ಐಬಿಪಿಎಸ್ ಪ್ರೊಬೇಷನರಿ ಆಫಿಸರ್ಸ್ (ಪಿಒ) ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಕಟಿಸಲಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ವಿವಿಧ ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಆಫೀಸರ್ಸ್ ನೇಮಕಾತಿಗಾಗಿ ನಡೆಯುವ ಈ ಪರೀಕ್ಷೆಯು ಅಕ್ಟೋಬರ್ 7, 8 ,14 ಮತ್ತು 15 ರಂದು ದೇಶದ ವಿವಿಧ ಭಾಗಗಲ್ಲಿ ನಡೆಯಲಿದೆ

ಪ್ರವೇಶ ಪತ್ರ ಪಡೆಯುವ ವಿಧಾನ
- ಐಬಿಪಿಎಸ್ ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
- download preliminary exam call letter for Common Recruitment Process for PO/MT VII ಲಿಂಕ್ ಮೇಲ್ ಕ್ಲಿಕ್ ಮಾಡಿ
- ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ
- ವೆರಿಫಿಕೇಷನ್ ಕೋಡ್ ನಮೂದಿಸಿ ಲಾಗಿನ್ ಆಗಿ
- ಪ್ರವೇಶ ಪತ್ರ ಪಡೆಯಿರಿ
ಪ್ರವೇಶ ಪತ್ರ ಪಡೆಯಲು ಕೊನೆಯ ದಿನಾಂಕ: 14-10-2017
ಐಬಿಪಿಎಸ್
ಐಬಿಪಿಎಸ್ ರಾಷ್ಟ್ರೀಕೃತ ಬ್ಯಾಂಕುಗಳ ಪ್ರೊಬೆಷನರಿ ಆಫೀಸರ್ ಮತ್ತು ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಎರಡು ಹಂತದ ಪರೀಕ್ಷೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್)ಯ ಎರಡು ಹಂತದ ಪರೀಕ್ಷಾ ವಿಧಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಪೂರ್ವಭಾವಿ ಪರೀಕ್ಷೆಯನ್ನು ಕೇವಲ ಅರ್ಹತಾ ಪರೀಕ್ಷೆಯಾಗಿ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಕೇವಲ ನೂರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪ್ರತಿ ಪ್ರಶ್ನೆಗೂ ಒಂದೊಂದು ಅಂಕ ನಿಗದಿಪಡಿಸಿದ್ದು, ಉತ್ತರಿಸಲು ಒಂದು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಅಂದರೆ ನೂರು ಪ್ರಶ್ನೆಗಳಿಗೆ ಉತ್ತರಿಸಲು ಕೇವಲ 60 ನಿಮಿಷ ಸಿಗಲಿದೆ.
ಪೂರ್ವಭಾವಿ ಪರೀಕ್ಷೆಯಲ್ಲಿ ಮೂರು ವಿಭಾಗಗಳಿರಲಿವೆ. ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ 30 ಪ್ರಶ್ನೆಗಳಿದ್ದರೆ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ನ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಈ ಪರೀಕ್ಷೆಯಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅರ್ಹತೆ ಅಂಕ ಗಳಿಸಿದವರು ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ.
ಮುಖ್ಯ ಪರೀಕ್ಷೆಯು ಒಟ್ಟು 200 ಅಂಕಗಳಿಗೆ ನಡೆಯಲಿದ್ದು, ಎರಡು ಗಂಟೆ ಕಾಲಾವಕಾಶ ನಿಡಲಾಗಿರುತ್ತದೆ. ಈ ಪರೀಕ್ಷೆಯಲ್ಲಿ ಒಟ್ಟು ಐದು ವಿಭಾಗಗಳಿರಲಿವೆ. ರೀಸನಿಂಗ್ ಪೇಪರ್‌ಗೆ -50, ಇಂಗ್ಲಿಷ್ ಭಾಷೆಗೆ- 40, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ಗೆ-50, ಜನರಲ್ ಅವೇರ್‌ನೆಸ್‌ಗೆ-40 ಹಾಗೂ ಕಂಪ್ಯೂಟರ್ ನಾಲೆಡ್ಜ್‌ಗೆ-20 ಅಂಕ ನಿಗದಿಪಡಿಸಲಾಗಿರುತ್ತದೆ.
ಇದನ್ನು ಗಮನಿಸಿ ಐಬಿಪಿಎಸ್: ಆಗಸ್ಟ್ 16 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ


Click it and Unblock the Notifications











