GATE 2023 : ಗೇಟ್ ಪರೀಕ್ಷೆಗೆ ದಂಡ ಶುಲ್ಕ ಸಹಿತ ಅರ್ಜಿ ಸಲ್ಲಿಕೆ ಅವಧಿ ಅ.16ರ ವರೆಗೆ ವಿಸ್ತರಣೆ

ಗೇಟ್ 2023 : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ಕಾನ್ಪುರ್ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್ (GATE 2023) ಪರೀಕ್ಷೆಗೆ ವಿಳಂಬ ಶುಲ್ಕ ಸಹಿತ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಆಸಕ್ತರು ಅಕ್ಟೋಬರ್ 16ರೊಳಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅಧಿಕೃತ ವೆಬ್‌ಸೈಟ್ gate.iitkgp.ac ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ಗೇಟ್ ಪರೀಕ್ಷೆ 2023 ನೊಂದಣಿ :  ದಂಡಶುಲ್ಕ ಸಹಿತ ಅರ್ಜಿ ಸಲ್ಲಿಕೆ ಅವಧಿ ಅ.16ರ ವರೆಗೆ ವಿಸ್ತರಣೆ

ಅಭ್ಯರ್ಥಿಗಳು ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆಗಳು, ಸಂಪರ್ಕ ಸಂಖ್ಯೆ ಮತ್ತು ಇ-ಮೇಲ್ ಐಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಒಳಗೊಂಡಿರುವ ಮೂಲ ವಿವರಗಳನ್ನು ಒದಗಿಸುವ ಮೂಲಕ GATE 2023 ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.

GATE 2023 ನೋಂದಣಿಗೆ ವಿಳಂಬ ಶುಲ್ಕ ಸಹಿತ ಅರ್ಜಿ ಸಲ್ಲಿಸಲು ಅಕ್ಟೋಬರ್ 16,2022 ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು, ಮಾನ್ಯವಾದ ಫೋಟೋ ID ಯಲ್ಲಿರುವಂತೆಯೇ ಇರಬೇಕು ಎಂಬುದನ್ನು ಗಮನಿಸಬೇಕು, ಅಭ್ಯರ್ಥಿಯು ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಯಾವೆಲ್ಲಾ ದಾಖಲೆಗಳು ಅಗತ್ಯ ಎಂಬುದನ್ನು ಇಲ್ಲಿ ತಿಳಿಯಿರಿ.

ಅಗತ್ಯ ದಾಖಲೆಗಳು :

* ಅಭ್ಯರ್ಥಿಯ ಭಾವಚಿತ್ರ
* ಅಭ್ಯರ್ಥಿಯ ಸಹಿ
* ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ)
* PwD ಪ್ರಮಾಣಪತ್ರ (ಅನ್ವಯಿಸಿದರೆ)
* ಮಾನ್ಯವಾದ ಫೋಟೋ ID ಪುರಾವೆ

ಪ್ರಮುಖ ದಿನಾಂಕಗಳು :

ಗೇಟ್ 2023 ಅರ್ಜಿ ನಮೂನೆ ಬಿಡುಗಡೆ ದಿನಾಂಕ : ಆಗಸ್ಟ್ 30, 2022
ವಿಳಂಬ ಶುಲ್ಕವಿಲ್ಲದೆ ನೋಂದಣಿಗೆ ಕೊನೆಯ ದಿನಾಂಕ : ಅಕ್ಟೋಬರ್ 7,2022
ವಿಳಂಬ ಶುಲ್ಕ ಸಹಿತ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ 16,2022
ಗೇಟ್ 2023 ಅರ್ಜಿ ನಮೂನೆಯಲ್ಲಿ ತಿದ್ದುಪಡಿ : 4-11 ನವೆಂಬರ್ 2022
ಗೇಟ್ 2023ರ ಪ್ರವೇಶ ಪತ್ರ ಬಿಡುಗಡೆ ದಿನಾಂಕ : ಜನವರಿ 3 2023
ಗೇಟ್ 2023 ಪರೀಕ್ಷೆಯ ದಿನಾಂಕಗಳು- 2, 4, 11 ಮತ್ತು 12 ಫೆಬ್ರವರಿ 2023
ಅರ್ಜಿ ಪೋರ್ಟಲ್‌ನಲ್ಲಿ ಅಭ್ಯರ್ಥಿಯ ಪ್ರತಿಕ್ರಿಯೆ : ಫೆಬ್ರವರಿ 15 2023
ಉತ್ತರದ ಕೀಗಳು : ಫೆಬ್ರವರಿ 21,2023
GATE 2023 ಫಲಿತಾಂಶ : 2023ರ ಮಾರ್ಚ್ 16
ಸ್ಕೋರ್ ಕಾರ್ಡ್ ಪ್ರಕಟಣೆಯ ದಿನಾಂಕ : ಮಾರ್ಚ್ 21,2023

ಗೇಟ್ 2023 ಅರ್ಹತಾ ಮಾನದಂಡಗಳು :

GATE 2023 ಅನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ (CBT) ಇಪ್ಪತ್ತೊಂಬತ್ತು ವಿಷಯ ಕ್ಷೇತ್ರಗಳಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯು ಎಂಜಿನಿಯರಿಂಗ್, ವಿಜ್ಞಾನ, ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳಲ್ಲಿ ವಿವಿಧ ಪದವಿಪೂರ್ವ ವಿಷಯಗಳ ಸಮಗ್ರ ತಿಳುವಳಿಕೆಯನ್ನು ಪರೀಕ್ಷಿಸುತ್ತದೆ. ಪ್ರಸ್ತುತ ಯಾವುದೇ ಪದವಿಪೂರ್ವ ಪದವಿ ಕಾರ್ಯಕ್ರಮದ 3 ನೇ ಅಥವಾ ಹೆಚ್ಚಿನ ವರ್ಷಗಳಲ್ಲಿ ಅಧ್ಯಯನ ಮಾಡುತ್ತಿರುವ ಅಥವಾ ಎಂಜಿನಿಯರಿಂಗ್ / ತಂತ್ರಜ್ಞಾನ / ವಾಸ್ತುಶಿಲ್ಪದಲ್ಲಿ ಯಾವುದೇ ಸರ್ಕಾರಿ ಪದವಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿ / ವಿಜ್ಞಾನ / ವಾಣಿಜ್ಯ / ಕಲೆಗಳು ಅಭ್ಯರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ಗೇಟ್ 2023 ಅರ್ಜಿ ಶುಲ್ಕ :

ಮಹಿಳಾ ಅಭ್ಯರ್ಥಿಗಳು 850/-ರೂ ಮತ್ತು ದಂಡ ಶುಲ್ಕ 1,350/-ರೂ
SC, ST, PwD ಅಭ್ಯರ್ಥಿಗಳು 850/-ರೂ ಮತ್ತು ದಂಡ ಶುಲ್ಕ 1,350/-ರೂ
ಎಲ್ಲಾ ಇತರ ಅಭ್ಯರ್ಥಿಗಳು 1,700/-ರೂ ಮತ್ತು ದಂಡ ಶುಲ್ಕ 2,200/-ರೂ

ಗೇಟ್ 2023ಗೆ ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿ ತಿಳಿಯಿರಿ :

ಸ್ಟೆಪ್ 1 : ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್-gate.iitkgp.ac.in ಗೆ ಭೇಟಿ ನೀಡಿ.
ಸ್ಟೆಪ್ 2 : ಹೋಂ ಪೇಜ್ ನಲ್ಲಿ ಕೇಳಲಾಗಿರುವ ದಾಖಲಾತಿ ID ಮತ್ತು ಪಾಸ್‌ವರ್ಡ್ ಮತ್ತು ಸಲ್ಲಿಸಿ
ಸ್ಟೆಪ್ 3 : ಅಭ್ಯರ್ಥಿಗಳು ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಸ್ಟೆಪ್ 4 : GATE 2022 ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
ಸ್ಟೆಪ್ 5 : GATE 2022 ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಗಳಿಗಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

For Quick Alerts
ALLOW NOTIFICATIONS  
For Daily Alerts

English summary
GATE 2023 registration with late fee date extended till october 16. Here is the important dates, application fee and application process details here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X