ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ) ನಡೆಸುವ 10 ಮತ್ತು 12ನೇ ತರಗತಿ ಪರೀಕ್ಷೆಯ ಅಭ್ಯರ್ಥಿಗಳ ಆನ್ಲೈನ್ ಲಿಸ್ಟ್ ಬಿಡುಗಡೆ ಆಗಿದೆ.
ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ವಿದ್ಯಾಲಯ, ಖಾಸಗಿ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನಿಯಂತ್ರಿಸುತ್ತದೆ. ಮಂಡಳಿಯು 1962 ರಲ್ಲಿ ಸ್ಥಾಪನೆಗೊಂಡು ಈವರೆಗೂ ತನ್ನದೇ ಆದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದಿದೆ.
ಸಿ ಬಿ ಎಸ್ ಇ-೨೦೧೭
ಪ್ರಸಕ್ತ ಸಾಲಿನ ಹತ್ತನೇ ತರಗತಿಯ ಪರೀಕ್ಷೆಗಳು ಮಾರ್ಚ್ ೦೯ ರಿಂದ ಆರಂಭವಾಗಲಿದ್ದು ಏಪ್ರಿಲ್ ೧೦ ರವರೆಗೆ ನಡೆಯಲಿವೆ. ಇನ್ನು ಹನ್ನೆರಡನೇ ತರಗತಿಯ ಪರೀಕ್ಷೆಗಳು ಮಾರ್ಚ್ ೦೯ ರಿಂದ ಪ್ರಾರಂಭವಾಗಿ ಏಪ್ರಿಲ್ ೨೯ ರವರೆಗೆ ನಡೆಯಲಿದೆ. ಈ ಬಾರಿ ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸಿ ಬಿ ಎಸ್ ಇ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದೆ.
ಲಿಸ್ಟ್ ನೋಡಲು:
ಸಿ ಬಿ ಎಸ್ ಇ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
ಅಡ್ಮಿಟ್ ಕಾರ್ಡ್/ ಎಲ್ ಒ ಸಿ/ ಸೆಂಟ್ರಲ್ ಮೆಟೀರಿಯಲ್ ಫಾರ್ ಬೋರ್ಡ್ ಎಕ್ಸಾಮ್ ಎನ್ನುವ ಬಟನ್ ಕ್ಲಿಕ್ ಮಾಡಿ.
ನಿಮಗೆ ನೀಡಲಾಗಿರುವ ಯೂಸರ್ ಐ ಡಿ, ಪಾಸ್ವರ್ಡ್ ಮತ್ತು ಸೆಕ್ಯೂರಿಟಿ ಪಿನ್ ಬಳಸಿ ಲಾಗಿನ್ ಆಗಿ.
ನಿಮ್ಮ ಪರೀಕ್ಷಾ ವಿವರವನ್ನು ಸೇವ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಸೂಚನೆ:
ವಿದ್ಯಾರ್ಥಿಗಳು ಪರೀಕ್ಷೆಗೆ ಕಡ್ಡಾಯವಾಗಿ ಪ್ರವೇಶ ಪತ್ರವನ್ನು ತೆಗೆದುಕೊಂಡು ಹೋಗಬೇಕು, ಪ್ರವೇಶ ಪಾತ್ರದ ಜೊತೆಯಲ್ಲಿ ನಿಮ್ಮ ಇತ್ತೀಚಿನ ಭಾವಚಿತ್ರ ಮತ್ತು ಗುರುತಿನ ಚೀಟಿ ಕೂಡ ಕಡ್ಡಾಯವಾಗಿ ಒಯ್ಯಬೇಕು.
ಹೆಚ್ಚಿನ ಮಾಹಿತಿಗಾಗಿ ಸಿ ಬಿ ಎಸ್ ಇ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
http://cbse.nic.in/newsite/index.html