JEE Main 2021: ಜೆಇಇ ಏಪ್ರಿಲ್ ಮತ್ತು ಮೇ ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನ

ಜೆಇಇ ಏಪ್ರಿಲ್ ಮತ್ತು ಮೇ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ

ಜೆಇಇ ಏಪ್ರಿಲ್ ಮತ್ತು ಮೇ ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 25,2021 ರಿಂದ ಏಪ್ರಿಲ್ 4,2021ರೊಳಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಜೆಇಇ ಏಪ್ರಿಲ್ ಸೆಷನ್ ನಲ್ಲಿ ಪೇಪರ್ 2 ಪರೀಕ್ಷೆ ಇರುವುದಿಲ್ಲ ಆದ್ದರಿಂದ ಮೇ ಸೆಷನ್ ಪರೀಕ್ಷೆಯಲ್ಲಿ ಪೇಪರ್ 2 (ಬಿ.ಆರ್ಕಿಟೆಕ್ಚರ್ ಅಥವಾ ಬಿ.ಪ್ಲಾನಿಂಗ್) ತೆಗೆದುಕೊಳ್ಳಬಹುದು.

ಮೇ ಸೆಷನ್ ಜೆಇಇ ಪರೀಕ್ಷೆಗೆ ಏಪ್ರಿಲ್ ಸೆಷನ್ ಫಲಿತಾಂಶ ನಂತರ ಮತ್ತೊಮ್ಮೆ ರಿಜಿಸ್ಟ್ರೇಶನ್ ವಿಂಡೋ ತೆರೆಯಲಾಗುತ್ತದೆ. ಜೆಇಇ ಮೇನ್ 2021ರ ರ್ಯಾಂಕಿಂಗ್ ಪಟ್ಟಿಯನ್ನು ಮೇ ಸೆಷನ್ ಪರೀಕ್ಷೆ ಫಲಿತಾಂಶದ ನಂತರ ಬಿಡುಗಡೆ ಮಾಡಲಾಗುತ್ತದೆ. ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯನ್ನು ಜುಲೈ 3,2021ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

ಜೆಇಇ ಮೇನ್ 2021 ಏಪ್ರಿಲ್, ಮೇ ಪರೀಕ್ಷೆ-ಪ್ರಮುಖ ದಿನಾಂಕಗಳು:

ಜೆಇಇ ಮೇನ್ 2021: ಏಪ್ರಿಲ್ ಪರೀಕ್ಷೆಯು ಏಪ್ರಿಲ್ 27, 28, 29 ಮತ್ತು 30ರಂದು ನಡೆಯಲಿದೆ.
ಜೆಇಇ ಮೇನ್ 2021: ಮೇ ಪರೀಕ್ಷೆಯು ಮೇ 24 ರಿಂದ ಮೇ 28,2021ರ ವರೆಗೆ ನಡೆಯಲಿದೆ.

ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ ?:

ಸ್ಟೆಪ್ 1: ಅಭ್ಯರ್ಥಿಗಳು ಜೆಇಇ ಅಧಿಕೃತ ವೆಬ್‌ಸೈಟ್ https://jeemain.nta.nic.in/ ಗೆ ಭೇಟಿ ನೀಡಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ರಿಜಿಸ್ಟ್ರೇಶನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಭ್ಯರ್ಥಿಗಳು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಅರ್ಜಿಯನ್ನು ಭರ್ತಿ ಮಾಡಿ
ಸ್ಟೆಪ್ 5: ನಂತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಶುಲ್ಕ ಪಾವತಿಸಿ
ಸ್ಟೆಪ್ 6: ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
JEE main april and may examination registration begins. Candidates can apply before April 4.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X