2021ರ ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ (ಜೆಇಇ) ಮುಖ್ಯ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು.

ಜೆಇಇ ಮುಖ್ಯ ಪರೀಕ್ಷೆಯನ್ನು ದೇಶದ ಟಾಪ್ ಕಾಲೇಜುಗಳಲ್ಲಿ ಮತ್ತು ಐಐಟಿಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ನಡೆಸಲಾಗತ್ತದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಪ್ರಮುಖ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟ ಮಾಡಿದ್ದು, ಪ್ರಮುಖ ಪರೀಕ್ಷೆಯು ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಮುಖ ದಿನಾಂಕಗಳ ವಿವರವನ್ನು ತಿಳಿಯಲು ಮುಂದೆ ಓದಿ.
ಜೆಇಇ ಪ್ರಮುಖ ಪರೀಕ್ಷೆಗೆ ರಿಜಿಸ್ಟ್ರೇಶನ್ ಮಾಡುವುದು ಹೇಗೆ:
ಸ್ಟೆಪ್ 1: ಜೆಇಇ ಅಧಿಕೃತ ವೆಬ್‌ಸೈಟ್ https://jeemain.nta.nic.in/webinfo2021/Page/Page?PageId=1&LangId=P ಗೆ ವಿಸಿಟ್ ಮಾಡಿ
ಸ್ಟೆಪ್ 2: ಎನ್‌ಟಿಎ ಎಕ್ಸಾಮ್ಸ್ ಅಡಿಯಲ್ಲಿ ಬರುವ ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಜೆಇಇ ಪ್ರಮುಖ ಅರ್ಜಿ ಭರ್ತಿ ಪ್ರಕ್ರಿಯೆ ಪ್ರಾರಂಭಿಸಲು ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಫಿಲ್ ಅಪ್ಲಿಕೇಶನ್ ಫಾರ್ಮ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 6: ಫೋಟೋಗ್ರಾಫ್ ಮತ್ತು ಸಹಿಯನ್ನ ಅಪ್‌ಲೋಡ್ ಮಾಡಿ
ಸ್ಟೆಪ್ 7: ಅರ್ಜಿ ಶುಲ್ಕ ಪಾವತಿಸಿ
ಸ್ಟೆಪ್ 8: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 9: ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ಜೆಇಇ ಪ್ರಮುಖ ಪರೀಕ್ಷೆಯ ಪ್ರಮುಖ ದಿನಾಂಕಗಳು:
ರಿಜಿಸ್ಟ್ರೇಶನ್ ದಿನಾಂಕ: ಡಿಸೆಂಬರ್ 15 ರಿಂದ ಜನವರಿ 15,2021
ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನ: ಜನವರಿ 16,2021
ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿಯ ದಿನಾಂಕ: ಜನವರಿ 18 ರಿಂದ 21,2021ರ ವರೆಗೆ
ಪ್ರವೇಶ ಪತ್ರ ಡೌನ್‌ಲೋಡ್ ದಿನಾಂಕ: 2021ರ ಫೆಬ್ರವರಿ ಮೊದಲ ವಾರ
ಪರೀಕ್ಷೆ ದಿನಾಂಕ: 2021ರ ಫೆಬ್ರವರಿ 22 ರಿಂದ 25,2021ರ ವರೆಗೆ


Click it and Unblock the Notifications