ಕಾನೂನು ಅಧ್ಯಯನಕ್ಕಾಗಿ ನಡೆಯುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್)ಗೆ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ.
ದೇಶದ ಪ್ರತಿಷ್ಠಿತ 19 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್‌ಎಲ್‌ಯು) 5 ವರ್ಷದ ಇಂಟಿಗ್ರೇಟೆಡ್ ಕಾನೂನು ಪದವಿ ಮತ್ತು ಸ್ನಾತಕೋತ್ತರ ಪದವಿ (ಎಲ್‌ಎಲ್‌ಎಂ) ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ವಿದ್ಯಾರ್ಹತೆ
ಯು ಜಿ ಕೋರ್ಸ್ ಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳು ಹನ್ನೆರಡನೇ ತರಗತಿ ಉತ್ತೀರ್ಣರಾಗಿರಬೇಕು.
ಪಿ ಜಿ ಕೋರ್ಸಿಗೆ ಅಭ್ಯರ್ಥಿಗಳು ಎಲ್ ಎಲ್ ಬಿ/ಐದು ವರ್ಷದ ಇಂಟಿಗ್ರೇಟೆಡ್ ಎಲ್ ಎಲ್ ಬಿ (ಹಾನರ್ಸ್) ಅಥವಾ ತತ್ಸಮಾನ ವಿದ್ಯಾರ್ಹತೆ ಒಂದಿರಬೇಕು.
ಕ್ಲಾಟ್ ಪರೀಕ್ಷೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ.
ದೇಶದ ಬಹುಮುಖ್ಯವಾದ 7 ಕಾನೂನು ವಿವಿಗಳು ಈ ಪರೀಕ್ಷೆಯನ್ನು ಜಂಟಿಯಾಗಿ ನಡೆಸುತ್ತಿದೆ. 2008ರ ಮೇ 11ರಂದು ಮೊದಲ ಬಾರಿಗೆ ಈ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.
ಪರೀಕ್ಷಾ ವಿವರ
ಎರಡು ಗಂಟೆಗಳ ಪ್ರವೇಶ ಪರೀಕ್ಷೆಯಲ್ಲಿ ಅಬ್ಜಕ್ಟೀವ್ ಟೈಪ್ ಮಾದರಿಯ ಪ್ರಶ್ನೆಗಳು ಇರುತ್ತದೆ. ಆಂಗ್ಲ, ಜನರಲ್ ನಾಲೆಜ್, ಗಣಿತ, ಕಾನೂನು, ಕಾನೂನಿನ ಸಮಸ್ಯೆಗಳು ಇತ್ಯಾದಿಗಳ ವಿಚಾರದಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಈ ಪರೀಕ್ಷೆಯನ್ನು ಸಾಮಾನ್ಯವಾಗಿ ಪ್ರತಿ ವರ್ಷದ ಮೇ ತಿಂಗಳಲ್ಲಿ ನಡೆಸಲಾಗುತ್ತಿದೆ. ವಿವಿಧ ರೀತಿಯ ಕಾನೂನು ಪರೀಕ್ಷೆಗಳನ್ನು ಎದುರಿಸುವ ಬದಲಾಗಿ ಎಲ್ಲಾ ಕಡೆನೂ ಒಂದೇ ಪ್ರವೇಶಕ್ಕಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-03-2018
- ಅರ್ಜಿಗಳನ್ನು ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ: 12-05-2018
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31-03-2018
- ಪ್ರವೇಶ ಪತ್ರ ಪಡೆಯಲು ಕೊನೆಯ ದಿನಾಂಕ: 12-05-2018
- ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ:13-05-2018
ಸೀಟು ಹಂಚಿಕೆ
ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳ ಸೀಟು ಹಂಚಿಕೆ ನಡೆಯುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಮೇಲೆ ತಮ್ಮದೇ ಆದ ಕಾನೂನು ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











