ಕರ್ನಾಟಕದಲ್ಲಿರುವ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಶಿಕ್ಷಣ ತೆಗೆದುಕೊಳ್ಳುವವರಿಗಾಗಿ ಕಾಮೆಡ್ ಕೆ ಪ್ರವೇಶ ಪರೀಕ್ಷೆ ನಡೆಸಲಾಗುವುದು.
ಕಾಮೆಡ್ ಕೆ ಎಂದರೆ?
ಕರ್ನಾಟಕ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರ್ ಕಾಲೇಜುಗಳ ಸಂಘ (ಕಾಮೆಡ್-ಕೆ),
ರಾಜ್ಯದಲ್ಲಿರುವ 150 ಕ್ಕೂ ಹೆಚ್ಚಿನ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕರ್ನಾಟಕ ಖಾಸಗಿ ವೈದ್ಯಕೀಯ, ದಂತವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಸಂಘ (ಕಾಮೆಡ್-ಕೆ) ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತದೆ.

ಕರ್ನಾಟಕದಲ್ಲಿರುವ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ ಶಿಕ್ಷಣ ತೆಗೆದುಕೊಳ್ಳುವವರಿಗಾಗಿ ಕಾಮೆಡ್ ಕೆ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಸುಮಾರು 150 ಕಾಲೇಜುಗಳ 20,000 ಕ್ಕೂ ಅಧಿಕ ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು.
ಈ ಹಿಂದೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೂ ಇದೇ ಸಂದರ್ಭದಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತಿತ್ತು. ಆದರೆ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಕಡ್ಡಾಯ ಮಾಡಿರುವುದರಿಂದ ಕಾಮೆಡ್-ಕೆ ಪರೀಕ್ಷೆ ನಡೆಸುತ್ತಿಲ್ಲ. ಕಾಮೆಡ್-ಕೆ ಪರೀಕ್ಷೆ ಸಂಪೂರ್ಣ ಕಂಪ್ಯೂಟರೀಕೃತವಾಗಿ ನಡೆಯುತ್ತದೆ. ದೇಶದಾದ್ಯಂತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಆಯಾ ರಾಜ್ಯದ ವಿದ್ಯಾರ್ಥಿಗಳು ಅಲ್ಲಿಯೇ ಪರೀಕ್ಷೆ ಬರೆಯಬಹುದು. ವಿವರಗಳಿಗೆ ವೆಬ್‌ಸೈಟ್ www.comedk.org ವೀಕ್ಷಿಸಿ.
ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಅರ್ಹತೆ:
ಭಾರತೀಯ ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಹರಾಗಿರುತ್ತಾರೆ
ಇಂಜಿನಿಯರಿಂಗ್ ಬಯಸುವವರು:
1. ರಾಜ್ಯ ಅಥವಾ ಕೇಂದ್ರ ಶಿಕ್ಷಣ ಪ್ರಾಧಿಕಾರದಿಂದ ಮಾನ್ಯತೆ ಪಡೆದ ಪಿಯುಸಿ ಅಥವಾ ಅದಕ್ಕೆ ಸಮಾನ ಶಿಕ್ಷಣ ಪಡೆದವರು ಅರ್ಹರಾಗಿರುತ್ತಾರೆ. ಹನ್ನೆರಡನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕು.
2.ಹನ್ನೆರಡನೇ ತರಗತಿಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ.45 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಎಸ್.ಸಿ/ಎಸ್.ಟಿ/ಒಬಿಸಿ ಗೆ ಒಳಪಡುವವರು ಶೇ.40 ಅಂಕಗಳನ್ನು ಪಡೆದಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯಗಳ ಅಂಕಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು.
3.ಡಿಪ್ಲೋಮ ಅಭ್ಯರ್ಥಿಗಳು ಯಾವುದೇ ರೀತಿಯ ಪ್ರವೇಶ ಇರುವುದಿಲ್ಲ.
ವಾಸ್ತುಶಿಲ್ಪಶಾಸ್ತ್ರ ಕೋರ್ಸು ಬಯಸುವವರು:
1. ರಾಜ್ಯ ಅಥವಾ ಕೇಂದ್ರ ಶಿಕ್ಷಣ ಪ್ರಾಧಿಕಾರದಿಂದ ಮಾನ್ಯತೆ ಪಡೆದ ಪಿಯುಸಿ ಅಥವಾ ಅದಕ್ಕೆ ಸಮಾನ ಶಿಕ್ಷಣ ಪಡೆದವರು ಅರ್ಹರಾಗಿರುತ್ತಾರೆ. ಹನ್ನೆರಡನೇ ತರಗತಿಯಲ್ಲಿ ಗಣಿತ ವಿಷಯ ಕಡ್ಡಾಯವಾಗಿ ಓದಿರಬೇಕು ಅಥವಾ ಡಿಪ್ಲೋಮ ಪದವಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನೂ ಪಡೆದಿರಬೇಕು. (ಎಸ್.ಸಿ/ಎಸ್.ಟಿ/ಒಬಿಸಿ ಗೆ ಒಳಪಡುವವರು ಶೇ.45)
2.ಸಾಮಾನ್ಯ ಮತ್ತು ಎಸ್.ಸಿ/ಎಸ್.ಟಿ/ಒಬಿಸಿ ಗೆ ಒಳಪಡುವ ಅಭ್ಯರ್ಥಿಗಳು ನವದೆಹಲಿಯ ಆರ್ಕಿಟೆಕ್ಚರ್ ಮಂಡಳಿಯಿಂದ ಆಯೋಜಿಸುವ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ (NATA) ದಲ್ಲಿ 200 ಕ್ಕೆ ಕನಿಷ್ಠ 80 ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿರಬೇಕಾಗುತ್ತದೆ.
3. ವಾಸ್ತುಶಿಲ್ಪಶಾಸ್ತ್ರ ಕೋರ್ಸು ಸೇರ ಬಯಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪ್ರವೇಶ ಪರೀಕ್ಷೆಗಳು ಇರುವುದಿಲ್ಲ.
4. ವಾಸ್ತುಶಿಲ್ಪಶಾಸ್ತ್ರ ಕೋರ್ಸು ಸೇರ ಬಯಸುವವರು ವೆಬ್ಸೈಟ್ ನಲ್ಲಿ ಲಭ್ಯವಿರುವ ಪ್ರತ್ಯೇಕ ಫಾರ್ಮ್ ತುಂಬಬೇಕು.
ಸೂಚನೆ:
1. ದಾಖಲಾತಿಗೆ ಅರ್ಹರಾದ ಅಭ್ಯರ್ಥಿಗಳಿಗಷ್ಟೇ ರ್ಯಾಂಕ್ ಕಾರ್ಡ್ ನೀಡಲಾಗುವುದು
2. ಕೋರ್ಸುಗಳು ಎಐಸಿಟಿಇ/ ವಿಟಿಯು ನಿಯಮಾನುಸಾರ ಇರುವುದು.
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ www.comedk.org ವೀಕ್ಷಿಸಿ


Click it and Unblock the Notifications











