ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಬಾಂಬೆ (ಐಐಟಿ-ಬಿ) ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್ (ಗೇಟ್) 2021ರ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಸ್ನಾತಕೋತ್ತರ ಪದವಿಗಳ ಪ್ರವೇಶಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಗಳು ಫೆಬ್ರವರಿ 5, 2021 ರಿಂದ ಪ್ರಾರಂಭವಾಗಿ ಫೆಬ್ರವರಿ 14,2021ರ ವರೆಗೆ ನಡೆಸಲಾಗುತ್ತದೆ. ಗೇಟ್ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಪರೀಕ್ಷೆಯ ಪ್ರಮುಖ ದಿನಾಂಕಗಳು ಇಲ್ಲಿವೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಸೆಪ್ಟೆಂಬರ್ 14,2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 30,2020
ವಿಳಂಬ ಶುಲ್ಕ ಪಾವತಿಸಿ ಅರ್ಜಿ ಸ್ಲಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 7,2020
ಅರ್ಜಿ ತಿದ್ದುಪಡಿಗೆ ಕೊನೆಯ ದಿನಾಂಕ: ಅಕ್ಟೋಬರ್ 17,2020
ಪ್ರವೇಶ ಪತ್ರ ಬಿಡುಗಡೆ ದಿನಾಂಕ: ಜನವರಿ 8,2021
ಗೇಟ್ ಪರೀಕ್ಷೆ 2021ರ ದಿನಾಂಕ: ಫೆಬ್ರವರಿ 5 ರಿಂದ ಫೆಬ್ರವರಿ 14,2021ರ ವರೆಗೆ
ಗೇಟ್ ಪರೀಕ್ಷೆ 2021ರ ಫಲಿತಾಂಶ ದಿನಾಂಕ: ಮಾರ್ಚ್ 22,2021
ಅಭ್ಯರ್ಥಿಗಳು ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್‌ಸೈಟ್ https://www.gate.iitb.ac.in/ ಗೆ ಭೇಟಿ ನೀಡುತ್ತಿರತಕ್ಕದ್ದು.
ಅಭ್ಯರ್ಥಿಗಳು ಪರೀಕ್ಷಾ ವೇಳಾಪಟ್ಟಿಯ ಅಧಿಕೃತ ಮಾಹಿತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











