ಜೆಇಇ-ಮುಖ್ಯ ಪರೀಕ್ಷೆ 2018: ಏಪ್ರಿಲ್‌ 8ರಂದು ನಡೆಸಲು ತೀರ್ಮಾನ

ಈ ಬಾರಿಯ ಪರೀಕ್ಷೆಯನ್ನು ಐಐಟಿ ಕಾನ್ಪುರ್ ನಡೆಸುತ್ತಿದ್ದು, ದೇಶದ 104 ನಗರಗಳಲ್ಲಿ ಮತ್ತು ಹೊರದೇಶದ 9 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ.ಒಟ್ಟು 24,323 ಸೀಟುಗಳನ್ನು ಈ ಪರೀಕ್ಷೆ ಮೂಲಕ ಹಂಚಿಕೆ ಮಾಡಲಾಗುವುದು.

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2018ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ-ಮುಖ್ಯ)ಯು ಏಪ್ರಿಲ್‌ 8ರಂದು ಮತ್ತು ಜೆಇಇ-ಅಡ್ವಾನ್ಸ್ಡ್‌ 2018ರ ಮೇ 20ರಂದು ನಡೆಸಲು ತೀರ್ಮಾನಿಸಲಾಗಿದೆ.

ಈ ಬಾರಿಯ ಪರೀಕ್ಷೆಯನ್ನು ಐಐಟಿ ಕಾನ್ಪುರ್ ನಡೆಸುತ್ತಿದ್ದು, ದೇಶದ 104 ನಗರಗಳಲ್ಲಿ ಮತ್ತು ಹೊರದೇಶದ 9 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ.

ಒಟ್ಟು 24,323 ಸೀಟುಗಳನ್ನು ಈ ಪರೀಕ್ಷೆ ಮೂಲಕ ಹಂಚಿಕೆ ಮಾಡಲಾಗುವುದು. ಕಳೆದ ವರ್ಷ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಜೆ ಇ ಇ ಪರೀಕ್ಷೆ ತೆಗೆದುಕೊಂಡಿದ್ದರು.

ಜೆಇಇ-ಮುಖ್ಯ ಪರೀಕ್ಷೆ 2018

ಜೆಇಇಗಾಗಿ ಆನ್‌ಲೈನ್‌ ಮೂಲಕ ನಡೆಯುವ ಪ್ರವೇಶ ಪರೀಕ್ಷೆಯ ದಿನಾಂಕ, ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜೆ ಇ ಇ ಪರೀಕ್ಷೆಗಳು

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ), ನವದೆಹಲಿ, ಸಹಯೋಗದೊಂದಿಗೆ ಆಯೋಜಿಸುವ ಜಂಟಿ ಪ್ರವೇಶ ಪರೀಕ್ಷೆ.

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್‌ಐಟಿ) ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಾಗಿ ಸಿಬಿಎಸ್‌ಇಯು ಪ್ರತಿ ವರ್ಷ ಜೆಇಇ (ಮುಖ್ಯ) ನಡೆಸುತ್ತದೆ.

ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಜೆ ಇ ಇ ಪರೀಕ್ಷೆಗಳು ಸಹಕಾರಿಯಾಗಿವೆ. ಜೆ.ಇ.ಇ. ಪರೀಕ್ಷೆಗಳು ರಾಷ್ಟ್ರ ಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ತೆಗೆದುಕೊಳ್ಳಬೇಕಾದಂಥವು.

ಐ.ಐ.ಟಿ., ಎನ್.ಐ.ಟಿ., ಐ.ಎಸ್.ಇ.ಆರ್., ಮುಂತಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನೋ ಅಥವಾ ಅನ್ವಯ ವಿಜ್ಞಾನವನ್ನೋ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು. ಜೆ.ಇ.ಇ. ಆಯ್ಕೆ ಪರೀಕ್ಷೆಗಳು ತಮ್ಮದೇ ಆದ ಪಠ್ಯವನ್ನು ಆಧರಿಸಿರುತ್ತವೆ.

ಈ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದವರು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶಾತಿಗಾಗಿ ಈ ಸಂಸ್ಥೆಗಳ ಜಂಟಿ ಪ್ರವೇಶಾತಿ ಮಂಡಳಿ (ಜೆಎಬಿ) ನಡೆಸುವ ಜೆಇಇ-ಅಡ್ವಾನ್ಸ್ಡ್‌ ಬರೆಯಲು ಅರ್ಹತೆ ಗಳಿಸುತ್ತಾರೆ.

More News  

For Quick Alerts
ALLOW NOTIFICATIONS  
For Daily Alerts

English summary
The CBSE will conduct the Joint Entrance Examination (JEE)- Main on April 8 2018. The examinations will be held in pen and paper mode (offline) on April 8, 2018. IIT-Kanpur will organise the nationwide test in 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+