ವೈದ್ಯಕೀಯ ಪ್ರವೇಶ ಪರೀಕ್ಷೆ 2019: ದಿನಾಂಕಗಳು ಹೀಗಿವೆ!


ಮೆಡಿಸನ್ ಎಂಬುವುದು ಒಂದು ಗೌರವಾನ್ವಿತ ಹುದ್ದೆ. ಈ ಪ್ರೊಫೆಶನ್ ಗೆ ಹೆಚ್ಚಿನ ಪದವಿ ಹಾಗೂ ಗೌರವ ಸಮಾಜದಲ್ಲಿ ಸಿಗುತ್ತದೆ. ಅದೇ ಕಾರಣಕ್ಕೆ ಪ್ರತೀ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ.

ಕಳೆದ ಹಲವಾರು ವರ್ಷಗಳಲ್ಲಿ ಈ ಮೆಡಿಕಲ್ ಎಂಟ್ರೇಂಸ್ ಪರೀಕ್ಷೆಯಲ್ಲಿ ಹಲವಾರು ಬದಲಾವಣೆ ಮಾಡಲಾಗಿದೆ. ಒಂದು ದೊಡ್ಡ ಬದಲಾವಣೆ ಏನಂದ್ರೆ, ಸ್ಟೇಟ್ ಲೆವೆಲ್ ಮೆಡಿಕಲ್ ಎಂಟ್ರೇಂಸ್ ಪರೀಕ್ಷೆಯನ್ನ ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಸ್ ಟೆಸ್ಟ್ ಜತೆ ಸೇರಿಸಿರುವುದು. ಹಾಗಾಗಿ ಹಲವಾರು ವಿದ್ಯಾರ್ಥಿಗಳು ಈ ಬದಲಾವಣೆಯಿಂದ ಸ್ವಲ್ಪ ವಿಚಲಿತರಾಗಿದ್ದು, ಈಗಾಗಲೇ ನ್ಯಾಷನಲ್ ಲೆವೆಲ್ ಎಂಟ್ರೇಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ನೀಟ್ -ಯುಜಿ ಪರೀಕ್ಷೆಯು ಎಲ್ಲಾ ಮೆಡಿಕಲ್ ಕೋರ್ಸ್ ಗೆ ಅಗತ್ಯವಾಗಿದೆ. ಅಷ್ಟೇ ಅಲ್ಲ ದೇಶದಲ್ಲಿ ಮೆಡಿಸನ್ ಗೆ ಸಂಬಂಧಪಟ್ಟಂತೆ ಕೆಲವೊಂದು ಪ್ರವೇಶ ಪರೀಕ್ಷೆಗಳಿದ್ದು, ಪ್ರತಿಯೊಂದು ಪರೀಕ್ಷೆಯು ತನ್ನದೇ ಆದ ಘನತೆ ಹೊಂದಿದೆ.

ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಸ್ ಟೆಸ್ಟ್ ಅಂಡರ್ ಗ್ರಾಜ್ಯುಯೆಟ್ (ನೀಟ್ ಯುಜಿ)

ದಿ ನೀಟ್ ಯುಜಿ ಪರೀಕ್ಷೆಯನ್ನ ಇದೀಗ ಮೊದಲ ಬಾರಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಆಯೋಜಿಸಲಿದೆ. ದೇಶದಾದ್ಯಂತ ಮೆಡಿಕಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ ಗಳಿಗಾಗಿ ಈ ಪರೀಕ್ಷೆ ಮಾಡಲಾಗುತ್ತದೆ.

ನೀಟ್ 2019 ಪರೀಕ್ಷೆ ದಿನಾಂಕ:
  • ಪರೀಕ್ಷಾ ಮಾದರಿ: ಲಿಖಿತ ಪರೀಕ್ಷೆ
  • ರಿಜಿಸ್ಟ್ರೇಶನ್ ದಿನಾಂಕ: ನವಂಬರ್ 1 ರಿಂದ 30, 2018
  • ಪ್ರವೇಶ ಪತ್ರ ಡೌನ್‌ಲೋಡ್ ದಿನಾಂಕ: ಎಪ್ರಿಲ್ 15,
  • ಪರೀಕ್ಷೆ ದಿನಾಂಕ: ಮೇ 5,2019
  • ಫಲಿತಾಂಶ ದಿನಾಂಕ: ಜೂನ್ 5, 2019
ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ಸ್ ಆಫ್ ಮೆಡಿಕಲ್ ಸೈನ್ಸಸ್:

ಎಐಐಎಂಎಸ್ ಎಂಬುವುದು, ಆಟೋನಾಮಸ್ ಪಬ್ಲಿಕ್ ಮೆಡಿಕಲ್ ಕಾಲೇಜುಗಳ ಸಮೂಹವಾಗಿದೆ. ಮೆಡಿಸನ್ ವಿಷಯದಲ್ಲಿ ಹೈಯರ್ ಎಜ್ಯುಕೇಶನ್ ಮಾಡುವವರು ಈ ಪರೀಕ್ಷೆ ಬರೆಯಬಹುದಾಗಿದೆ. ದೇಶದಾದ್ಯಂತ ಇರುವ ಎಐಐಎಂಎಸ್ ಕಾಲೇಜಿನಲ್ಲಿ ಸೀಟು ಪಡೆಯಬೇಕಾದ್ರೆ ನೀವು ಈ ಪರೀಕ್ಷೆಯನ್ನ ಬರೆಯಲೇ ಬೇಕು.

ಎಐಐಎಂಎಸ್ 2019 ಪ್ರವೇಶ

ಎಐಐಎಂಎಸ್ ಅಲ್ಲಿ ಸೀಟು ಪಡೆಯಬೇಕು ಎಂದಾದ್ರೆ 12ನೇ ತರಗತಿಯಲ್ಲಿ ಬಯಾಲಾಜಿ, ಫಿಸಿಕ್ಸ್ಮ ಕೆಮೆಸ್ಟ್ರಿ ಸಬ್‌ಜೆಕ್ಟ್ ನಲ್ಲಿ ಕನಿಷ್ಟ 60 ಅಂಕ ಗಳಿಸಿರಬೇಕು. ನವದೆಹಲಿ, ಪಾಟ್ನಾ, ಜೋಧ್ ಪುರ್, ಭುಬನೇಶ್ವರ್, ರಿಷಿಕೇಶ್, ರಾಯ್‌ಪುರ್, ಗುಂಟೂರು ಮತ್ತು ನಾಗ್ಪುರ್ ಗಳಲ್ಲಿ ಎಐಐಎಂಎಸ್ ಶಿಕ್ಷಣ ಸಂಸ್ಥೆಗಳಿವೆ.

ಎಐಐಎಂಎಸ್ ಎಂಬಿಬಿಎಸ್ 2019 ಪರೀಕ್ಷೆ ದಿನಾಂಕ

ಪರೀಕ್ಷೆ ದಿನಾಂಕ: ಮೇ.25, 26, 2019( ಶನಿವಾರ ಮತ್ತು ಆದಿತ್ಯವಾರ)

ಫಲಿತಾಂಶ ದಿನಾಂಕ: ಜೂನ್ 12, 2019 (ಬುಧವಾರ)

ಎಐಐಎಂಎಸ್ ಎಂಬಿಬಿಎಸ್ 2020-21 ಪರೀಕ್ಷೆ ದಿನಾಂಕ

ಪರೀಕ್ಷೆ ದಿನಾಂಕ: ಮೇ.30, 31, 2019( ಶನಿವಾರ ಮತ್ತು ಆದಿತ್ಯವಾರ)

ಫಲಿತಾಂಶ ದಿನಾಂಕ: ಜೂನ್ 16, 2020 (ಬುಧವಾರ)

ಜವಹಾರ್ ಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರ್ಯಾಜ್ಯುಯೆಟ್ ಮೆಡಿಕಲ್ ಎಜ್ಯುಕೇಶನ್ ಮತ್ತು ರಿಸರ್ಚ್:

ನೀಟ್, ಎಐಐಎಂಎಸ್ ಪರೀಕ್ಷೆ ಬಳಿಕ ಮೂರನೇ ಸ್ಥಾನದಲ್ಲಿರುವ ಪರೀಕ್ಷೆ ಎಂದ್ರೆ ಜೆಐಪಿಎಂಇಆರ್ . ದೇಶದ ಲೀಡಿಂಗ್ ಪರೀಕ್ಷೆಗಳಲ್ಲಿ ಇದು ಕೂಡಾ ಒಂದಾಗಿದೆ. ಪಾಂಡಿಚೇರಿಯಲ್ಲಿ ಇರುವ ಈ ಸಂಸ್ಥೆಯಲ್ಲಿ ಅಡ್ಮಿಶನ್ ಆಗಬೇಕೆಂದ್ರೆ ಪ್ರತ್ಯೇಕ ಪ್ರವೇಶ ಪರೀಕ್ಷೆ ಇದೆ. ಇಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಸಂಬಂಧಪಟ್ಟ ಕೋರ್ಸ್ ಗಳನ್ನ ನೀಡಲಾಗುತ್ತದೆ.

ಜೆಐಪಿಎಂಇಆರ್ ಪರೀಕ್ಷೆ ದಿನಾಂಕ:

  • ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆ ಆರಂಭ: ಮಾರ್ಚ್ 6 ರಿಂದ ಎಪ್ರಿಲ್ 12, 2019
  • ಪರೀಕ್ಷೆ ದಿನಾಂಕ: ಜೂನ್ 2, 2019
  • ಫಲಿತಾಂಶ ದಿನಾಂಕ: ಜೂನ್ ಮೂರನೇ ವಾರ

Read More About: career jobs exams tips

Have a great day!
Read more...

English Summary

Medicine is not only a prestigious profession but also a booming and rewarding one. This profession even enjoys the highest degree of respect in the society. For this reason, annually, over 13 lakh class 12 graduates write different medical entrance examinations.