ಯಶಸ್ವೀ ವ್ಯಕ್ತಿಗಳ 8 ಯಶಸ್ಸಿನ ಮಂತ್ರ: ಫಾಲೋ ಮಾಡಿದ್ರೆ ಖಂಡಿತಾ ಅವರಂತೆಯೇ ಸಕ್ಸಸ್ ಆಗ್ತೀರಾ

ನಾವು ಒಬ್ಬರಿಗಿಂತ ಒಬ್ಬರು ವಿಭಿನ್ನರಾಗಿದ್ದು, ನಮ್ಮ ಗುರಿ, ಉದ್ದೇಶಗಳು ಕೂಡಾ ವಿಭಿನ್ನವಾಗಿಯೇ ಇರುತ್ತದೆ. ಇನ್ನು ಜೀವನದಲ್ಲಿ ಮುಂದೆ ಬರಬೇಕೆಂಬ ಹಂಬಲದಿಂದ ಪ್ರತಿಯೊಬ್ಬರೂ ಕೂಡಾ ತಮ್ಮ ಜೀವನದಲ್ಲಿ ವಿಶೇಷವಾದ ಗುರಿಯನ್ನ ಇಟ್ಟುಕೊಂಡಿರುತ್ತಾರೆ.


ನಾವು ಒಬ್ಬರಿಗಿಂತ ಒಬ್ಬರು ವಿಭಿನ್ನರಾಗಿದ್ದು, ನಮ್ಮ ಗುರಿ, ಉದ್ದೇಶಗಳು ಕೂಡಾ ವಿಭಿನ್ನವಾಗಿಯೇ ಇರುತ್ತದೆ. ಇನ್ನು ಜೀವನದಲ್ಲಿ ಮುಂದೆ ಬರಬೇಕೆಂಬ ಹಂಬಲದಿಂದ ಪ್ರತಿಯೊಬ್ಬರೂ ಕೂಡಾ ತಮ್ಮ ಜೀವನದಲ್ಲಿ ವಿಶೇಷವಾದ ಗುರಿಯನ್ನ ಇಟ್ಟುಕೊಂಡಿರುತ್ತಾರೆ. ಬಂಗ್ಲೇ ಯಂತಹ ಮನೆ, ಐಷರಾಮಿ ಜೀವನ ಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ.

Advertisement

ಕನಸು ಕಾಣುವುದು ಒಂದು ವಿಚಾರವಾದ್ರೆ ಹಾರ್ಡ್ ವರ್ಕ್ ಮೂಲಕ ಅದನ್ನ ನನಸು ಮಾಡಿಕೊಳ್ಳುವುದು ಮತ್ತೊಂದು ವಿಚಾರ. ಇನ್ನು ಉದ್ಯಮದಲ್ಲಿ ಸಕ್ಸಸ್ ಆಗಬೇಕಾದ್ರೆ ಅಂತಹ ಸಂದರ್ಭದಲ್ಲಿ ನಾವು ಏನು ಮಾಡಬೇಕು ಏನು ಮಾಡಬಾರದು ಎಂಬ ಸಂಧಿಗ್ಧ ಪರಿಸ್ಥಿತಿ ನಮ್ಮ ಮುಂದೆ ನಿರ್ಮಾಣವಾಗುತ್ತದೆ. ಬನ್ನಿ ಇದೀಗ ನಿಮ್ಮ ಮುಂದೆ ಫೇಮಸ್ ಶೀಮಂತ ಉದ್ಯಮಿಯೊಬ್ಬರು ಕೆಲವೊಂದು ಟಿಪ್ಸ್ ನೀಡುತ್ತಿದ್ದಾರೆ. ಮುಂದಕ್ಕೆ ಓದಿ

Advertisement

ಹೌದು ನಾವು ಇದೀಗ ಮಾತನಾಡುತ್ತಿರುವುದು ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಉದ್ಯಮಿ ಬಿಲ್‌ಗೇಟ್ಸ್ ಬಗ್ಗೆ. ಜಗತ್ತಿನ ಅತೀ ದೊಡ್ಡ ಸಾಫ್ಟ್‌ವೇರ್ ಕಂಪನಿ ಮೈಕ್ರೋಸಾಫ್ಟ್‌ ಸ್ಥಾಪಕ ಇವರು. ಹಲವಾರು ವರ್ಷಗಳಿಂದಲೂ ಇವರು ಶ್ರೀಮಂತಿಕೆಯಲ್ಲಿ ತಮ್ಮ ಸ್ಥಾನವನ್ನ ಹಾಗೆಯೇ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಇದೇ ಕ್ಷೇತ್ರದಲ್ಲಿ ಅದೆಷ್ಟೋ ಶ್ರೀಮಂತ ಉದ್ಯಮಿಗಳು ಬಂದು ಹೋದರೂ ಇವರನ್ನ ಮಾತ್ರ ಬೀಟ್ ಮಾಡಲು ಆಗಲಿಲ್ಲ. ಯಶಸ್ಸಿನ ಉತ್ತುಂಗದಲ್ಲಿ ಮಿಂಚುತ್ತಿರುವ ಬಿಲ್‌ಗೇಟ್ಸ್ ಹಾಗೂ ಅವರಂತೆಯೇ ಇನ್ನಿತ್ತರ ಯಶಸ್ವೀ ಉದ್ಯಮಿಗಳ ಯಶಸ್ಸಿನ ಮಂತ್ರ ನಿಮ್ಮ ಮುಂದೆ.

ಮಂತ್ರ 1

ಯಶಸ್ಸನ್ನು ಆಚರಿಸುವುದು (ಸೆಲೆಬ್ರೇಟ್) ಮಾಡುವುದು ಒಳ್ಳೆಯದು, ಆದ್ರೆ ಆ ಆಚರಣೆಗಿಂತ ಫೈಲ್ಯುಯರ್ ನಿಂದ ಕಲಿತುಕೊಳ್ಳುವುದು ಅದಕ್ಕಿಂತಲೂ ಮುಖ್ಯ

ಮಂತ್ರ 2

ಗೂಗಲ್ , ಆಪಲ್ , ಫ್ರೀ ಸಾಫ್ಟ್‌ವೇರ್ ಸೇರಿದಂತೆ ಅದೆಷ್ಟೋ ಪ್ರತಿಷ್ಟಿತ ಸಂಸ್ಥೆಗಳು ನಮಗೆ ಉತ್ತಮ ಕಾಂಪಿಟೀಟರ್ಸ್ ಆಗಿದ್ದಾರೆ. ಹಾಗಾಗಿ ನಾವು ಯಾವಾಗಲೂ ಎಚ್ಚರಿಕೆಯಿಂದ ಕ್ರೀಯಾ ಶೀಲರಾಗಿ ಇರುತ್ತೇವೆ. ಸ್ಪರ್ಧೆ ಏರ್ಪಟ್ಟಾಗ ಮಾತ್ರ ಕ್ರೀಯಾಶೀಲರಾಗಿ ಇರಲು ಸಾಧ್ಯ

Advertisement
ಮಂತ್ರ 3

ಏನಾದ್ರು ದೊಡ್ಡದಾಗಿ ಸಾಧನೆ ಮಾಡಬೇಕು ಎಂದಿದ್ದರೆ, ಕೆಲವೊಮ್ಮೆ ನೀವು ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಕೂಡಾ ತಯಾರಿರಬೇಕು.

Advertisement
ಮಂತ್ರ 4

ಇವರು ಬರೀ ನಮ್ಮಲ್ಲಿ ತಪ್ಪೇ ಹುಡುತ್ತಾರೆ ಎಂದು ಚಿಂತಿಸಬೇಡಿ ... ನಮ್ಮ ತಪ್ಪನ್ನೇ ಎತ್ತಿ ಹಿಡಿಯುವ ಸ್ನೇಹಿತರು ನಮ್ಮ ಜತೆ ಯಾವಾಗಲೂ ಇರಬೇಕು. ಅವರಿಂದ ಮಾತ್ರ ನಾವು ಇಂಪ್ರೂವ್ ಆಗಲು ಸಾಧ್ಯ

ಮಂತ್ರ 5

ನಾನು ಯಾವತ್ತೂ ಕ್ಲಾಸಿನ ಟಾಪರ್ ಆಗಿರಲ್ಲಿ, ಆದ್ರೆ ಇಂದು ಎಲ್ಲಾ ಟಾಪರ್ಸ್ ನನ್ನ ಉದ್ಯೋಗಿಗಳಾಗಿದ್ದಾರೆ

ಮಂತ್ರ 6

ತಪ್ಪು ಆಯಿತು ಎಂದು ಚಿಂತಿಸಬೇಡಿ ಬದಲಿಗೆ ಅದರಿಂದ ಏನು ಕಲಿತುಕೊಳ್ಳಬಹುದು ಎಂದು ಮೊದಲು ತಿಳಿದುಕೊಳ್ಳಿ

ಮಂತ್ರ 7:

ನಿಮ್ಮ ಆಲೋಚನೆಗಳನ್ನ ನಿಮ್ಮ ಟೀಂ ಜತೆ ಯಾವಾಗಲೂ ಶೇರ್ ಮಾಡಿ

ಮಂತ್ರ 8

ಮುಂದೆ ಆಗುವಂತದರ ಬಗ್ಗೆನೇ ಯೋಚಿಸಿ ಹಾಗಾಗಿ ಲುಕ್ ಫಾವರ್ಡ್

English Summary

All are want to become a successful as well as rich. But They Do not no how. today we have given article about the richest person in the world, and here they are gives some tips to make others rich and successful.