CBSE CTET 2019: ಸೆಪ್ಟೆಂಬರ್ 30 ರೊಳಗೆ ಅರ್ಜಿ ಹಾಕಿ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2019ರ ಸಿಟಿಇಟಿ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಧಿಯನ್ನು ವಿಸ್ತರಿಸಿರುವುದಾಗಿ ತಿಳಿಸಿದೆ.ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 30,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ರಿಜಿಸ್ಟ್ರೇಶನ್ ಪ್ರಕ್ರಿಯೆಯು ಆಗಸ್ಟ್ 19 ರಿಂದ ಸೆಪ್ಟೆಂಬರ್ 18ರ ವರೆಗೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು ಆದರೆ ತದನಂತರ ಅರ್ಜಿ ಸಲ್ಲಿಕೆಯ ಅವಧಿಯನ್ನು ಸೆಪ್ಟೆಂಬರ್ 25ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೊಮ್ಮೆ ಅವಧಿಯನ್ನು ವಿಸ್ತರಿಸಲಾಗಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30,2019 ಕೊನೆಯ ದಿನವಾಗಿರುತ್ತದೆ.

ಡಿಸೆಂಬರ್‌ 8,2019ರಂದು 'ಸೆಂಟ್ರಲ್‌ ಟೀಚರ್‌ ಎಲಿಜಿಬಿಲಿಟಿ ಟೆಸ್ಟ್‌' (ಸಿಟಿಇಟಿ) ನಡೆಸಲಾಗುವುದು ಮತ್ತು ದೇಶಾದ್ಯಂತ ಒಟ್ಟು 110 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಸಿಬಿಎಸ್‌ಇಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಿಬಿಎಸ್ಇ ಸಿಟಿಇಟಿ ಪರೀಕ್ಷೆಗೆ ಸೆಪ್ಟೆಂಬರ್ 30 ರೊಳಗೆ ಅರ್ಜಿ ಹಾಕಿ

ಕನ್ನಡ ಸೇರಿದಂತೆ 20 ಭಾಷೆಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಕೇಂದ್ರ ಸರ್ಕಾರದ (ಕೆವಿಎಸ್‌, ಎನ್‌ವಿಎಸ್‌ ಇತ್ಯಾದಿ), ಕೇಂದ್ರಾಡಳಿತ ಪ್ರದೇಶದ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ಇದು ಅರ್ಹತಾ ಪರೀಕ್ಷೆಯಾಗಿದೆ.

ಈ ಪರೀಕ್ಷೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, 1 ರಿಂದ 5ನೇ ತರಗತಿಯವರೆಗೆ ಬೋಧಿಸಲಿಚ್ಛಿಸುವವರು ಪ್ರೆಮರಿ ಹಂತದ ಮತ್ತು 6 ರಿಂದ 8ನೇ ತರಗತಿಯವರೆಗೆ ಬೋಧಿಸಲು ಬಯಸುವವರು ಎಲಿಮೆಂಟರಿ ಹಂತದ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.

ಶುಲ್ಕ ವಿವರ ಹೀಗಿದೆ:

ಸಿಬಿಎಸ್ಇ, ಸಿಟಿಇಟಿ 2019ರ ರಿಜಿಸ್ಟ್ರೇಶನ್ ಶುಲ್ಕ ಹೀಗಿದೆ. ಪೇಪರ್-1 ಅಥವಾ ಪೇಪರ್ -2 ಕ್ಕೆ ಸಾಮಾನ್ಯ ಅಭ್ಯರ್ಥಿಗಳು 700/-ರೂ ಹಾಗೂ ಮೀಸಲಾತಿ ವರ್ಗಗಳ ವಿದ್ಯಾರ್ಥಿಗಳು ರೂ.350/- ಶುಲ್ಕ ಪಾವತಿಸಿಬೇಕು ಅಂತೆಯೇ ಪೇಪರ್-1 ಮತ್ತು ಪೇಪರ್ -2ಕ್ಕೆ ಸಾಮಾನ್ಯ ಅಭ್ಯರ್ಥಿಗಳು ರೂ.1200/- ಹಾಗೂ ಮೀಸಲಾತಿ ವರ್ಗಗಳ ವಿದ್ಯಾರ್ಥಿಗಳು ರೂ.600/- ಶುಲ್ಕ ಪಾವತಿಸಿಬೇಕು. ಶುಲ್ಕ ಪಾವತಿಸಲು ಅಕ್ಟೋಬರ್‌ 3,2019ರ ವರೆಗೆ ಗಡುವು ನೀಡಲಾಗಿದೆ.

ಸಿಬಿಎಸ್ಇ ಸಿಟಿಇಟಿ ಪರೀಕ್ಷೆಗೆ ಸೆಪ್ಟೆಂಬರ್ 30 ರೊಳಗೆ ಅರ್ಜಿ ಹಾಕಿ

ಅರ್ಜಿ ಸಲ್ಲಿಕೆ ಹೇಗೆ:

ಪರೀಕ್ಷೆಯನ್ನು ತೆಗೆದುಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಸಿಟಿಇಟಿ ಅಧಿಕೃತ ವೆಬ್‌ಸೈಟ್‌ https://ctet.nic.in/CMS/public/home.aspx ಗೆ ಹೋಗಿ.
ಸ್ಟೆಪ್ 2: ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅರ್ಜಿಯನ್ನ ಭರ್ತಿ ಮಾಡಿ ಸಬ್‌ಮಿಟ್ ಮಾಡಿ
ಸ್ಟೆಪ್ 4: ರಿಜಿಸ್ಟ್ರೇಶನ್ ನಂಬರ್ ಹಾಗೂ ಅಪ್ಲಿಕೇಶನ್ ನಂಬರ್ ನೋಟ್ ಮಾಡಿಕೊಳ್ಳಿ
ಸ್ಟೆಪ್ 5: ಶುಲ್ಕ ಪಾವತಿಸಿ
ಸ್ಟೆಪ್ 6: ಕಂಫರ್ಮೇಶನ್ ಪೇಜ್‌ನ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

For Quick Alerts
ALLOW NOTIFICATIONS  
For Daily Alerts

English summary
Central Board of Secondary Education (CBSE) has started accepting the Central Teacher Eligibility Test (CTET) 2019 online applications. The application form link has finally been activated and eligible candidates can now start the application process for CTET examination through the official website. The last date to submit the online application or registration form is September 30, 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X