GATE Application Form Correction 2022 : ಗೇಟ್ ಪರೀಕ್ಷೆ ಅರ್ಜಿ ತಿದ್ದುಪಡಿಗೆ ಅವಕಾಶ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಖರಗ್‌ಪುರ ಎಂಜಿನಿಯರಿಂಗ್‌ನಲ್ಲಿ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ (ಗೇಟ್ 2022) ಪರೀಕ್ಷೆಯ ಅರ್ಜಿ ನಮೂನೆ ತಿದ್ದುಪಡಿಗೆ ಅವಕಾಶ ನೀಡಿದೆ. ಈ ಹಿಂದೆ GATE 2022 ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇದೀಗ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗ, ಪತ್ರಿಕೆ ಮತ್ತು ಪರೀಕ್ಷಾ ನಗರವನ್ನು ಬದಲಾಯಿಸಬಹುದು ಅಥವಾ ತಿದ್ದುಪಡಿ ಮಾಡಬಹುದು. ಅರ್ಜಿ ತಿದ್ದುಪಡಿಗೆ ನವೆಂಬರ್ 12ರ ವರೆಗೆ ಅವಕಾಶ ನೀಡಲಾಗಿದೆ.

ಗೇಟ್ ಪರೀಕ್ಷಾ ಅರ್ಜಿ ತಿದ್ದುಪಡಿಗೆ ಅವಕಾಶ

ಗೇಟ್ ನೋಂದಣಿ ಪ್ರಕ್ರಿಯೆಯು ಅಕ್ಟೋಬರ್ 7 ರಂದು ಕೊನೆಗೊಂಡಿದ್ದು, ಕೊನೆಯ ದಿನಾಂಕದಂದು ಅಥವಾ ಮೊದಲು ಅರ್ಜಿ ಸಲ್ಲಿಸಿದವರು gate.iitkgp.ac.in ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ತಿದ್ದುಪಡಿ ಮಾಡಬಹುದು. ಅರ್ಜಿ ತಿದ್ದುಪಡಿ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

GATE 2022 ಅರ್ಜಿ ನಮೂನೆ ತಿದ್ದುಪಡಿ ಮಾಡುವುದು ಹೇಗೆ? :

ಸ್ಟೆಪ್ 1: ಗೇಟ್ ಅಧಿಕೃತ ವೆಬ್‌ಸೈಟ್‌ಗೆ https://gate.iitkgp.ac.in/ ಗೆ ಭೇಟಿ ನೀಡಿ

ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ 'ಲಾಗಿನ್' ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3: ಹೊಸ ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಗೇಟ್ ಅರ್ಜಿ ಸಂಖ್ಯೆ ಮತ್ತು ಕೇಳಲಾದ ಇತರ ವಿವರಗಳನ್ನು ನಮೂದಿಸಿ

ಸ್ಟೆಪ್ 4: ನಿಮ್ಮ GATE 2022 ಅರ್ಜಿ ನಮೂನೆಯು ಪರದೆಯ ಮೇಲೆ ಮೂಡುವುದು

ಸ್ಟೆಪ್ 5: ಅಗತ್ಯವಿರುವಂತೆ ಅರ್ಜಿ ನಮೂನೆಯಲ್ಲಿ ಬದಲಾವಣೆ ಅಥವಾ ತಿದ್ದುಪಡಿಗಳನ್ನು ಮಾಡಿ

ಸ್ಟೆಪ್ 6: ಅರ್ಜಿಯನ್ನು ಒಮ್ಮೆ ಪರಿಶೀಲಿಸಿ ಮತ್ತು ಸಲ್ಲಿಸಿ

ಸ್ಟೆಪ್ 7: ನವೀಕರಿಸಿದ GATE 2022 ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಿ

ಗೇಟ್ 2022 ರಲ್ಲಿ "ಜಿಯೋಮ್ಯಾಟಿಕ್ಸ್ ಇಂಜಿನಿಯರಿಂಗ್ (GE)" ಮತ್ತು "ನೇವಲ್ ಆರ್ಕಿಟೆಕ್ಚರ್ ಮತ್ತು ಮೆರೈನ್ ಇಂಜಿನಿಯರಿಂಗ್ (NM)" ಶೀರ್ಷಿಕೆಯ ಎರಡು ಹೊಸ ಪೇಪರ್‌ಗಳನ್ನು ಸಹ ಸೇರಿಸಲಾಗಿದೆ ಮತ್ತು ಈ ವಿಷಯಗಳ ಮಾದರಿ ಪರೀಕ್ಷಾ ಪೇಪರ್‌ಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಗೇಟ್‌ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ (ಐಐಟಿ) ನೀಡುವ ವಿವಿಧ ಸ್ನಾತಕೋತ್ತರ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಾರೆ.

ಗೇಟ್ 2022 ಪರೀಕ್ಷೆ:

ಗೇಟ್ 2022 ಪರೀಕ್ಷೆಯು ಫೆಬ್ರವರಿ 5, 6, 12 ಮತ್ತು 13 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5 ರವರೆಗೆ ನಡೆಯಲಿದೆ ಮತ್ತು ಪರೀಕ್ಷೆಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಖರಗ್‌ಪುರ ಆಯೋಜಿಸುತ್ತಿದೆ. ಪರೀಕ್ಷೆಯ ಪ್ರವೇಶ ಪತ್ರವನ್ನು ಜನವರಿ 3,2022ರಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಗೇಟ್ ಪರೀಕ್ಷೆ :

ಎಂಜಿನಿಯರಿಂಗ್‌ ಅಭ್ಯರ್ಥಿಗಳಿಗೆ ಉದ್ಯೊಗ ಪಡೆಯಲು, ಅಂತೆಯೇ ಉನ್ನತ ಶಿಕ್ಷ ಣಕ್ಕೆ ಇದು ವೇದಿಕೆಯಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರು ಪ್ರತಿಷ್ಠಿತ ಶಿಕ್ಷ ಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷ ಣ ಪಡೆಯಲು ಅವಕಾಶ ಪಡೆಯಲಿದ್ದಾರೆ. ಅಲ್ಲದೆ, ಸರಕಾರದ ವಿವಿಧ ಸ್ಕಾಲರ್‌ಶಿಪ್‌, ಸಹಾಯ ಧನ ಪಡೆಯಲು ಅರ್ಹರಾಗುತ್ತಾರೆ. ಉದ್ಯೊಗ ಆಕಾಂಕ್ಷಿಗಳಿಗೆ ಇದು ಅರ್ಹತಾ ಪರೀಕ್ಷೆಯಾಗಿರುತ್ತದೆ. ತೈಲ ಕಂಪನಿಗಳು, ಬಾಬಾ ಅಟೋಮಿಕ್‌ ರಿಸರ್ಚ್‌ ಸೆಂಟರ್‌, ಬಿಎಚ್‌ಇಎಲ್‌, ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳು 'ಗೇಟ್‌' ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ರ್ಯಾಂಕಿಂಗ್‌ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿವೆ. ಇದೇ ರ್ಯಾಂಕಿಂಗ್‌ ಮೇಲೆ ವೇತನ ನಿಗದಿಪಡಿಸಲಾಗುತ್ತದೆ. ಈ ವರ್ಷ ಗೇಟ್ 2022 ಪರೀಕ್ಷೆಯಲ್ಲಿ ಎರಡು ಹೊಸ ವಿಷಯ ಪತ್ರಿಕೆಗಳನ್ನು ಪರಿಚಯಿಸಲಾಗಿದೆ. ಅವುಗಳೆಂದರೆ ನೌಕಾ ವಾಸ್ತುಶಿಲ್ಪ ಮತ್ತು ಸಾಗರ ಎಂಜಿನಿಯರಿಂಗ್ ಮತ್ತು ಜಿಯೋಮ್ಯಾಟಿಕ್ಸ್ ಎಂಜಿನಿಯರಿಂಗ್. ಜಿಇ ಪೇಪರ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು ಅದು ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡಿದೆ. ಭಾಗ A 55 ಅಂಕಗಳಿಗೆ ಮತ್ತು ಎರಡನೇ ಭಾಗ (ಭಾಗ B) 30 ಅಂಕಗಳನ್ನು ಒಳಗೊಂಡಿರುತ್ತದೆ, ಆದರೆ NM ಒಟ್ಟು 85 ಅಂಕಗಳ ಒಂದು ವಿಭಾಗವನ್ನು ಹೊಂದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ www.gate.iitg.ac.in ಗಮನಿಸಿ.

For Quick Alerts
ALLOW NOTIFICATIONS  
For Daily Alerts

English summary
GATE 2022 application form correction window opened now. Candidates can do correction before November 12.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X