಪನೆ ಗೊಂಡಿದೆ. ಈ ಸಂಸ್ಥೆಯೂ ಕೂಡಾ ನಗರದ ಫೇಮಸ್ ಇಂಜಿನೀಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ

ಕೆಲಸದ ಒತ್ತಡ ಮಧ್ಯೆ ಹೀಗೆಲ್ಲಾ ಮಾಡಿ... ರಿಲಾಕ್ಸ್ ಆಗುತ್ತೆ!ಕೆಲಸದ ಒತ್ತಡ ಮಧ್ಯೆ ಹೀಗೆಲ್ಲಾ ಮಾಡಿ... ರಿಲಾಕ್ಸ್ ಆಗುತ್ತೆ!

For Quick Alerts
ALLOW NOTIFICATIONS  
For Daily Alerts

English summary
Engineering continues to be the most-opted course by the class 12 graduates. Over 4,000 engineering colleges are spread across the country and a good number of them are located in the Garden City of India, Bangalore. The city, which is also called the Silicon Valley of India, is home to hundreds of MNCs in the software industry. Pursuing engineering in the city will lead to better campus placements with attractive pay perks
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X