CBSE CTET: ಜುಲೈ ಪರೀಕ್ಷೆಗೆ ಆನ್ಲೈನ್ ರಿಜಿಸ್ಟ್ರೇಶನ್ ಪ್ರಕ್ರಿಯೆಯ ಅವಧಿ ವಿಸ್ತರಣೆ

ಸಿಬಿಎಸ್ಇ ಸಿಟಿಇಟಿ 2020ರ ಆನ್ಲೈನ್ ಅರ್ಜಿ ಸಲ್ಲಿಕೆಯ ಅವಧಿಯನ್ನು ಮಾರ್ಚ್ 2,2020ರ ವರೆಗೆ ವಿಸ್ತರಿಸಲಾಗಿದೆ.

ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಇದೀಗ ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ಗೆ ಆನ್ಲೈನ್ ಅಪ್ಲಿಕೇಶನ್ ರಿಜಿಸ್ಟ್ರೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ವಿದ್ಯಾರ್ಥಿಗಳು ಆಫೀಶಿಯಲ್ https://ctet.nic.in/webinfo/Public/Home.aspx# ವೆಬ್ಸೈಟ್ಗೆ ವಿಸಿಟ್ ಮಾಡಿ, ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ.

CBSE: ಆನ್ಲೈನ್ ಮೂಲಕ ಮಾ.2ರೊಳಗೆ ಅರ್ಜಿ ಸಲ್ಲಿಸಿ

ಸಿಬಿಎಸ್ಇ ಸಿಟಿಇಟಿ 2020 ಪರೀಕ್ಷೆಯು ಜುಲೈ 5 ರಂದು ನಡೆಯಲಿದ್ದು, ಈ ಮುಂಚೆ ಫೆಬ್ರವರಿ 24,2020ರೊಳಗೆ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದ್ದು, ಅಭ್ಯರ್ಥಿಗಳು ಮಾರ್ಚ್ 2,2020ರ ರಾತ್ರಿ 11:59ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಅರ್ಜಿ ಸಲ್ಲಿಕೆ ಹೇಗೆ:

ಸ್ಟೆಪ್ 1: ಸಿಟಿಇಟಿ ಆಫೀಶಿಯಲ್ ಸೈಟ್ಗೆ ಲಾಗಿನ್ ಆಗಿ www.ctet.nic.in.
ಸ್ಟೆಪ್ 2: ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅರ್ಜಿಯನ್ನ ಭರ್ತಿ ಮಾಡಿ ಸಬ್ಮಿಟ್ ಮಾಡಿ
ಸ್ಟೆಪ್ 4: ರಿಜಿಸ್ಟ್ರೇಶನ್ ನಂಬರ್ ಹಾಗೂ ಅಪ್ಲಿಕೇಶನ್ ನಂಬರ್ ನೋಟ್ ಮಾಡಿಕೊಳ್ಳಿ
ಸ್ಟೆಪ್ 5: ಶುಲ್ಕ ಪಾವತಿಸಿ
ಸ್ಟೆಪ್ 6: ಕಂಫರ್ಮೇಶನ್ ಪೇಜ್ನ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಶುಲ್ಕ ವಿವರ ಹೀಗಿದೆ:

ಸಿಬಿಎಸ್ಇ, ಸಿಟಿಇಟಿ 2020ರ ರಿಜಿಸ್ಟ್ರೇಶನ್ ಶುಲ್ಕ ಹೀಗಿದೆ:
ಸಾಮಾನ್ಯ ಅಭ್ಯರ್ಥಿಗಳು ಪೇಪರ್ 1ಕ್ಕೆ 1000/- ರೂ, ಪೇಪರ್ 1 ಮತ್ತು 2ಕ್ಕೆ 1,200/- ರೂ,ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳು ಪೇಪರ್ 1ಕ್ಕೆ 500/-ರೂ ಮತ್ತು ಪೇಪರ್ 1 ಮತ್ತು ಪೇಪರ್ 2ಕ್ಕೆ 600/-ರೂ ಅರ್ಜಿ ಶುಲ್ಕವನ್ನು ಇ-ಚಲನ್/ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಮಾರ್ಚ್ 5,2020ರ ಮಧ್ಯಾಹ್ನ 3:30ರೊಳಗೆ ಪಾವತಿಸಬಹುದು.

More News  

For Quick Alerts
ALLOW NOTIFICATIONS  
For Daily Alerts

English summary
Central Board of Secondary Education (CBSE) has started accepting the Central Teacher Eligibility Test (CTET) 2020 online applications. The application form link has finally been activated from today and eligible candidates can start the application process for CTET examination through the official website. The last date to submit the online application or registration form is February 24,2020
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+