ಐಬಿಪಿಎಸ್ ಪೂರ್ವಭಾವಿ ಪರೀಕ್ಷೆ ಪ್ರವೇಶ ಪತ್ರ ಡೌನ್ಲೋಡ್ ಗೆ ಲಭ್ಯ

ಐಬಿಪಿಎಸ್ ಆರ್ ಆರ್ ಬಿ ನಾಲ್ಕರ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಕಟಿಸಲಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಡೌನ್ಲೋಡ್ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಐಬಿಪಿಎಸ್ ಆರ್ ಆರ್ ಬಿ ನಾಲ್ಕರ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಕಟಿಸಲಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಡೌನ್ಲೋಡ್ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಐಬಿಪಿಎಸ್ ಪೂರ್ವಭಾವಿ ಪರೀಕ್ಷೆಯು ಸೆಪ್ಟೆಂಬರ್ 9, 10 ಮತ್ತು 16 ರಂದು ದೇಶದ ವಿವಿಧ ಭಾಗಗಲ್ಲಿ ನಡೆಯಲಿದೆ.

ಐಬಿಪಿಎಸ್ ಪೂರ್ವಭಾವಿ ಪರೀಕ್ಷೆ

ಪ್ರವೇಶ ಪತ್ರ ಪಡೆಯುವ ವಿಧಾನ

  • ಐಬಿಪಿಎಸ್ ನ ಅಧಿಕೃತ ವಿಳಾಸಕ್ಕೆ ಭೇಟಿ ನೀಡಿ
  • download preliminary exam call letter for CRP RRBs-VI officers scale I ಲಿಂಕ್ ಮೇಲ್ ಕ್ಲಿಕ್ ಮಾಡಿ
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ
  • ವೆರಿಫಿಕೇಷನ್ ಕೋಡ್ ನಮೂದಿಸಿ
  • ಲಾಗಿನ್ ಆಗಿ ಪ್ರವೇಶ ಪತ್ರ ಪಡೆಯಿರಿ

ಪ್ರವೇಶ ಪತ್ರ ಪಡೆಯಲು ಕೊನೆಯ ದಿನಾಂಕ: 16-09-2017

ಐಬಿಪಿಎಸ್

ಐಬಿಪಿಎಸ್ ರಾಷ್ಟ್ರೀಕೃತ ಬ್ಯಾಂಕುಗಳ ಪ್ರೊಬೆಷನರಿ ಆಫೀಸರ್ ಮತ್ತು ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಎರಡು ಹಂತದ ಪರೀಕ್ಷೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್)ಯ ಎರಡು ಹಂತದ ಪರೀಕ್ಷಾ ವಿಧಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು.

ಪೂರ್ವಭಾವಿ ಪರೀಕ್ಷೆಯನ್ನು ಕೇವಲ ಅರ್ಹತಾ ಪರೀಕ್ಷೆಯಾಗಿ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಕೇವಲ ನೂರು ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪ್ರತಿ ಪ್ರಶ್ನೆಗೂ ಒಂದೊಂದು ಅಂಕ ನಿಗದಿಪಡಿಸಿದ್ದು, ಉತ್ತರಿಸಲು ಒಂದು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಅಂದರೆ ನೂರು ಪ್ರಶ್ನೆಗಳಿಗೆ ಉತ್ತರಿಸಲು ಕೇವಲ 60 ನಿಮಿಷ ಸಿಗಲಿದೆ.

ಪೂರ್ವಭಾವಿ ಪರೀಕ್ಷೆಯಲ್ಲಿ ಮೂರು ವಿಭಾಗಗಳಿರಲಿವೆ. ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ 30 ಪ್ರಶ್ನೆಗಳಿದ್ದರೆ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ನ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಈ ಪರೀಕ್ಷೆಯಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅರ್ಹತೆ ಅಂಕ ಗಳಿಸಿದವರು ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ

ಮುಖ್ಯ ಪರೀಕ್ಷೆಯು ಒಟ್ಟು 200 ಅಂಕಗಳಿಗೆ ನಡೆಯಲಿದ್ದು, ಎರಡು ಗಂಟೆ ಕಾಲಾವಕಾಶ ನಿಡಲಾಗಿರುತ್ತದೆ. ಈ ಪರೀಕ್ಷೆಯಲ್ಲಿ ಒಟ್ಟು ಐದು ವಿಭಾಗಗಳಿರಲಿವೆ. ರೀಸನಿಂಗ್ ಪೇಪರ್‌ಗೆ -50, ಇಂಗ್ಲಿಷ್ ಭಾಷೆಗೆ- 40, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್‌ಗೆ-50, ಜನರಲ್ ಅವೇರ್‌ನೆಸ್‌ಗೆ-40 ಹಾಗೂ ಕಂಪ್ಯೂಟರ್ ನಾಲೆಡ್ಜ್‌ಗೆ-20 ಅಂಕ ನಿಗದಿಪಡಿಸಲಾಗಿರುತ್ತದೆ.

ಜನರಲ್ ಅವೇರ್‌ನೆಸ್‌ನಲ್ಲಿ ಮುಖ್ಯವಾಗಿ ಬ್ಯಾಂಕ್ ಉದ್ಯಮ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳಲಾಗುತ್ತದೆ. ಈ ಪರೀಕ್ಷೆಯಲ್ಲಿ 200 ಪ್ರಶ್ನೆಗಳಿಗೆ ಉತ್ತರಿಸಲು 120 ನಿಮಿಷ ಕಾಲಾವಕಾಶ ದೊರೆಯಲಿದೆ.

ಇಂಗ್ಲಿಷ್ ಭಾಷೆ ಒಂದನ್ನು ಹೊರತು ಪಡಿಸಿ ಮತ್ತೆಲ್ಲಾ ಪ್ರಶ್ನೆ ಪತ್ರಿಕೆಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಒದಗಿಸಲಾಗುತ್ತದೆ. ಸರಿಯುತ್ತರಕ್ಕೆ ಅಂಕ ನೀಡಿದಂತೆಯೇ ತಪ್ಪು ಉತ್ತರಕ್ಕೆ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. (ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತ ಮಾಡಲಾಗುತ್ತದೆ). ಒಂದು ವೇಳೆ ಉತ್ತರ ಗೊತ್ತಿಲ್ಲದೆ, ಹಾಗೆಯೇ ಬಿಟ್ಟಿದ್ದಲ್ಲಿ, ಯಾವುದೇ ಅಂಕವನ್ನು ಕಳೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
The admit cards for the IBPS RRB VI prelims 2017 has been published by the Institute of Personnel Banking Selection (IBPS). Registered candidates can now download it online.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X