CSIR UGC NET June 2022 : ಜೂನ್ ಪರೀಕ್ಷೆಗೆ ಅರ್ಜಿ ಆಹ್ವಾನ..ಅರ್ಜಿ ಸಲ್ಲಿಕೆ ಅವಧಿ ಆ.17ರ ವರೆಗೆ ವಿಸ್ತರಣೆ

ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ (CSIR) ಎನ್ಇಟಿ ಜೂನ್ 2022ರ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟ ಮಾಡಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ.

ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಜುಲೈ 11,2022 ರಿಂದ ಆಗಸ್ಟ್ 10,2022ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದ್ದು, ಆಗಸ್ಟ್ 17,2022ರ ರಾತ್ರಿ 11:50ರೊಳಗೆ ಅರ್ಜಿಯನ್ನು ಹಾಕಬಹುದು. ಪರೀಕ್ಷೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಸಿಎಸ್ಐಆರ್ ಯುಜಿಸಿ ಎನ್ಇಟಿ ಜೂನ್ 2022 ಪರೀಕ್ಷೆಗೆ ಅರ್ಜಿ ಆಹ್ವಾನ

ಭೌತಶಾಸ್ತ್ರ, ಜೀವಶಾಸ್ತ್ರ, ಮ್ಯಾಥಮೆಟಿಕಲ್ ಸೈನ್ಸ್ ವಿಷಯ ಸೇರಿದಂತೆ ವಿವಿಧ ವಿಷಯಗಳಿಗೆ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಹಾಗೂ ಯುಜಿಸಿ ಜಂಟಿಯಾಗಿ ಎನ್ಇಟಿ ಪರೀಕ್ಷೆಯನ್ನು ನಡೆಸುತ್ತದೆ.

ವಿದ್ಯಾರ್ಹತೆ :

ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಯುಜಿಸಿ ಎನ್ಇಟಿ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರಬೇಕು ಅಥವಾ ಬಿಇ/ಬಿ.ಟೆಕ್/ಬಿ.ಫಾರ್ಮ/ಎಂಬಿಬಿಎಸ್/ಇಂಟೆಗ್ರೇಟೆಡ್ ಬಿಎಸ್-ಎಂಎಸ್ ಪೂರ್ಣಗೊಳಿಸಿರಬೇಕು.

ವಯೋಮಿತಿ :

ಜುಲೈ 1,2021ರ ಅನ್ವಯ ಜೂನಿಯರ್ ರಿಸರ್ಚ್ ಫೆಲೋಶಿಪ್ ಬಯಸುವವರಿಗೆ ಗರಿಷ್ಠ ವಯೋಮಿತಿ 28 ವರ್ಷ. ಸಹಾಯಕ ಪ್ರಾಧ್ಯಾಪಕ ಬಯಸುವವರಿಗೆ ಗರಿಷ್ಟ ವಯೋಮಿತಿ ಇರುವುದಿಲ್ಲ.

ಪರೀಕ್ಷೆಯ ವಿವರ :

ಪರೀಕ್ಷಾ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಪರೀಕ್ಷೆಯ
ಅಂಕಗಳು: ಒಟ್ಟು 200
ಪತ್ರಿಕೆ: 2 ಪ್ರಶ್ನೆ ಪತ್ರಿಕೆಗಳು
ಸಮಯ: ಒಟ್ಟು 3 ಗಂಟೆಗಳ ಅವಧಿ

ಸಿಎಸ್ಐಆರ್ ಎನ್ಇಟಿ (ನೆಟ್) ಜೂನ್ 2022 ಪರೀಕ್ಷೆಯ ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಜುಲೈ 11,2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 1೭,2022ರ ಸಂಜೆ 5 ಗಂಟೆ
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಆಗಸ್ಟ್ 1೭,2022 (ರಾತ್ರಿ 11:50ರೊಳಗೆ)
ಅರ್ಜಿ ತಿದ್ದುಪಡಿಗೆ ಅವಕಾಶ : ಆಗಸ್ಟ್ 19,2022 ರಿಂದ ಆಗಸ್ಟ್ 23,2022
ಪ್ರವೇಶ ಪತ್ರ ಡೌನ್ಲೋಡ್ ದಿನಾಂಕ : ಅತೀ ಶೀಘ್ರದಲ್ಲಿ ತಿಳಿಸಲಾಗುವುದು
ಪರೀಕ್ಷೆ ದಿನಾಂಕ : ಅತೀ ಶೀಘ್ರದಲ್ಲಿ ತಿಳಿಸಲಾಗುವುದು
ಫಲಿತಾಂಶ ದಿನಾಂಕ : ಶೀಘ್ರದಲ್ಲಿ ತಿಳಿಸಲಾಗುವುದು

ಅರ್ಜಿ ಶುಲ್ಕ :

ಸಾಮಾನ್ಯ /ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 1000/-ರೂ
ಓಬಿಸಿ ಅಭ್ಯರ್ಥಿಗಳಿಗೆ ರೂ.500/-ರೂ ಮತ್ತು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ/ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳು 250/-ರೂ ಅನ್ನು
ಆನ್‌ಲೈನ್ ಮೂಲಕ ಆಗಸ್ಟ್ 17,2022ರೊಳಗೆ ಪಾವತಿಸಬೇಕಿರುತ್ತದೆ. ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಸಿಎಸ್‌ಐಆರ್ ಯುಜಿಸಿ ಎನ್‌ಇಟಿ ಜೂನ್ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ? :

ಸ್ಟೆಪ್ 1: ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://csirnet.nta.nic.in/webinfo/public/home.aspx ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್‌ ನಲ್ಲಿ ಆನ್ಲೈನ್ ಅರ್ಜಿ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ಕೇಳಲಾಗಿರುವ ಮಾಹಿತಿ ಭರ್ತಿ ಮಾಡಿ

ಸ್ಟೆಪ್ 4: ನಂತರ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 5: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
CSIR UGC NET june 2022 exam notification has been released, Candidates can apply through online before august 17.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+