
2021-22ನೇ ಸಾಲಿನ ಆದರ್ಶ ವಿದ್ಯಾಲಯಗಳಲ್ಲಿನ ೬ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಯು ಜುಲೈ 27,2021ರಂದು ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಹೊಸ ಹಾಲ್ ಟಿಕೆಟ್ ಗಳನ್ನು ಶೀಘ್ರದಲ್ಲೇ ಡೌನ್‌ಲೋಡ್ ಮಾಡಬಹುದು. ವಿದ್ಯಾರ್ಥಿಗಳು ಆಗಾಗ್ಗೆ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುತ್ತಿರತಕ್ಕದ್ದು.
ಆದರ್ಶ ವಿದ್ಯಾಲಯ:
ಕರ್ನಾಟಕ ರಾಜ್ಯದ 74 ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ 74 ಆದರ್ಶ ವಿದ್ಯಾಲಯಗಳನ್ನು ನಡೆಸಲಾಗಗುತ್ತಿದೆ. ಈ ಶಾಲೆಗಳಲ್ಲಿ 6 ರಿಂದ 10ನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿದೆ. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿಗಳ ಸಮಗ್ರ ಹಾಗೂ ಬೌದ್ದಿಕ, ಮಾನಸಿಕ ಬೆಳವಣಿಗೆಗೆ ಪೂರಕವಾಗುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಆದರ್ಶ ವಿದ್ಯಾಲಯಗಳ ಗುರಿಯಾಗಿದೆ.
2021-22ನೇ ಸಾಲಿನಲ್ಲಿ 6ನೇ ತರಗತಿಯ ಮಕ್ಕಳ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಲಾಗುವುದು. ಪ್ರವೇಶ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುತ್ತಿದ್ದು, ಮಕ್ಕಳು ಯಾವುದೇ ಶುಲ್ಕ ಪಾವತಿಸಬೇಕಾಗಿರುವುದಿಲ್ಲ.


Click it and Unblock the Notifications











