ಜಾಯಿಂಟ್ ಎಂಟ್ರೇಂಸ್ ಎಕ್ಸಾಮಿನೇಶನ್ (ಜೆಇಇ) ಏಪ್ರಿಲ್ ಪ್ರಮುಖ ಪರೀಕ್ಷೆ 2020ರ ಅರ್ಜಿ ಸಲ್ಲಿಕೆಯ ಅವಧಿಯನ್ನು ಮಾರ್ಚ್ 12,2020ರ ವರೆಗೆ ವಿಸ್ತರಿಸಲಾಗಿದೆ.

ಈ ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ವರ್ಷಕ್ಕೆ ಎರಡು ಬಾರಿ ನಡೆಸುತ್ತದೆ. ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ ಏಪ್ರಿಲ್ ಪ್ರಮುಖ ಪರೀಕ್ಷೆಯ ದಿನಾಂಕ ನಿಗಧಿಪಡಿಸಿದ್ದು, ಮಾರ್ಚ್ 7,2020 ರೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾರ್ಚ್ 12,2020ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಅರ್ಜಿ ಶುಲ್ಕವನ್ನು ಮಾರ್ಚ್ 12,2020ರ ಮಧ್ಯಾಹ್ನ 11:50ರೊಳಗೆ ಪಾವತಿಸಬೇಕಿರುತ್ತದೆ.

ಜೆಇಇ ಏಪ್ರಿಲ್ ಪ್ರಮುಖ ಪರೀಕ್ಷೆಯ ಪ್ರಮುಖ ದಿನಾಂಕಗಳು:
ಪರೀಕ್ಷೆ ವಿಧಾನ: ಕಂಪ್ಯೂಟರ್ ಆಧಾರಿತ
ಪರೀಕ್ಷೆ ರಿಜಿಸ್ಟ್ರೇಶನ್ ದಿನಾಂಕ: ಫೆಬ್ರವರಿ 7 ರಿಂದ ಮಾರ್ಚ್ 12,2020
ಪ್ರವೇಶ ಪತ್ರ ಡೌನ್‌ಲೋಡ್: ಮಾರ್ಚ್ 16,2020
ಪರೀಕ್ಷೆ ದಿನಾಂಕ: ಎಪ್ರಿಲ್ 3 ರಿಂದ 9,2020
ಫಲಿತಾಂಶ ದಿನಾಂಕ: ಎಪ್ರಿಲ್ 30,2020
ಜೆಇಇ ಏಪ್ರಿಲ್ ಪ್ರಮುಖ ಪರೀಕ್ಷೆಗೆ ರಿಜಿಸ್ಟ್ರೇಶನ್ ಮಾಡುವುದು ಹೇಗೆ:
ಸ್ಟೆಪ್ 1: ಜೆಇಇ ಅಧಿಕೃತ ವೆಬ್‌ಸೈಟ್ https://jeemain.nta.nic.in/WebInfo/Public/View.aspx?page=1 ಗೆ ವಿಸಿಟ್ ಮಾಡಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ Application Form for JEE (Main) April-2020 ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಹೊಸ ಪುಟಕ್ಕೆ ಹೋಗುವಿರಿ ಅಲ್ಲಿ ನೀವು ಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದಲ್ಲಿ Fresh registration only ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಮತ್ತೊಂದು ಪುಟಕ್ಕೆ ಹೋಗುವಿರಿ ಅಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 5: ಫೋಟೋಗ್ರಾಫ್ ಮತ್ತು ಸಹಿಯನ್ನ ಅಪ್‌ಲೋಡ್ ಮಾಡಿ
ಸ್ಟೆಪ್ 6: ಅರ್ಜಿ ಶುಲ್ಕ ಪಾವತಿಸಿ
ಸ್ಟೆಪ್ 7: ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 8: ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ


Click it and Unblock the Notifications











