CLAT Exam 2023 Registration : ಅರ್ಜಿ ಸಲ್ಲಿಕೆ, ಪ್ರಮುಖ ದಿನಾಂಕಗಳು, ಪರೀಕ್ಷಾ ಮಾದರಿ ಮತ್ತು ಅರ್ಹತೆಗಳ ವಿವರ ಇಲ್ಲಿವೆ

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಗೆ (CLAT 2023) ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 8,2022 ರಿಂದ ನವೆಂಬರ್ 13,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

 

CLAT 2023 ಪರೀಕ್ಷೆಯನ್ನು ಡಿಸೆಂಬರ್ 18,2022 ರಂದು ನಡೆಸಲು ನಿರ್ಧರಿಸಲಾಗಿದೆ. ಈ ಭಾರಿಯ ಪರೀಕ್ಷೆ ವಿಧಾನದಲ್ಲಿ ಗಮನಾರ್ಹ ಬದಲಾವಣೆಗಳಿದ್ದು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳು (NLUs) ಕಾನೂನು ಪ್ರವೇಶ ಪರೀಕ್ಷೆಯನ್ನು ಮೊದಲ ಬಾರಿಗೆ ಪ್ರಸಕ್ತ ವರ್ಷದಲ್ಲಿ ಎರಡು ಭಾರಿ ನಡೆಸಲಾಗುತ್ತಿದೆ.

ಕ್ಲ್ಯಾಟ್ 2023 ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

CLAT 2023 ಪರೀಕ್ಷೆ:

ಭಾರತದ ಉನ್ನತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಮತ್ತು ಹಲವಾರು ಅಂಗಸಂಸ್ಥೆ ಕಾಲೇಜುಗಳಲ್ಲಿ UG ಮತ್ತು PG ಕಾನೂನು ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು CLAT ಪರೀಕ್ಷೆಯನ್ನು ನಡೆಸಲಾಗುತ್ತದೆ. ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) 2022 ಅನ್ನು NLU ಗಳ ಒಕ್ಕೂಟವು ಡಿಸೆಂಬರ್ 18,2022ರಂದು ನಡೆಸುತ್ತದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನಿರಬೇಕು, ಅರ್ಜಿ ಶುಲ್ಕ ಎಷ್ಟು? ಪೇಪರ್ ಮಾದರಿ ಮತ್ತು ಪ್ರಮುಖ ದಿನಾಂಕಗಳು ಎಂಬ ಎಲ್ಲಾ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

 

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT)ಯಲ್ಲಿ ಪಡೆದ ಅಂಕಗಳು 5-ವರ್ಷದ LLB ಮತ್ತು LLM ಕೋರ್ಸ್ ಗಳಿಗೆ ಉನ್ನತ NLU ಗಳಿಗೆ ಪ್ರವೇಶ ಪಡೆಯಲು ಸಹಾಯವಾಗಲಿದೆ.

CLAT 2023 ಅರ್ಹತೆ :

UG CLAT ಗಾಗಿ 12 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 45 ಅಂಕಗಳು (SC, ST ಅಭ್ಯರ್ಥಿಗಳ ಸಂದರ್ಭದಲ್ಲಿ 40 ಶೇಕಡಾ) ಅಥವಾ ತತ್ಸಮಾನ ಗ್ರೇಡ್ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

CLAT PG ಗಾಗಿ ಅಭ್ಯರ್ಥಿಗಳು ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ LLB ಅಥವಾ ತತ್ಸಮಾನ ಪದವಿ ಅಥವಾ ಅದರ ಸಮಾನ ದರ್ಜೆಯನ್ನು ಹೊಂದಿರಬೇಕು. ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಶೇಕಡಾ 45 ಅಂಕಗಳನ್ನು ಪಡೆದಿರಬೇಕು.

CLAT UG 2023 ಪೇಪರ್ ಮಾದರಿ :

ಕಾನೂನಿಗೆ ಸಂಬಂಧಿಸಿದ CLAT UG ಪತ್ರಿಕೆಯು ಐದು ವಿಭಾಗಗಳನ್ನು ಹೊಂದಿದೆ. ಮೌಖಿಕ ಸಾಮರ್ಥ್ಯ, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವ್ಯವಹಾರಗಳು, ಕಾನೂನು ತಾರ್ಕಿಕತೆ, ತಾರ್ಕಿಕ ತಾರ್ಕಿಕತೆ ಮತ್ತು ಕಾಂಪ್ರಹೆನ್ಷನ್ ಆಧಾರಿತ ಪ್ರಶ್ನೆಗಳನ್ನು ಒಳಗೊಂಡಿರುವ ಪರಿಮಾಣಾತ್ಮಕ ಆಪ್ಟಿಟ್ಯೂಡ್. ಪ್ರತಿ ವಿಭಾಗವು ನಾಲ್ಕರಿಂದ ಐದು ಕಾಂಪ್ರಹೆನ್ಷನ್ ಪ್ಯಾಸೇಜ್‌ಗಳನ್ನು ಹೊಂದಿರಬಹುದು ಮತ್ತು ನಂತರ ಬಹು ಆಯ್ಕೆಯ ಪ್ರಶ್ನೆಗಳ ಗುಂಪನ್ನು ಹೊಂದಿರಬಹುದು.
ಕ್ಲಾಟ್ 202೩ ಯುಜಿ ಪೇಪರ್ 150 ಪ್ರಶ್ನೆಗಳನ್ನು ಹೊಂದಿರುತ್ತದೆ.

ಕ್ಲ್ಯಾಟ್ 2023 ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

CLAT UG 2023 ಪಠ್ಯಕ್ರಮ :

CLAT 2023 ಪರೀಕ್ಷೆಗೆ ಹಾಜರಾಗಲು ಇಚ್ಚಿಸುವ ಅಭ್ಯರ್ಥಿಗಳು ಮೊದಲು ಪರೀಕ್ಷೆಯ ಪಠ್ಯಕ್ರಮದ ಬಗ್ಗೆ ತಿಳಿದಿಕೊಳ್ಳಬೇಕು. ಈ ಪರೀಕ್ಷೆಯು ಯಾವೆಲ್ಲಾ ಪಠ್ಯಕ್ರಮವನ್ನು ಒಳಗೊಂಡಿದೆ ಎಂದು ಇಲ್ಲಿ ತಿಳಿಯಿರಿ.

* ಪ್ರಚಲಿತ ವಿದ್ಯಮಾನಗಳು ಮತ್ತು ಸಾಮಾನ್ಯ ಅರಿವು: ಸಾಮಾನ್ಯ ಅರಿವು, ಪ್ರಚಲಿತ ಘಟನೆಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನವೀಕರಣಗಳು ಮತ್ತು ಇನ್ನೂ ಹೆಚ್ಚಿನ ವಿಷಯಗಳನ್ನು ಒಳಗೊಂಡಿದೆ.

* ಇಂಗ್ಲಿಷ್ ಕಾಂಪ್ರಹೆನ್ಷನ್: ಪದದ ಅರ್ಥಗಳು, ಪ್ಯಾಸೇಜ್ ಮತ್ತು ಇನ್ನೂ ಅನೇಕ ವಿಷಯಗಳನ್ನು ಇಲ್ಲಿ ಕೇಳಲಾಗುತ್ತದೆ.

* ಪ್ರಾಥಮಿಕ ಗಣಿತ ಮತ್ತು ಅಭ್ಯರ್ಥಿಗಳಲ್ಲಿನ ಜ್ಞಾನಕ್ಕೆ ಸಂಬಂಧಿಸಿದಂತೆ ಒಳಗೊಂಡಿರುತ್ತದೆ.

* ಕಾನೂನು ಸಾಮರ್ಥ್ಯದಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯಗಳು ಮತ್ತು ಸಂಶೋಧನಾ ಯೋಗ್ಯತೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

* ತಾರ್ಕಿಕ ತರ್ಕವು ಸಿಲೋಜಿಸಮ್, ತಾರ್ಕಿಕ ಅನುಕ್ರಮಗಳು ಅಥವಾ ಸಾದೃಶ್ಯಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಕ್ಲ್ಯಾಟ್ ಪರೀಕ್ಷೆಯಲ್ಲಿ ಗರಿಷ್ಠ ಮತ್ತು ಉತ್ತಮ ಅಂಕಗಳನ್ನು ಪಡೆಯಲು ಅಭ್ಯರ್ಥಿಗಳು CLAT 2023ರ ಸಂಪೂರ್ಣ ಪಠ್ಯಕ್ರಮದ ಕಲ್ಪನೆಯನ್ನು ಹೊಂದಿರಬೇಕು.

CLAT 2023 ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಆಗಸ್ಟ್ 8,2022

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ನವೆಂಬರ್ 13,2022

ಪರೀಕ್ಷೆಯ ದಿನಾಂಕ : ಡಿಸೆಂಬರ್ 18,2022

CLAT 2023 ಅರ್ಜಿ ಶುಲ್ಕ :

CLAT 2023 ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ/ಓಬಿಸಿ/ಅಂಗವಿಕಲ ಅಭ್ಯರ್ಥಿಗಳು 4000/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಬಿಪಿಎಲ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳು 3,500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೋಡ್ ಬಳಸಿ ಮಾತ್ರ ಪಾವತಿಸಬೇಕಿರುತ್ತದೆ.

CLAT 2023 ಅರ್ಜಿ ಸಲ್ಲಿಕೆ :

ಆಕಾಂಕ್ಷಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ CLAT 2023ರ ಆನ್‌ಲೈನ್ ಅರ್ಜಿ ನಮೂನೆಯ ಬಗ್ಗೆ ಪರಿಶೀಲಿಸಬಹುದು. ತದನಂತರ ಆನ್‌ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೋಂದಣಿ ಮಾಡುವಾಗ ಅಭ್ಯರ್ಥಿಗಳು ತಮ್ಮ ಮಾನ್ಯ ಇಮೇಲ್ ಐಡಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳಿಗೆ ಅರ್ಜಿ ತಿದ್ದುಪಡಿಗೆ ಕೂಡ ಅವಕಾಶ ನೀಡಲಾಗುತ್ತದೆ. ಆಗ ಅಭ್ಯರ್ಥಿಗಳು ಅರ್ಜಿಯಲ್ಲಿ ಏನಾದರು ತಪ್ಪು ಮಾಹಿತಿ ತುಂಬಿದ್ದಲ್ಲಿ ಅಥವಾ ಮಾಹಿತಿಯಲ್ಲಿ ಬದಲಾವಣೆಗಳಲ್ಲಿ ಮಾಡಬಹುದು. ಅಭ್ಯರ್ಥಿಗಳು ಗಮನದಲ್ಲಿಡಬೇಕಾದ ಅಂಶವೆಂದರೆ ಆನ್‌ಲೈನ್ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳುವುದು.

ಅರ್ಜಿ ಸಲ್ಲಿಸುವುದು ಹೇಗೆ ? :

ಸ್ಟೆಪ್ 1 : CLAT- consortiumofnlus.ac.in ನ ಅಧಿಕೃತ ಸೈಟ್‌ಗೆ ಭೇಟಿ ನೀಡಿ
ಸ್ಟೆಪ್ 2 : ಹೋಂ ಪೇಜ್ ನಲ್ಲಿ ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ.
ಸ್ಟೆಪ್ 3 : ನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4 : ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ
ಸ್ಟೆಪ್ 5 : ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಕ್ರೆಡಿಟ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
ಸ್ಟೆಪ್ 6 : ಅಭ್ಯರ್ಥಿಗಳು ನಂತರ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ

ಅಭ್ಯರ್ಥಿಗಳು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
CLAT Exam 2023 : Registration process begins, Candidates can apply from august 8 to November 13. Here is all about exam, eligibility, exam fee and application process.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X