ಜೆಇಇ ಅಡ್ವಾನ್ಸ್ಡ್ 2021 ಪರೀಕ್ಷೆ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ವಿವಿಧ ಐಐಟಿಗಳಲ್ಲಿ ಪ್ರವೇಶ ಪಡೆಯಲು ನಡೆಸಲಾಗುವ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯನ್ನು ಅಕ್ಟೋಬರ್ 03, 2021 ರಂದು ನಡೆಸಲು ನಿರ್ಧರಿಸಿರುವುದಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರು ಘೋಷಿಸಿದ್ದಾರೆ.

ಜೆಇಇ ಪರೀಕ್ಷೆಯನ್ನು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಮತ್ತು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ನಡೆಸಲಾಗುತ್ತದೆ ಎಂದು ಧರ್ಮೇಂದ್ರ ಪ್ರಧಾನ್ ರವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ವಿವಿಧ ಐಐಟಿಗಳಲ್ಲಿ ಅಂಡರ್ ಗ್ರಾಜುಯೇಟ್ ಕೋರ್ಸ್‌ಗಳು, ಇಂಟಿಗ್ರೇಟೆಡ್ ಮಾಸ್ಟರ್ ಕೋರ್ಸ್‌ಗಳಿಗೆ (ಇಂಜಿನಿಯರಿಂಗ್, ವಿಜ್ಞಾನ, ಆರ್ಕಿಟೆಕ್ಚರ್) ಪ್ರವೇಶ ಪಡೆಯಲು ಅರ್ಹತಾ ಪರೀಕ್ಷೆಯಾಗಿ ನಡೆಸಲಾಗುತ್ತದೆ. ಜೆಇಇ ಮೇನ್ಸ್‌ನಲ್ಲಿ ಅರ್ಹತೆ ಪಡೆದವರು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆಯಬಹುದು.
For Quick Alerts
For Daily Alerts


Click it and Unblock the Notifications











