CLAT 2022 : ಅರ್ಜಿ ಸಲ್ಲಿಕೆ, ಪ್ರಮುಖ ದಿನಾಂಕಗಳು, ಪರೀಕ್ಷಾ ಮಾದರಿ ಮತ್ತು ಅರ್ಹತೆಗಳ ವಿವರ ಇಲ್ಲಿವೆ

ಭಾರತದ ಉನ್ನತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಮತ್ತು ಹಲವಾರು ಅಂಗಸಂಸ್ಥೆ ಕಾಲೇಜುಗಳಲ್ಲಿ UG ಮತ್ತು PG ಕಾನೂನು ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು CLAT ಪರೀಕ್ಷೆಯನ್ನು ನಡೆಸಲಾಗುತ್ತದೆ. ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) 2022 ಅನ್ನು NLU ಗಳ ಒಕ್ಕೂಟವು ಮೇ ಮೊದಲ ವಾರದಲ್ಲಿ ನಡೆಸುತ್ತದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನಿರಬೇಕು, ಅರ್ಜಿ ಶುಲ್ಕ ಎಷ್ಟು? ಪರೀಕ್ಷಾ ಪಠ್ಯಕ್ರಮ, ಪ್ರಮುಖ ದಿನಾಂಕಗಳು ಮತ್ತು ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಬೇಕು ಎಂಬ ಎಲ್ಲಾ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಕ್ಲ್ಯಾಟ್ 2022 ಪರೀಕ್ಷೆಯ ಸಂಪೂರ್ಣ ವಿವರ

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT)ಯಲ್ಲಿ ಪಡೆದ ಅಂಕಗಳು 5-ವರ್ಷದ LLB ಮತ್ತು LLM ಕೋರ್ಸ್ ಗಳಿಗೆ ಉನ್ನತ NLU ಗಳಿಗೆ ಪ್ರವೇಶ ಪಡೆಯಲು ಸಹಾಯವಾಗಲಿದೆ. ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) ಪೆನ್-ಪೇಪರ್ ಮೋಡ್ ನಲ್ಲಿ ಅಂದರೆ ಆಫ್‌ಲೈನ್ ಮೋಡ್‌ನಲ್ಲಿ ನಡೆಯಲಿದ್ದು, ಪರೀಕ್ಷಾ ತಯಾರಿಗೆ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

CLAT 2022 ಪರೀಕ್ಷೆ ತಯಾರಿಗೆ ಸಲಹೆ:

CLAT ಭಾರತದಲ್ಲಿನ ಅತ್ಯಂತ ಸ್ಪರ್ಧಾತ್ಮಕ ಕಾನೂನು ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ಮೆರಿಟ್ ಪಟ್ಟಿಯಲ್ಲಿ ನೀವು ಗುರುತಿಸಿಕೊಳ್ಳು ಹೆಚ್ಚಿನ ಅಂಕಗಳನ್ನು ಪಡೆಯಬೇಕಿರುತ್ತದೆ. ಅದಕ್ಕಾಗಿ ಈ ಸಲಹೆಗಳನ್ನು ಪಾಲಿಸಿ.

1. ಅಣಕು ಪರೀಕ್ಷೆ ಮತ್ತು ಹಿಂದಿನ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳ ನಿಯಮಿತ ಅಭ್ಯಾಸ :

ಪರಿಕಲ್ಪನೆಗಳ ಸ್ಪಷ್ಟತೆಗಾಗಿ ಅಭ್ಯರ್ಥಿಗಳು ಪ್ರತಿದಿನ ಅಣಕು ಪರೀಕ್ಷೆಗಳು ಮತ್ತು ಹಿಂದಿನ ವರ್ಷದ ಮಾದರಿ ಪತ್ರಿಕೆಗಳನ್ನು ಅಭ್ಯಾಸ ಮಾಡಿ. ಇದರಿಂದ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ವಿಷಯ ಮತ್ತು ರೀತಿಯನ್ನು ಚೆನ್ನಾಗಿ ಅರಿಯಲು ಸಹಾಯವಾಗುತ್ತದೆ. ಪರೀಕ್ಷೆಯ ಸಂಪೂರ್ಣ ಚಿತ್ರಣ ನಿಮಗೆ ಲಭ್ಯವಾಗುತ್ತದೆ.

2. ಪರೀಕ್ಷೆಗೆ ಸುಗಮ ಮತ್ತು ಸುಲಭ ತಯಾರಿ :

ಉತ್ತಮ ರೀತಿಯಲ್ಲಿ ಅಧ್ಯಯನ ಕೈಗೊಂಡಲ್ಲಿ ಕಲಿಕೆಯ ಹಂತದಲ್ಲಿ ಮತ್ತು ಕಲಿಕೆ ಮುಗಿದ ಬಳಿಕವೂ ಅಭ್ಯರ್ಥಿಗಳು ಶಾಂತರೀತಿಯಲ್ಲಿರಬಹುದು. ಏಕೆಂದರೆ ನೀವು ಪರೀಕ್ಷೆಯ ಬಗ್ಗೆ ಒತ್ತಡ ಮತ್ತು ಆತಂಕದಲ್ಲಿದ್ದಾಗ ಪರಿಕಲ್ಪನೆಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪರೀಕ್ಷೆಯ ಅವಧಿಯಲ್ಲಿ ನಿಮ್ಮನ್ನು ಆರಾಮವಾಗಿ ಮತ್ತು ಆರೋಗ್ಯವಾಗಿರಿಸಿಕೊಳ್ಳಲು ಈಗಿನಿಂದಲೇ ತಯಾರಿ ನಡೆಸಿ.

ಪರೀಕ್ಷೆಯ ಮಾದರಿ:

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) 2022 ಗೆ ತಯಾರಿಯನ್ನು ಪ್ರಾರಂಭಿಸುವ ಮೊದಲು ಪರೀಕ್ಷೆಯ ಮಾದರಿಯ ಬಗ್ಗೆ ತಿಳಿದುಕೊಂಡಿರಬೇಕು. ಈ ಪರೀಕ್ಷೆಯು ಅಭ್ಯರ್ಥಿಯ ತಾರ್ಕಿಕ ಮತ್ತು ಯೋಗ್ಯತೆಯ ಸಾಮರ್ಥ್ಯಗಳ ಮಾಪನವಾಗಿದೆ. ಹಾಗಾಗಿ ಪರೀಕ್ಷೆಯ ಮಾದರಿಯ ಕುರಿತು ಕೆಲವು ವಿವರಗಳನ್ನು ಕೆಳಗೆ ನೀಡಲಾಗಿದೆ:

ಗುರುತು ಯೋಜನೆ/ಮಾರ್ಕಿಂಗ್ ಸ್ಕೀಂ : ಪ್ರತಿ ಪ್ರಶ್ನೆಗೆ 1 ಅಂಕ ಇರುತ್ತದೆ. ತಪ್ಪಾದ ಪ್ರಶ್ನೆಗೆ 0.25 ನೆಗೆಟಿವ್ ಅಂಕಗಳಿರುತ್ತವೆ.

ಪ್ರಮುಖ ದಿನಾಂಕಗಳು:

CLAT 2022 ಪರೀಕ್ಷೆಯ ಪ್ರಮುಖ ದಿನಾಂಕಗಳು ಇಲ್ಲಿವೆ.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಜನವರಿ 2022ರ 1 ನೇ ವಾರ

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಮಾರ್ಚ್ 2022 ರ 2ನೇ ವಾರ

ಪ್ರವೇಶ ಪತ್ರ ಲಭ್ಯ ದಿನಾಂಕ : ಏಪ್ರಿಲ್ 2022 ರ 3ನೇ ವಾರ

ಪರೀಕ್ಷೆಯ ದಿನಾಂಕ : ಮೇ 2022 ರ 3ನೇ ವಾರ

ಫಲಿತಾಂಶದ ದಿನಾಂಕ : ಜೂನ್ 2022 ರ 4ನೇ ವಾರ

ಕೌನ್ಸೆಲಿಂಗ್ ದಿನಾಂಕ : ಜುಲೈ 2022 ರ 1ನೇ ವಾರ

ಅರ್ಜಿ ಸಲ್ಲಿಕೆ:

ಆಕಾಂಕ್ಷಿಗಳು ಜನವರಿ 2022 ರ 1 ನೇ ವಾರದಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ CLAT 2022 ರ ಆನ್‌ಲೈನ್ ಅರ್ಜಿ ನಮೂನೆಯ ಬಗ್ಗೆ ಪರಿಶೀಲಿಸಬಹುದು. ತದನಂತರ ಆನ್‌ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೋಂದಣಿ ಮಾಡುವಾಗ ಅಭ್ಯರ್ಥಿಗಳು ತಮ್ಮ ಮಾನ್ಯ ಇಮೇಲ್ ಐಡಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳಿಗೆ ಅರ್ಜಿ ತಿದ್ದುಪಡಿಗೆ ಕೂಡ ಅವಕಾಶ ನೀಡಲಾಗುತ್ತದೆ. ಆಗ ಅಭ್ಯರ್ಥಿಗಳು ಅರ್ಜಿಯಲ್ಲಿ ಏನಾದರು ತಪ್ಪು ಮಾಹಿತಿ ತುಂಬಿದ್ದಲ್ಲಿ ಅಥವಾ ಮಾಹಿತಿಯಲ್ಲಿ ಬದಲಾವಣೆಗಳಲ್ಲಿ ಮಾಡಬಹುದು. ಅಭ್ಯರ್ಥಿಗಳು ಗಮನದಲ್ಲಿಡಬೇಕಾದ ಅಂಶವೆಂದರೆ ಆನ್‌ಲೈನ್ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳುವುದು.

ಅರ್ಜಿ ಶುಲ್ಕ:

CLAT 2022 ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ/ಓಬಿಸಿ/ಅಂಗವಿಕಲ ಅಭ್ಯರ್ಥಿಗಳು 4000/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 3000/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೋಡ್ ಬಳಸಿ ಮಾತ್ರ ಪಾವತಿಸಬೇಕಿರುತ್ತದೆ.

ಅರ್ಹತೆ :

CLAT 2022 ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರಬೇಕು.

ಪಠ್ಯಕ್ರಮ :

CLAT 2022 ಪರೀಕ್ಷೆಗೆ ಹಾಜರಾಗಲು ಇಚ್ಚಿಸುವ ಅಭ್ಯರ್ಥಿಗಳು ಮೊದಲು ಪರೀಕ್ಷೆಯ ಪಠ್ಯಕ್ರಮದ ಬಗ್ಗೆ ತಿಳಿದಿಕೊಳ್ಳಬೇಕು. ಈ ಪರೀಕ್ಷೆಯು ಯಾವೆಲ್ಲಾ ಪಠ್ಯಕ್ರಮವನ್ನು ಒಳಗೊಂಡಿದೆ ಎಂದು ಇಲ್ಲಿ ತಿಳಿಯಿರಿ.

* ಪ್ರಚಲಿತ ವಿದ್ಯಮಾನಗಳು ಮತ್ತು ಸಾಮಾನ್ಯ ಅರಿವು: ಸಾಮಾನ್ಯ ಅರಿವು, ಪ್ರಚಲಿತ ಘಟನೆಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನವೀಕರಣಗಳು ಮತ್ತು ಇನ್ನೂ ಹೆಚ್ಚಿನ ವಿಷಯಗಳನ್ನು ಒಳಗೊಂಡಿದೆ.

* ಇಂಗ್ಲಿಷ್ ಕಾಂಪ್ರಹೆನ್ಷನ್: ಪದದ ಅರ್ಥಗಳು, ಪ್ಯಾಸೇಜ್ ಮತ್ತು ಇನ್ನೂ ಅನೇಕ ವಿಷಯಗಳನ್ನು ಇಲ್ಲಿ ಕೇಳಲಾಗುತ್ತದೆ.

* ಪ್ರಾಥಮಿಕ ಗಣಿತ ಮತ್ತು ಅಭ್ಯರ್ಥಿಗಳಲ್ಲಿನ ಜ್ಞಾನಕ್ಕೆ ಸಂಬಂಧಿಸಿದಂತೆ ಒಳಗೊಂಡಿರುತ್ತದೆ.

* ಕಾನೂನು ಸಾಮರ್ಥ್ಯದಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯಗಳು ಮತ್ತು ಸಂಶೋಧನಾ ಯೋಗ್ಯತೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

* ತಾರ್ಕಿಕ ತರ್ಕವು ಸಿಲೋಜಿಸಮ್, ತಾರ್ಕಿಕ ಅನುಕ್ರಮಗಳು ಅಥವಾ ಸಾದೃಶ್ಯಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಕ್ಲ್ಯಾಟ್ ಪರೀಕ್ಷೆಯಲ್ಲಿ ಗರಿಷ್ಠ ಮತ್ತು ಉತ್ತಮ ಅಂಕಗಳನ್ನು ಪಡೆಯಲು ಅಭ್ಯರ್ಥಿಗಳು CLAT 2022 ರ ಸಂಪೂರ್ಣ ಪಠ್ಯಕ್ರಮದ ಕಲ್ಪನೆಯನ್ನು ಹೊಂದಿರಬೇಕು.

More News  

For Quick Alerts
ALLOW NOTIFICATIONS  
For Daily Alerts

English summary
CLAT Exam 2022 : Here is how to apply, exam tips, pattern, important dates, eligibility and syllabus of CLAT.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+