ಇಸ್ರೋ ಕ್ವಿಜ್ ನಲ್ಲಿ ಪಾಲ್ಗೊಳ್ಳಿ : ಪ್ರಧಾನಿ ನರೇಂದ್ರ ಮೋದಿ ಜೊತೆ ಚಂದ್ರಯಾನ-2 ಲೈವ್ ವೀಕ್ಷಣೆಗೆ ಅವಕಾಶ ಪಡೆಯಿರಿ


ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಬಗೆಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಸದುದ್ದೇಶದಿಂದ ಇಸ್ರೋ ಆಗಸ್ಟ್ 10ರಿಂದ 20ರವರೆಗೆ ದೇಶಾದ್ಯಂತ ಆನ್‌ಲೈನ್‌ ಕ್ವಿಜ್‌ ಏರ್ಪಡಿಸಲು ಮುಂದಾಗಿದೆ. ಕ್ವಿಜ್‌ನಲ್ಲಿ ಅಂತಿಮವಾಗಿ ವಿಜೇತರಾಗುವ ವಿದ್ಯಾರ್ಥಿಗಳಿಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕುಳಿತು ಚಂದ್ರಯಾನ-2 ನೌಕೆಯು ಚಂದ್ರನ ಮೇಲೆ ಇಳಿಯುವ ಲೈವ್‌ ದೃಶ್ಯಗಳನ್ನು ನೋಡುವ ಅವಕಾಶ ಸಿಗಲಿದೆ.

ವಿದ್ಯಾರ್ಥಿಯು ಬಾಹ್ಯಾಕಾಶ ಕುರಿತ 20 ಪ್ರಶ್ನೆಗಳಿಗೆ 5 ನಿಮಿಷಗಳಲ್ಲಿ ಉತ್ತರಿಸಬೇಕಿರುತ್ತದೆ. ಕ್ವಿಜ್ ಕಾರ್ಯಕ್ರಮಕ್ಕೆ 8 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಮಾತ್ರ ಸ್ಪರ್ಧಿಸುವ ಅವಕಾಶವನ್ನು ನೀಡೆಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಯಾರು ಸರಿಯಾದ ಉತ್ತರಗಳನ್ನು ನೀಡುತ್ತಾರೋ ಅಂತಹ ವಿದ್ಯಾರ್ಥಿಯನ್ನು ವಿಜೇತರೆಂದು ಘೋಷಿಸಲಾಗುವುದು. ಇಬ್ಬರಿಗಿಂತಲೂ ಹೆಚ್ಚು ವಿದ್ಯಾರ್ಥಿಗಳು ಒಂದೇ ಸಮಯಕ್ಕೆ ಸರಿಯಾದ ಉತ್ತರ ಹೇಳಿದ ಪಕ್ಷದಲ್ಲಿ ಲಾಟರಿ ಮೂಲಕ ಇಬ್ಬರನ್ನು ಆಯ್ಕೆ ಮಾಡಲಾಗುವುದು.

ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್‌ 7ರಂದು ಚಂದ್ರಯಾನ-2 ನೌಕೆಯು ಚಂದ್ರನ ನಿರ್ಧಿಷ್ಟ ಭಾಗದ ಮೇಲೆ ಇಳಿಯಲಿದ್ದು, ಬೆಂಗಳೂರಿನ ಇಸ್ರೊ ಪ್ರಧಾನ ಕಚೇರಿಯಲ್ಲಿ ಅದರ ಲೈವ್‌ ಶೋ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಕ್ವಿಜ್‌ ಕುರಿತ ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಅಧಿಕೃತ ವೆಬ್‌ಸೈಟ್‌ https://quiz.mygov.in/ ಗೆ ಭೇಟಿ ನೀಡಬಹುದು.

Have a great day!
Read more...

English Summary

Indian space research organisation conducting quiz for students could get an opportunity to sit with modi to watch chandrayana 2 moon landing