ಬಿ.ಇಡಿ. ಕೋರ್ಸ್ ಆನ್-ಲೈನ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಈ ಮುಂಚೆ ಅರ್ಜಿ ಸಲ್ಲಿಸಲು ದಿನಾಂಕ 20-11-2017 ರಂದು ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅರ್ಜಿಯನ್ನು ಸಲ್ಲಿಸಲು ದಿನಾಂಕ: 11-12-2017 ರವರೆಗೆ ವಿಸ್ತರಿಸಲಾಗಿದೆ.

2017-18 ನೇ ಸಾಲಿನ ಎರಡು ವರ್ಷಗಳ ಬಿ.ಇಡಿ. ಕೋರ್ಸ್ ಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ.

ಬಿ.ಇಡಿ. ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಎಲ್ಲಾ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಜಿ ಆಹ್ವಾನಿಸಲಾಗಿತ್ತು.

ಈ ಮುಂಚೆ ಅರ್ಜಿ ಸಲ್ಲಿಸಲು ದಿನಾಂಕ 20-11-2017 ರಂದು ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅರ್ಜಿಯನ್ನು ಸಲ್ಲಿಸಲು ದಿನಾಂಕ: 11-12-2017 ರವರೆಗೆ ವಿಸ್ತರಿಸಲಾಗಿದೆ.
ಶುಲ್ಕ ಪಾವತಿಸಲು ದಿನಾಂಕ: 13-12-2017 ರಂದು ಕೊನೆಯ ದಿನವಾಗಿರುತ್ತದೆ.

ಬಿ.ಇಡಿ. ಕೋರ್ಸ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಅರ್ಹತೆಗಳು

ಸರ್ಕಾರಿ ಸೀಟುಗಳಿಗೆ ಅಭ್ಯರ್ಥಿಯು ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಅಭ್ಯರ್ಥಿಯಾಗಿರಬೇಕು. 10+2+3 (ಎಸ್.ಎಸ್.ಎಲ್.ಸಿ + 2 ವರ್ಷದ ಪಿ.ಯು.ಸಿ + 3 ವರ್ಷದ ಪದವಿ) ಕ್ರಮದ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಯು.ಜಿ.ಸಿ. ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ನಡೆಸುವ ಪದವಿ/ ಸ್ನಾತಕೋತ್ತರ ಪದವಿ ಅಥವಾ ಯಾವುದೇ ತತ್ಸಮಾನ ವಿದ್ಯಾರ್ಹತೆಯ ಎಲ್ಲಾ ವರ್ಷಗಳಲ್ಲಿ / ಸೆಮಿಸ್ಟರ್‍ಗಳಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳು ಆಂತರಿಕ ಅಂಕಗಳು ಸೇರಿ ಸರಾಸರಿ ಕನಿಷ್ಠ ಶೇ. 45 ಅಂಕಗಳನ್ನು ಮತ್ತು ಇತರೆ ಅಭ್ಯರ್ಥಿಗಳು ಆಂತರಿಕ ಅಂಕಗಳು ಸೇರಿ ಸರಾಸರಿ ಕನಿಷ್ಠ ಶೇ. 50 ಅಂಕಗಳನ್ನು ಗಳಿಸಿರಬೇಕು.

ಇಂಜಿನಿಯರಿಂಗ್ ಪದವೀದರರು ಪದವಿಯಲ್ಲಿ ಗಣಿತ ಮತ್ತು ವಿಜ್ಞಾನವನ್ನು ಐಚ್ಚಿಕ ವಿಷಯವನ್ನಾಗಿ ವ್ಯಾಸಂಗ ಮಾಡಿ ಕನಿಷ್ಠ ಶೇ.55% ಅಂಕಗಳನ್ನು ಪಡೆದಿರಬೇಕು.

ವಿ.ಸೂ:- 2012ರ ಒಳಗಡೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (KSOU) ಪದವಿ/ಸ್ನಾತಕೋತ್ತರ ಪದವಿಗೆ ದಾಖಲಾದ ಅಭ್ಯರ್ಥಿಗಳು ಮಾತ್ರ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ

1 ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ, ಪ್ರವರ್ಗ-1 ರೂ. 120-00/-
2 ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಿದೆ.
3 ಇತರೆ ಅಭ್ಯರ್ಥಿಗಳು ರೂ.320-00/-

ಅಭ್ಯರ್ಥಿಗಳಿಂದ ಸ್ವೀಕೃತಿಯಾದ ಎಲ್ಲಾ ಆನ್‍ಲೈನ್ ಅರ್ಜಿಗಳನ್ನು ವಿಶೇಷಾಧಿಕಾರಿಗಳ ಕಛೇರಿಯಲ್ಲಿ ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ಅರ್ಜಿಗಳಲ್ಲಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಮೆರಿಟ್ ಮತ್ತು ಮೀಸಲಾತಿ ಮತ್ತು ಆದ್ಯತೆಯ ಅನ್ವಯ ಸಂಸ್ಥೆ ಹಂಚಿಕೆ ಸಹಿತ ಆಯ್ಕೆ ಪಟ್ಟಿ, ಅರ್ಹತಾ ಪಟ್ಟಿ ಮತ್ತು ತಿರಸ್ಕøತ ಪಟ್ಟಿ ಹಾಗೂ ಅಭ್ಯರ್ಥಿಗಳ ರ್ಯಾಂಕ್ ಪಟ್ಟಿಗಳನ್ನು ನಿಗದಿತ ದಿನಾಂಕದಂದು ಎಲ್ಲಾ ವ್ಯವಸ್ಥಾಪಕ ಕೇಂದ್ರಗಳಲ್ಲಿ ಹಾಗೂ ಇಲಾಖಾ ವೆಬ್‍ಸೈಟ್ www.schooleducation.kar.nic.in ರಲ್ಲಿ ಪ್ರಕಟಿಸಲಾಗುವುದು.

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ವೆಬ್‍ಸೈಟ್ ನಲ್ಲಿ "ONLINE APPLICATION FOR ADMISSION TO TWO YEAR B.Ed. COURSE FOR THE YEAR 2017-18" ಎಂಬುದನ್ನು ಕ್ಲಿಕ್ ಮಾಡಿದಾಗ ಭಿತ್ತರಿಸಲಾಗುವ "WEB HOME PAGE" ನಲ್ಲಿ "NEW REGISTRATION" ನ್ನು ಕ್ಲಿಕ್ ಮಾಡಿ, ಮಾಹಿತಿ ತುಂಬಿ LOGIN ಮಾಡಿ, ನಂತರ MY APPLICATION ತೆರೆದುಕೊಳ್ಳುವುದು.

ಅಭ್ಯರ್ಥಿಗಳು "ONLINE" ಮೂಲಕ ಅರ್ಜಿಗಳನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಭರ್ತಿ ಮಾಡತಕ್ಕದ್ದು. ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿಗಳನ್ನು ಭರ್ತಿ ಮಾಡುವುದು. "ONLINE" ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕೇ ಹೊರತು ಬೇರೆ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸುವುದನ್ನು ನಿಷೇಧಿಸಲಾಗಿದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
The date has been extended to apply for the 2017-18 BEd course. The last date for filing application is 11-12-2017.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+