ಜೆಇಇ-2018: ಏಪ್ರಿಲ್ 8ಕ್ಕೆ ದಿನಾಂಕ ಫಿಕ್ಸ್

2018ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ-ಮುಖ್ಯ)ಯು ಏಪ್ರಿಲ್‌ 8ರಂದು ನಡೆಸಲು ತೀರ್ಮಾನಿಸಲಾಗಿದೆ. ಏಪ್ರಿಲ್ 8 ರಂದು ಮುಖ್ಯ ಪರೀಕ್ಷೆಯು ನಡೆಯಲಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆ ಏಪ್ರಿಲ್ 15 ಮತ್ತು 16 ರಂದು ನಡೆಯಲಿದೆ.

ಜೆಇಇ ಪರೀಕ್ಷೆ ದಿನಾಂಕವನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪ್ರಕಟಿಸಿದೆ. ಈ ಹಿಂದೆ ತಿಳಿಸಿದ್ದಂತೆ 2018ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ-ಮುಖ್ಯ)ಯು ಏಪ್ರಿಲ್‌ 8ರಂದು ನಡೆಸಲು ತೀರ್ಮಾನಿಸಲಾಗಿದೆ.

ಏಪ್ರಿಲ್ 8 ರಂದು ಮುಖ್ಯ ಪರೀಕ್ಷೆಯು ನಡೆಯಲಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆ ಏಪ್ರಿಲ್ 15 ಮತ್ತು 16 ರಂದು ನಡೆಯಲಿದೆ.

ಏಪ್ರಿಲ್ 8 ರಂದು ಜೆಇಇ-2018

ಪೇಪರ್-1 (ಬಿಇ/ಬಿಟೆಕ್) ಪರೀಕ್ಷೆ ಆಫ್-ಲೈನ್ (ಪೆನ್ ಮತ್ತು ಪೇಪರ್ ಆಧಾರಿತ ಪರೀಕ್ಷೆ) ಮತ್ತು ಆನ್ಲೈನ್ (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಎರಡು ಮಾದರಿಯಲ್ಲಿ ನಡೆಸಲಿದೆ. ಪೇಪರ್-2 (ಬಿಆರ್ಕ್/ಬಿಪ್ಲಾನಿಂಗ್) ಪರೀಕ್ಷೆಯು ಪೆನ್ ಮತ್ತು ಪೇಪರ್ ಮಾದರಿಯಲ್ಲಿ ನಡೆಯಲಿದೆ.

ಈ ಬಾರಿಯ ಪರೀಕ್ಷೆಯನ್ನು ಐಐಟಿ ಕಾನ್ಪುರ್ ನಡೆಸುತ್ತಿದ್ದು, ದೇಶದ 104 ನಗರಗಳಲ್ಲಿ ಮತ್ತು ಹೊರದೇಶದ 9 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ.

ಒಟ್ಟು 24,323 ಸೀಟುಗಳನ್ನು ಈ ಪರೀಕ್ಷೆ ಮೂಲಕ ಹಂಚಿಕೆ ಮಾಡಲಾಗುವುದು. ಕಳೆದ ವರ್ಷ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಜೆ ಇ ಇ ಪರೀಕ್ಷೆ ತೆಗೆದುಕೊಂಡಿದ್ದರು.

ಜೆ ಇ ಇ ಪರೀಕ್ಷೆಗಳು

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ), ನವದೆಹಲಿ, ಸಹಯೋಗದೊಂದಿಗೆ ಆಯೋಜಿಸುವ ಜಂಟಿ ಪ್ರವೇಶ ಪರೀಕ್ಷೆ.

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್‌ಐಟಿ) ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಾಗಿ ಸಿಬಿಎಸ್‌ಇಯು ಪ್ರತಿ ವರ್ಷ ಜೆಇಇ (ಮುಖ್ಯ) ನಡೆಸುತ್ತದೆ.

ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಜೆ ಇ ಇ ಪರೀಕ್ಷೆಗಳು ಸಹಕಾರಿಯಾಗಿವೆ. ಜೆ.ಇ.ಇ. ಪರೀಕ್ಷೆಗಳು ರಾಷ್ಟ್ರ ಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ತೆಗೆದುಕೊಳ್ಳಬೇಕಾದಂಥವು.

ಐ.ಐ.ಟಿ., ಎನ್.ಐ.ಟಿ., ಐ.ಎಸ್.ಇ.ಆರ್., ಮುಂತಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನೋ ಅಥವಾ ಅನ್ವಯ ವಿಜ್ಞಾನವನ್ನೋ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು. ಜೆ.ಇ.ಇ. ಆಯ್ಕೆ ಪರೀಕ್ಷೆಗಳು ತಮ್ಮದೇ ಆದ ಪಠ್ಯವನ್ನು ಆಧರಿಸಿರುತ್ತವೆ.

ಈ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದವರು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶಾತಿಗಾಗಿ ಈ ಸಂಸ್ಥೆಗಳ ಜಂಟಿ ಪ್ರವೇಶಾತಿ ಮಂಡಳಿ (ಜೆಎಬಿ) ನಡೆಸುವ ಜೆಇಇ-ಅಡ್ವಾನ್ಸ್ಡ್‌ ಬರೆಯಲು ಅರ್ಹತೆ ಗಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
JEE Main 2018 offline (pen-paper) exam will be held on April 8 while the online exam will be held on April 15 and 16.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+