ಐಬಿಪಿಎಸ್ ಪೂರ್ವಭಾವಿ ಪರೀಕ್ಷೆ ಪ್ರವೇಶ ಪತ್ರ ಪ್ರಕಟ

ಐಬಿಪಿಎಸ್ ಕ್ಲರಿಕಲ್ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಕಟಿಸಲಾಗಿದೆ.

ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಮಾರ್ಚ್ ಮೊದಲ ವಾರದಿಂದ ಸಿಬಿಎಸ್‌ಇ ಪರೀಕ್ಷೆಗಳು

ವಿವಿಧ ಬ್ಯಾಂಕುಗಳಲ್ಲಿನ ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಈ ಪರೀಕ್ಷೆಯು ಡಿಸೆಂಬರ್ 2, 3 ,9 ಮತ್ತು 10 ರಂದು ದೇಶದ ವಿವಿಧ ಭಾಗಗಲ್ಲಿ ನಡೆಯಲಿದೆ.

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೇಮಕಾತಿ

ಐಬಿಪಿಎಸ್ ಪರೀಕ್ಷೆ ಪ್ರವೇಶ ಪತ್ರ

 

ಪ್ರವೇಶ ಪತ್ರ ಪಡೆಯುವ ವಿಧಾನ

  • ಐಬಿಪಿಎಸ್ ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
  • download preliminary exam call letter for Common Recruitment Process for Clerical Cadre VII ಲಿಂಕ್ ಮೇಲ್ ಕ್ಲಿಕ್ ಮಾಡಿ
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ
  • ವೆರಿಫಿಕೇಷನ್ ಕೋಡ್ ನಮೂದಿಸಿ
  • ಲಾಗಿನ್ ಆಗಿ ಪ್ರವೇಶ ಪತ್ರ ಪಡೆಯಿರಿ

ಪ್ರವೇಶ ಪತ್ರ ಪಡೆಯಲು ಕೊನೆಯ ದಿನಾಂಕ: 10-12-2017

ಐಬಿಪಿಎಸ್

ಐಬಿಪಿಎಸ್ ರಾಷ್ಟ್ರೀಕೃತ ಬ್ಯಾಂಕುಗಳ ಕ್ಲರಿಕಲ್ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಎರಡು ಹಂತದ ಪರೀಕ್ಷೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್)ಯ ಎರಡು ಹಂತದ ಪರೀಕ್ಷಾ ವಿಧಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಪೂರ್ವಭಾವಿ ಪರೀಕ್ಷೆಯನ್ನು ಕೇವಲ ಅರ್ಹತಾ ಪರೀಕ್ಷೆಯಾಗಿ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಕೇವಲ ನೂರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪ್ರತಿ ಪ್ರಶ್ನೆಗೂ ಒಂದೊಂದು ಅಂಕ ನಿಗದಿಪಡಿಸಿದ್ದು, ಉತ್ತರಿಸಲು ಒಂದು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಅಂದರೆ ನೂರು ಪ್ರಶ್ನೆಗಳಿಗೆ ಉತ್ತರಿಸಲು ಕೇವಲ 60 ನಿಮಿಷ ಸಿಗಲಿದೆ.

ಪೂರ್ವಭಾವಿ ಪರೀಕ್ಷೆಯಲ್ಲಿ ಮೂರು ವಿಭಾಗಗಳಿರಲಿವೆ. ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ 30 ಪ್ರಶ್ನೆಗಳಿದ್ದರೆ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ನ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಈ ಪರೀಕ್ಷೆಯಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅರ್ಹತೆ ಅಂಕ ಗಳಿಸಿದವರು ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ.

ಮುಖ್ಯ ಪರೀಕ್ಷೆಯು ಒಟ್ಟು 200 ಅಂಕಗಳಿಗೆ ನಡೆಯಲಿದ್ದು, ಎರಡು ಗಂಟೆ ಕಾಲಾವಕಾಶ ನಿಡಲಾಗಿರುತ್ತದೆ. ಈ ಪರೀಕ್ಷೆಯಲ್ಲಿ ಒಟ್ಟು ಐದು ವಿಭಾಗಗಳಿರಲಿವೆ. ರೀಸನಿಂಗ್ ಪೇಪರ್‌ಗೆ -50, ಇಂಗ್ಲಿಷ್ ಭಾಷೆಗೆ- 40, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ಗೆ-50, ಜನರಲ್ ಅವೇರ್‌ನೆಸ್‌ಗೆ-40 ಹಾಗೂ ಕಂಪ್ಯೂಟರ್ ನಾಲೆಡ್ಜ್‌ಗೆ-20 ಅಂಕ ನಿಗದಿಪಡಿಸಲಾಗಿರುತ್ತದೆ.

 

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
IBPS Clerk Admit Card for Prelims examination 2017 has been released by IBPS. Candidates can download the admit card on its official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X